Umesh Katthi :ಎಂಟು ಬಾರಿ ಶಾಸಕನಾಗಿ ಆಯ್ಕೆ, ನೇರ ನುಡಿ, ಮುತ್ಸದ್ಧಿ ನಾಯಕ : ಹೀಗಿತ್ತು ಕತ್ತಿ ನಡೆದುಬಂದ ರಾಜಕೀಯ ಹಾದಿ

Umesh Katthis political life : ರಾಜ್ಯ ಕಂಡ ಹಿರಿಯ ರಾಜಕಾರಣಿ, ಬರೋಬ್ಬರಿ 9 ಬಾರಿ ಶಾಸಕನಾಗಿ ಆಯ್ಕೆಯಾದ ಗೆಲುವಿನ ರೂವಾರಿ, ಬಿಜೆಪಿ ನಾಯಕ, ಉತ್ತರ ಕರ್ನಾಟಕದ ಪಾಲಿನ ಮುತ್ಸದ್ಧಿ ರಾಜಕಾರಣಿ ನಿನ್ನೆ ಉಂಟಾದ ಹಠಾತ್​ ಹೃದಯಾಘಾತದಿಂದಾಗಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನ ಡಾಲರ್ಸ್​ ಕಾಲೋನಿ ನಿವಾಸದಲ್ಲಿರುವ ಶೌಚಾಲಯದಲ್ಲಿ ಉಮೇಶ್​ ಕತ್ತಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಎಂ.ಎಸ್​ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಹೃದಯ ಬಡಿತ ನಿಂತು ಹೋಗಿತ್ತು. ನಾನೇ ಈ ರಾಜ್ಯದ ಮುಂದಿನ ಸಿಎಂ ಎಂದು ಪದೇ ಪದೇ ಹೇಳ್ತಿದ್ದ ಉಮೇಶ್​ ಕತ್ತಿ ಇಂದು ಕಣ್ಮುಚ್ಚಿ ಮಲಗಿದ್ದಾರೆ.

ವೈಯಕ್ತಿಕ ಜೀವನ (Umesh Katthis political life) :

ಉಮೇಶ್​ ಕತ್ತಿ ರಾಜಕೀಯ ಕುಟುಂಬದಿಂದಲೇ ಬಂದವರು. ಉಮೇಶ್​ ಕತ್ತಿ ತಂದೆ ವಿಶ್ವನಾಥ್​ ಕತ್ತಿ ಹಾಗೂ ಸಹೋದರ ರಮೇಶ್​ ಕತ್ತಿ ಕೂಡ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿದ್ದವರು 1961ರ ಮಾರ್ಚ್​ 14ರಂದು ಜನಿಸಿದ ಉಮೇಶ್​ ಕತ್ತಿ ತಂದೆಯ ನಿಧನದ ಬಳಿಕ ರಾಜಕೀಯ ಪ್ರವೇಶ ಮಾಡಿದ್ದರು. ಹೇಗೆ ಉಮೇಶ್​ ಕತ್ತಿ ತಮ್ಮ ಅಧಿಕಾರಾವಧಿಯಲ್ಲೇ ನಿಧನರಾದರೋ ಅದೇ ರೀತಿ ವಿಶ್ವನಾಥ್​ ಕತ್ತಿ ಕೂಡ ತಮ್ಮ ಅಧಿಕಾರಾವಧಿಯಲ್ಲೇ ಇಹಲೋಕ ತ್ಯಜಿಸಿದ್ದರು. ವಿಧಾನಸಭೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ವಿಶ್ವನಾಥ್​ ಕತ್ತಿ ನಿಧನರಾಗಿದ್ದರು.

ರಾಜಕೀಯ ಜೀವನ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಉಮೇಶ್​ ಕತ್ತಿ ಕ್ಷೇತ್ರ. ಜನತಾ ಪಕ್ಷದಲ್ಲಿದ್ದ ಉಮೇಶ್​ ಕತ್ತಿ 1985ರಲ್ಲಿ ಮೊಟ್ಟ ಮೊದಲ ಬಾರಿಗೆ ಹುಕ್ಕೇರಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ವಿಧಾನಸಭೆ ಮೆಟ್ಟಿಲು ಏರಿದ್ದರು. ಇದಾದ ಬಳಿಕ 1989ರಲ್ಲಿಯೂ ಜನತಾದಳದಿಂದ ಮತ್ತೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1994ರಲ್ಲಿಯೂ ಚುನಾವಣೆಯನ್ನು ಗೆಲ್ಲುವ ಮೂಲಕ ಹ್ಯಾಟ್ರಿಕ್​ ಗೆಲುವು ತಮ್ಮದಾಗಿಸಿಕೊಂಡಿದ್ದರು. ಆದರೆ 2004ರ ವಿಧಾನಸಭಾ ಚುನಾವಣಾ ಫಲಿತಾಂಶ ಮಾತ್ರ ಕತ್ತಿ ಪಾಲಿಗೆ ಕಹಿ ಎನಿಸಿತ್ತು. ಉಮೇಶ್​ ಕತ್ತಿ ಈ ಚುನಾವಣೆಯಲ್ಲಿ ತಮ್ಮ ಜೀವನದ ಮೊದಲ ಹಾಗೂ ಕೊನೆಯ ಸೋಲನ್ನು ಕಂಡಿದ್ದರು. 2008ರಲ್ಲಿ ಮತ್ತೆ ಜೆಡಿಎಸ್​ ಸೇರಿದ್ದ ಉಮೇಶ್​ ಕತ್ತಿ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು.

ಜೆಡಿಎಸ್​ ತೊರೆದು ಬಿಜೆಪಿ ಸೇರಿದ್ದ ಉಮೇಶ್​ ಕತ್ತಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದಾದ ಬಳಿಕ 2013 ಹಾಗೂ 2018ರಲ್ಲಿಯೂ ಕತ್ತಿ ಗೆಲುವಿನ ನಗೆ ಬೀರಿದ್ದರು. 1996ರಲ್ಲಿ ಸಕ್ಕರೆ ಸಚಿವರಾಗಿದ್ದ ಕತ್ತಿ 2008ರಲ್ಲಿ ತೋಟಗಾರಿಕೆ ಹಾಗೂ ಬಂಧಿಖಾನೆ ಸಚಿವರಾಗಿದ್ದರು. 2010ರಲ್ಲಿ ಕೃಷಿ ಹಾಗೂ 2019ರ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರಾಗಿದ್ದರು. ಇದಾದ ಬಳಿಕ ಕಳೆದ ವರ್ಷ ಇವರ ಹೆಗಲಿಗೆ ಅರಣ್ಯ ಇಲಾಖೆಯ ಜವಾಬ್ದಾರಿಯನ್ನೂ ನೀಡಲಾಗಿತ್ತು.

ತಮ್ಮ ರಾಜಕೀಯ ಜೀವನದಲ್ಲಿ ಒಟ್ಟು 9 ವಿಧಾನಸಭಾ ಚುನಾವಣೆಗಳನ್ನು ಎದುರಿಸಿದ್ದ ಉಮೇಶ್​ ಕತ್ತಿ ಇದರಲ್ಲಿ 8 ಬಾರಿ ಗೆಲುವನ್ನು ದಾಖಲಿಸಿದ್ದರು. ನಾಲ್ಕು ಬಾರಿ ಸಚಿವರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. 1985ರಲ್ಲಿ ರಾಜಕೀಯ ರಂಗಕ್ಕೆ ಪ್ರವೇಶಿಸಿದ್ದ ಉಮೇಶ್​ ಕತ್ತಿ ತಮ್ಮ ಜೀವಿತಾವಧಿಯಲ್ಲಿ ಆರು ಪಕ್ಷಗಳನ್ನು ಬದಲಿಸಿದ್ದಾರೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್​ ಮಂಡಿಸಿದ ಕೀರ್ತಿ ಉಮೇಶ್​ ಕತ್ತಿಗೆ ಸೇರುತ್ತದೆ.

ಇದನ್ನು ಓದಿ : BS Yeddyurappa corruption case : ಚುನಾವಣೆ ಹೊತ್ತಲ್ಲೇ ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ಸಂಕಟ: ಭ್ರಷ್ಟಾಚಾರ ಪ್ರಕರಣ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಇದನ್ನೂ ಓದಿ : Umesh Katthi : ಬೆಂಗಳೂರಿನಿಂದ ಸಚಿವ ಉಮೇಶ್​ ಕತ್ತಿ ಪಾರ್ಥಿವ ಶರೀರ ಏರ್​ಲಿಫ್ಟ್​ : ಜನೋತ್ಸವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಎಂದ ಆರಗ ಜ್ಞಾನೇಂದ್ರ

Umesh Katthis political life

Comments are closed.