man held for raping his minor daughter : ಮೊಬೈಲ್​ ಫೋನ್​ ಬಳಸಿದ್ದಕ್ಕೆ ಪುತ್ರಿ ಮೇಲೆ ತಂದೆಯಿಂದಲೇ ರೇಪ್​

man held for raping his minor daughter : ತಂದೆ – ತಾಯಿ ಕಣ್ಣಿಗೆ ಕಾಣುವ ದೇವರು ಅಂತಾ ಹೇಳ್ತಾರೆ. ಆದರೆ ಇಲ್ಲೊಬ್ಬ ತಂದೆ ಮಾಡಿರುವ ಕೆಲಸವನ್ನು ನೋಡಿದರೆ ನೀವು ಹಿಡಿಶಾಪ ಹಾಕುವುದು ಗ್ಯಾರಂಟಿ. ಏಕೆಂದರೆ 42 ವರ್ಷದ ಈ ಪಾಪಿ ತಂದೆಯು ತನ್ನ 15 ವರ್ಷದ ಪುತ್ರಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದ ಅಡಿಯಲ್ಲಿ ಜೈಲುಪಾಲಾಗಿದ್ದಾನೆ. ವಿಶಾಖಪಟ್ಟಣಂನ ಈ ಆರೋಪಿಯನ್ನು ಜನವರಿ 23ರವರೆಗೂ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.


ಮಗಳು ಅತಿಯಾಗಿ ಫೋನ್​ ಬಳಕೆ ಮಾಡುತ್ತಾಳೆಂದು ಕೋಪಗೊಂಡಿದ್ದ ತಂದೆಯು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಂದೆಯ ಈ ಕಾಟದಿಂದ ಬೇಸತ್ತಿದ್ದ ಬಾಲಕಿಯು ತನ್ನ ಶಿಕ್ಷಕಿಯ ಬಳಿಕ ತನ್ನ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಶಿಕ್ಷಕರು ಬಾಲಕಿಯ ತಂದೆಯನ್ನು ಶಾಲೆಗೆ ಕರೆಸಿದ್ದಾರೆ, ಹಾಗೂ ತಂದೆಯು ಇಲ್ಲಿ ತನ್ನ ತಪ್ಪಿಗೆ ಕ್ಷಮೆಯಾಚಿಸಿದ್ದ ಎನ್ನಲಾಗಿದೆ. ಆದರೂ ಸಹ ಶಿಕ್ಷಕಿ ಹಾಗೂ ಬಾಲಕಿ ಇಬ್ಬರೂ ಸೇರಿ ಪೊಲೀಸ್​ ಠಾಣೆಗೆ ತೆರಳಿ 42 ವರ್ಷದ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.

ತನಿಖೆಯ ವೇಳೆಯಲ್ಲಿ ಈ ವ್ಯಕ್ತಿಯು 2 ವರ್ಷದ ಹಿಂದೆ ಈತ ಅನಾರೋಗ್ಯಕ್ಕೆ ಒಳಗಾಗಿದ್ದ ಹಾಗೂ ತನ್ನ ಎರಡೂ ಕಿಡ್ನಿಗಳನ್ನು ಕಳೆದುಕೊಂಡಿದ್ದ. ಬಳಿಕ ಈತನ ಪತ್ನಿಯೇ ಈತನಿಗೆ ತನ್ನದೊಂದು ಕಿಡ್ನಿಯನ್ನು ದಾನ ಮಾಡಿದ್ದಳು ಎಂದು ತಿಳಿದು ಬಂದಿದೆ.


ಆದರೆ ಐದು ತಿಂಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಪತ್ನಿಯು ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಳು. ಹೀಗಾಗಿ ತನ್ನ ತವರು ಮನೆಯಲ್ಲಿ ವಾಸವಿದ್ದಳು ಎನ್ನಲಾಗಿದೆ. ಇಲ್ಲಿ ತಂದೆಯ ಜೊತೆಗಿದ್ದ ಪುತ್ರಿಯು ಮನೆಯನ್ನು ನೋಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು ಎನ್ನಲಾಗಿದೆ.


ಆದರೆ ಈಕೆ ತುಂಬಾ ಹೊತ್ತು ಮೊಬೈಲ್​ ಫೋನ್​ ಬಳಕೆ ಮಾಡುವುದು ತಂದೆಗೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಇದರಿಂದ ಕೋಪಗೊಂಡಿದ್ದ ತಂದೆಯು ಕಳೆದ ಕೆಲವು ತಿಂಗಳಿನಿಂದ ಬಾಲಕಿಯ ಮೇಲೆ ನಿರಂತರ ಅತ್ಯಾಚಾರಗೈಯುತ್ತಿದ್ದ ಎನ್ನಲಾಗಿದೆ.


ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ವಿಶಾಖಪಟ್ಟಣದಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಅಡಿಯಲ್ಲಿ ಪೊಲೀಸರು 12 ವರ್ಷದ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ಬಾಲಕಿಯು ಆಟವಾಡುತ್ತಿದ್ದ ವೇಳೆ ಆಕೆಯನ್ನು ಮನೆಗೆ ಕರೆದುಕೊಂಡು ಹೋದ ಬಾಲಕ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.

Vizag man held for raping his minor daughter for spending ‘too much time on phone’

ಇದನ್ನು ಓದಿ : Rohit Sharma Slim : ವೆಸ್ಟ್ ಇಂಡೀಸ್ ಸರಣಿಗೆ ಮುನ್ನ ಸ್ಲಿಮ್‌ ಆಂಡ್‌ ಫಿಟ್‌ ಆದ ರೋಹಿತ್ ಶರ್ಮಾ

ಇದನ್ನೂ ಓದಿ : Vamika’s pics : ವೈರಲ್​ ಆಗುತ್ತಿರುವ ವಮಿಕಾಳ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದ ವಿರುಷ್ಕಾ ದಂಪತಿ

Comments are closed.