ಸೋಮವಾರ, ಏಪ್ರಿಲ್ 28, 2025
HomeNationalಹಳಿತಪ್ಪಿದ ಸೂರ್ಯನಗರಿ ಎಕ್ಸ್‌ಪ್ರೆಸ್‌ : 10 ಮಂದಿಗೆ ಗಾಯ

ಹಳಿತಪ್ಪಿದ ಸೂರ್ಯನಗರಿ ಎಕ್ಸ್‌ಪ್ರೆಸ್‌ : 10 ಮಂದಿಗೆ ಗಾಯ

- Advertisement -

ರಾಜಸ್ಥಾನ : ಬಾಂದ್ರಾ ಟರ್ಮಿನಸ್‌ನಿಂದ ಜೋಧ್‌ಪುರಕ್ಕೆ ಸಂಚರಿಸುತ್ತಿದ್ದ ಸೂರ್ಯನಗರಿ ಎಕ್ಸ್‌ಪ್ರೆಸ್‌ (Suryanagari Express) ಹಳಿತಪ್ಪಿದೆ. ರೈಲಿನ ಒಟ್ಟು ಎಂಟು ಬೋಗಿಗಳು ಜೋಧ್‌ಪುರ ವಿಭಾಗದ ರಾಜಕಿವಾಸ್-ಬೊಮದ್ರಾ ವಿಭಾಗದ ನಡುವೆ ಹಳಿತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಮುಂಜಾನೆ ರಾಜಸ್ಥಾನದಲ್ಲಿ ರೈಲು ಹಳಿತಪ್ಪಿ ಸುಮಾರು 10 ಪ್ರಯಾಣಿಕರು ಗಾಯಗೊಂಡಿದ್ದಾರೆ. ಪಾಲಿನ ರಾಜ್ಕಿವಾಸ್‌ನಲ್ಲಿ ಮುಂಜಾನೆ 3:27 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಾಯುವ್ಯ ರೈಲ್ವೆಯ ಉನ್ನತ ಅಧಿಕಾರಿಗಳು ಜೈಪುರದ ಪ್ರಧಾನ ಕಛೇರಿಯಲ್ಲಿರುವ ನಿಯಂತ್ರಣ ಕೊಠಡಿಯಲ್ಲಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಅಪಘಾತ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಸಿಪಿಆರ್ ವಾಯುವ್ಯ ರೈಲ್ವೆ ತಿಳಿಸಿದ್ದಾರೆ. ರಾಜಸ್ಥಾನದಲ್ಲಿ ರೈಲು ಹಳಿತಪ್ಪಿದ ಘಟನೆಯಿಂದಾಗಿ ಹಲವಾರು ರೈಲುಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಸಹಾಯವಾಣಿಯನ್ನು ತೆರೆಯಲಾಗಿದೆ. ಪ್ರಯಾಣಿಕರ ಬಗ್ಗೆ ವಿಚಾರಿಸಲು ಇಚ್ಛಿಸುವವರು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕು.

ಜೋಧಪುರಕ್ಕೆ –

0291- 2654979(1072)
0291- 2654993(1072)
0291- 2624125
0291- 2431646

ಇದನ್ನೂ ಓದಿ : Gurugram : ತಾಯಿ, ಪತ್ನಿಯ ಚಿಕಿತ್ಸೆಗೆ 24 ಕ್ಷ ರೂಪಾಯಿ ದರೋಡೆ : ಐವರು ಅರೆಸ್ಟ್‌

ಇದನ್ನೂ ಓದಿ : Siddeshwara swamiji health: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ: ಡಾ. ಮಲ್ಲಣ ಮೂಲಿಮನಿ ಹೇಳಿಕೆ

ಪಾಲಿ ಮಾರ್ವಾರ್ಗಾಗಿ –

0293- 2250324
138
1072

“ಮಾರ್ವಾರ್ ಜಂಕ್ಷನ್‌ನಿಂದ ಹೊರಡುವ 5 ನಿಮಿಷಗಳಲ್ಲಿ, ರೈಲಿನೊಳಗೆ ಕಂಪನದ ಶಬ್ದ ಕೇಳಿಸಿತು ಮತ್ತು 2-3 ನಿಮಿಷಗಳ ನಂತರ ರೈಲು ನಿಂತಿತು. ನಾವು ಕೆಳಗಿಳಿದಿದ್ದೇವೆ ಮತ್ತು ಕನಿಷ್ಠ 8 ಸ್ಲೀಪರ್ ಕ್ಲಾಸ್ ಕೋಚ್‌ಗಳು ಹಳಿಗಳಿಂದ ಹೊರಬಂದವು. 15-20 ನಿಮಿಷಗಳಲ್ಲಿ , ಆಂಬ್ಯುಲೆನ್ಸ್‌ ಗಳು ಬಂದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದವು ಎಂದು ಪ್ರಯಾಣಿಕರೊಬ್ಬರು ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್‌ ಪಲ್ಟಿ: ಓರ್ವ ಸಾವು, 43 ಮಂದಿಗೆ ಗಾಯ

ಕೇರಳ: ವಿದ್ಯಾರ್ಥಿಗಳನ್ನು ಪ್ರವಾಸಕ್ಕೆಂದು ಕರೆದೊಯ್ಯುತಿದ್ದ ಬಸ್‌ ಕಮರಿಗೆ ಉರಳಿದ್ದು, ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದಾರೆ ಹಾಗೂ ನಲವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಮುನಿಯಾರ ಬಳಿಯಲ್ಲಿ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಮಿಲ್ಹಾಜ್‌ ಎಂದು ಗುರುತಿಸಲಾಗಿದೆ.

ಪ್ರಾದೇಶಿಕ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆಂದು ಕರೆದೊಯ್ದಿದ್ದ ಬಸ್‌ ಮಲಪ್ಪುರಂನಿಂದ ಹಿಂತಿರುಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದಿದೆ. ಮಧ್ಯರಾತ್ರಿ ಸರಿಸುಮಾರು 1:15ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಚಾಲಕ ನಿದ್ರೆಯ ಮಂಪರಿನಲ್ಲಿದ್ದ ಕಾರಣ ಈ ಅವಘಡ ಸಂಭವಿಸಿರ ಬಹುದು ಎಂದು ಅಂದಾಜಿಸಲಾಗಿದೆ. ಮೃತ ವ್ಯಕ್ತಿ ಮಿಲ್ಹಾಜ್‌ ಅಪಘಾತದ ನಂತರದಲ್ಲಿ ಕಮರಿಗೆ ಉರುಳಿದ್ದ ಬಸ್‌ ಅಡಿಯಲ್ಲಿ ದೀರ್ಘಕಾಲದ ವರೆಗೂ ಸಿಲುಕಿಕೊಂಡಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದರು ಎನ್ನಲಾಗಿದೆ. ಇನ್ನೂ ಅಪಘಾತದಲ್ಲಿ ಗಾಯಗೊಂಡ ನಲವತ್ತಮೂರು ಮಂದಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಅಪಘಾತ ಸಂಭವಿಸಿದ ಬಸ್‌ ನಲ್ಲಿ ಒಟ್ಟು 41 ವಿದ್ಯಾರ್ಥಿಗಳು ಮತ್ತು 3 ಬಸ್ ಸಿಬ್ಬಂದಿಗಳು ಇದ್ದರು ಎಂದು ಎಂದು ವರದಿಗಳು ತಿಳಿಸಿವೆ.

10 injured in Suryanagari Express derail in Rajasthan Pali

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular