ಬೆಂಗಳೂರು : non ISI helmet : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳ ಮೇಲೆ ಸವಾರಿ ಮಾಡುವವರಿಗೆ ನಗರ ಸಂಚಾರ ಆಯುಕ್ತರು ಹೊಸ ಆದೇಶವನ್ನು ಹೊರಡಿಸಿದ್ದಾರೆ. ಬೈಕ್ ಸವಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪೂರ್ತಿಯಾಗಿ ಮುಖವನ್ನು ಮುಚ್ಚದ ಹಾಫ್ ಹೆಲ್ಮೆಟ್ ಹಾಗೂ ಐಎಸ್ಐ ಮಾರ್ಕ್ಗಳನ್ನು ಹೊಂದಿರದ ಹೆಲ್ಮೆಟ್ಗಳನ್ನು ಬಳಕೆ ಮಾಡುವುದಕ್ಕೆ ನಿಷೇಧ ಹೇರಿದ್ದಾರೆ.
ಮೊದಲಿಗೆ 15 ದಿನಗಳ ಐಎಸ್ಐ ಚಿಹ್ನೆಯನ್ನು ಹೊಂದಿರದ ಹೆಲ್ಮೆಟ್ಗಳನ್ನು ಧರಿಸದಂತೆ ಜನರಿಗೆ ಸಂಚಾರಿ ಠಾಣೆ ಪೊಲೀಸರು ಎಚ್ಚರಿಕೆ ನೀಡಲಿದ್ದಾರೆ. ಬಳಿಕ ನಗರದ ಸಂಚಾರ ಆಯುಕ್ತರ ಆದೇಶದಂತೆ ಐಎಸ್ಐ ಮಾರ್ಕ್ ಇಲ್ಲದ ಹಾಗೂ ಹಾಫ್ ಹೆಲ್ಮೆಟ್ಗಳನ್ನು ಧರಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಿದ್ದಾರೆ.
ರಸ್ತೆ ಅಪಘಾತಗಳಲ್ಲಿ ಹಾಫ್ ಹೆಲ್ಮೆಟ್ ಹಾಗೂ ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸುವವರಿಗೆ ಹೆಚ್ಚಾಗಿ ಗಂಭೀರ ಗಾಯಗಳು ಉಂಟಾಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ಸಂಚಾರಿ ಪೊಲೀಸ್ ಠಾಣೆಯಗಳ ಈ ನಿಯಮವನ್ನು ಮೀರಿದರೆ ದ್ವಿಚಕ್ರ ವಾಹನ ಸವಾರರಿಗೆ 500 ರೂಪಾಯಿ ದಂಡ ಬೀಳಲಿದೆ.
ಹಾಫ್ ಹೆಲ್ಮೆಟ್ಗಳಿಂದ ತಲೆಗೆ ಯಾವುದೇ ರಕ್ಷಣೆ ಸಿಗುವುದಿಲ್ಲ. ಇದರಿಂದಾಗಿ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳಿಂದ ಉಂಟಾದ ಅಪಘಾತಗಳಲ್ಲಿ ಸಾಕಷ್ಟು ಮಂದಿ ಸವಾರರು ಜೀವ ತೆತ್ತಿದ್ದಾರೆ. ಈ ಅವಘಡಗಳು ಮತ್ತೆ ಮರುಕಳಿಸಬಾರದು. ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾದರೂ ಸಹ ಸವಾರರ ತಲೆಗೆ ಯಾವುದೇ ರೀತಿಯ ಗಂಭೀರ ಹಾನಿ ಉಂಟಾಗಬಾರದು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ರಾಜಧಾನಿ ಸಂಚಾರಿ ಪೊಲೀಸ್ ಇಲಾಖೆಯು ಹಾಫ್ ಹೆಲ್ಮೆಟ್, ಐಎಸ್ಐ ಗುರುತು ಹೊಂದಿರದ ಹೆಲ್ಮೆಟ್ಗಳಿಗೆ ನಿಷೇಧ ಹೇರಿ ಆದೇಶ ಹೊರಡಿಸಿದೆ.
wearing non isi helmet in bengaluru get ready to pay fine
ಇದನ್ನು ಓದಿ : Vamika’s pics : ವೈರಲ್ ಆಗುತ್ತಿರುವ ವಮಿಕಾಳ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದ ವಿರುಷ್ಕಾ ದಂಪತಿ
ಇದನ್ನೂ ಓದಿ : Rohit Sharma Slim : ವೆಸ್ಟ್ ಇಂಡೀಸ್ ಸರಣಿಗೆ ಮುನ್ನ ಸ್ಲಿಮ್ ಆಂಡ್ ಫಿಟ್ ಆದ ರೋಹಿತ್ ಶರ್ಮಾ