ಬೆಂಗಳೂರು / ತುಮಕೂರು : Umesh Katthi : ಸಚಿವ ಉಮೇಶ್ ಕತ್ತಿ ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದು ಸಂಪೂರ್ಣ ಕರುನಾಡಿನಲ್ಲಿ ದುಃಖದ ಛಾಯೆ ಆವರಿಸಿದೆ.ನಿನ್ನೆ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಉಮೇಶ್ ಕತ್ತಿಯನ್ನು ದಾಖಲು ಮಾಡಲಾಗಿತ್ತಾದ್ದರೂ ಸಹ ಕತ್ತಿಯವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಉಮೇಶ್ ಕತ್ತಿ ಪಾರ್ಥಿವ ಶರೀರವನ್ನು ಹೆಚ್ಎಎಲ್ನಲ್ಲಿ ಇರಿಸಲಾಗಿದ್ದು ಈಗಾಗಲೇ ಸಾಕಷ್ಟು ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆಯುತ್ತಿದ್ದಾರೆ. ಹೈದರಾಬಾದ್ನಿಂದ ತರಿಸಲಾದ ವಿಶೇಷ ವಿಮಾನದ ಮೂಲಕ ಕತ್ತಿ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಏರ್ಲಿಫ್ಟ್ ಮಾಡಲಾಗಿದೆ.
ಇನ್ನು ಉಮೇಶ್ ಕತ್ತಿ ನಿಧನದ ವಿಚಾರವಾಗಿ ತುಮಕೂರಿನಲ್ಲಿ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ರಾತ್ರಿ ಉಮೇಶ್ ಕತ್ತಿ ನಿಧನರಾದ ವಾರ್ತೆಯನ್ನು ಕೇಳಿ ಅತ್ಯಂತ ದುಃಖವಾಗಿದೆ. ಅವರು ನನಗೆ ಅತ್ಯಂತ ಆತ್ಮೀಯರು. ಕಳೆದ ಕ್ಯಾಬಿನೇಟ್ಗೆ ಅವರು ಹಾಜರಾಗಿರಲಿಲ್ಲ.ಯಾಕೆ ಅಂತಾ ಸಹ ನಾನು ವಿಚಾರಿಸಿದ್ದೆ. ಕತ್ತಿ ಒಳ್ಳೆಯ ಹಾಸ್ಯ ಪ್ರಜ್ಞೆ ಇದ್ದಂತಹ ವ್ಯಕ್ತಿ. ಅವರ ನಿಧನದ ವಾರ್ತೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ದೇವರು ನೀಡಲಿ. ಉಮೇಶ್ ಕತ್ತಿ ನಿಧನದ ವಾರ್ತೆಯನ್ನು ಕೇಳಿ ತುಮಕೂರಿನಲ್ಲಿ ನಡೆಸಬೇಕಿದ್ದ ಕೆಡಿಪಿ ಸಭೆ ಹಾಗೂ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ಕಾರ್ಯಕ್ರಮವನ್ನು ಮುಂದೂಡಿದ್ದೇವೆ ಎಂದು ಹೇಳಿದರು.
ತುಮಕೂರಿಗೆ ಶೀಘ್ರವೇ ಆಗಮಿಸಿ ಮತ್ತೆ ಮೀಟಿಂಗ್ ನಡೆಸಲಿದ್ದೇನೆ. ಆಗಸ್ಟ್ನಿಂದ ಇಲ್ಲಿಯವರೆಗೆ ಮಳೆ 300 ರಿಂದ 1500 ಪಟ್ಟು ಹೆಚ್ಚಾಗಿದೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾಗೂ ಆಸ್ತಿ ಹಾನಿ ಉಂಟಾಗಿದೆ. ಅಪಾರ ಬೆಳೆ ಹಾಗೂ ಆಸ್ತಿ ಹಾನಿಯಾಗಿದೆ. 10 ಜನರ ಪ್ರಾಣ ಹಾನಿಯಾಗಿದೆ. ಬ್ರಿಡ್ಜ್ ರಸ್ತೆಗಳೆಲ್ಲ ಕೊಚ್ಚಿ ಹೋಗಿದೆ ಎಂದು ಹೇಳಿದರು.ಜನೋತ್ಸವ ರದ್ದು ವದಂತಿ ವಿಚಾರವಾಗಿಯೂ ಇದೆ ವೇಳೆ ಮಾತನಾಡಿದ ಅವರು ಜನೋತ್ಸವ ಆಚರಣೆ ಮಾಡಬೇಕೋ ಬೇಡವೋ ಎಂಬುದರ ಬಗ್ಗೆ ನಮ್ಮ ಪಕ್ಷದ ಹಿರಿಯರು ಕ್ರಮ ಕೈಗೊಳ್ಳಲಿದ್ದಾರೆ. ಅಧಿವೇಶನದ ಒಳಗಾಗಿ ಬಂದು ಮಳೆ ಹಾನಿ ಸ್ಥಳಗಳನ್ನು ವೀಕ್ಷಣೆ ಮಾಡುತ್ತೇವೆ. ಸದ್ಯ 3 ಸಾವಿರ ಎಕರೆ ಬೆಳೆ ಹಾನಿಯಾಗಿದೆ. ಮಳೆ ನಿಂತ ಬಳಿಕ ಉಳಿದ ಹಾನಿ ಬಗ್ಗೆ ಅಧ್ಯಯನ ಮಾಡ್ತೇವೆ ಎಂದು ಹೇಳಿದರು .
ಇದನ್ನು ಓದಿ : Minister Umesh Katti : ಸಚಿವ ಉಮೇಶ್ ಕತ್ತಿ ನಿಧನಕ್ಕೆ ಜಗದೀಶ್ ಶೆಟ್ಟರ್,ಬಸವರಾಜ ಹೊರಟ್ಟಿ ಸಂತಾಪ
Umesh Katthi’s mortal airlifted from Bangalore