Mexican Border Prison : ಮೆಕ್ಸಿಕನ್‌ ಗಡಿ ಕಾರಾಗೃಹದ ಮೇಲೆ ದಾಳಿ : 10 ಭದ್ರತಾ ಸಿಬ್ಬಂದಿ, 4 ಕೈದಿಗಳ ಹತ್ಯೆ


ಮೆಕ್ಸಿಕೊ : ಟೆಕ್ಸಾಸ್‌ನ ಎಲ್ ಪಾಸೊದಿಂದ ಗಡಿ ಆಚೆ ಇರುವ ಸಿಯುಡಾಡ್ ಜುವಾರೆಜ್‌ನಲ್ಲಿರುವ ರಾಜ್ಯ ಕಾರಾಗೃಹದ (Mexican Border Prison) ಮೇಲೆ ಶಸ್ತ್ರಸಜ್ಜಿತ ವಾಹನಗಳಲ್ಲಿ ಬಂದ ದಾಳಿಕೋರರರು ಭಾನುವಾರ (ಜನವರಿ 2) ಮುಂಜಾನೆ ವೇಳೆಯಲ್ಲಿ ದಾಳಿ ನಡೆಸಿದಾಗ ಹತ್ತು ಮಂದಿ ಭದ್ರತಾ ಸಿಬ್ಬಂದಿಗಳು ಮತ್ತು ನಾಲ್ವರು ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಚಿಹುವಾಹುವಾ ರಾಜ್ಯ ಪ್ರಾಸಿಕ್ಯೂಟರ್ ಕಚೇರಿ ಹೇಳಿಕೆಯ ಪ್ರಕಾರ, ಬೆಳಿಗ್ಗೆ 7 ಗಂಟೆಗೆ ವಿವಿಧ ಶಸ್ತ್ರಸಜ್ಜಿತ ವಾಹನಗಳು ಜೈಲಿಗೆ ಬಂದಿದ್ದು, ಹಾಗೇ ಬಂದೂಕುಧಾರಿಗಳು ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಜೊತೆಗೆ ದಾಳಿಕೋರರಿಂದ 13 ಜನರು ಗಾಯಗೊಂಡಿದ್ದು, ಕನಿಷ್ಠ 24 ಕೈದಿಗಳು ತಪ್ಪಿಸಿಕೊಂಡಿದ್ದಾರೆ ಎಂದು ರಾಜ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ನಂತರ ಮೆಕ್ಸಿಕನ್ ಸೈನಿಕರು ಮತ್ತು ರಾಜ್ಯ ಪೊಲೀಸರು ಭಾನುವಾರದ ನಂತರ ಜೈಲಿನ ನಿಯಂತ್ರಣವನ್ನು ಮರಳಿ ಪಡೆದರು. ಅದರ ಜೊತೆಯಲಿ ಸಿಬ್ಬಂದಿ ವರ್ಗದವರೊಂದಿಗೆ ತನಿಖೆ ನಡೆಸುತ್ತಿದ್ದಾರೆ ಎಂದು ರಾಜ್ಯ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದ್ದಾರೆ. ಆಗಸ್ಟ್‌ನಲ್ಲಿ, ಅದೇ ರಾಜ್ಯದ ಜೈಲಿನೊಳಗಿನ ಗಲಭೆಯು 11 ಜನರನ್ನು ಬಲಿತೆಗೆದುಕೊಂಡ ಹಿಂಸಾಚಾರದಲ್ಲಿ ಜುವಾರೆಜ್‌ನ ಬೀದಿಗಳಿಗೆ ಸುದ್ದಿ ಹರಡಿತು.

ಇದನ್ನೂ ಓದಿ : Video viral- 47M views: ಲಂಡನ್‌ ವ್ಯಕ್ತಿಯೋರ್ವನ ಹುಚ್ಚು ಸಾಹಸ : Viral Video ‌ 47 ಮಿಲಿಯನ್ ವೀಕ್ಷಣೆ

ಇದನ್ನೂ ಓದಿ : Human skulls in courier: ಕೊರಿಯರ್‌ ಬಾಕ್ಸ್‌ ನಲ್ಲಿ ಪತ್ತೆಯಾಯ್ತು ಮಾನವನ ನಾಲ್ಕು ತಲೆಬುರುಡೆ

ಇದನ್ನೂ ಓದಿ : Russian Missiles Strike: ಉಕ್ರೇನ್ ಮೇಲೆ ಮತ್ತೆ ಕ್ರೌರ್ಯ ಮೆರೆದ ರಷ್ಯಾ: ಏಕಕಾಲಕ್ಕೆ 120 ಕ್ಷಿಪಣಿಗಳ ದಾಳಿ

ಆ ಸಂದರ್ಭದಲ್ಲಿ, ಜೈಲಿನೊಳಗೆ ಇಬ್ಬರು ಕೈದಿಗಳನ್ನು ಕೊಲೆ ಮಾಡಲಾಯಿತು. ನಂತರ ಅಪರಾಧಿ ಗ್ಯಾಂಗ್ ಸದಸ್ಯರು ಪಟ್ಟಣದಲ್ಲಿ ಗುಂಡು ಹಾರಿಸಲು ಪ್ರಾರಂಭಿಸಿದರು. ರೆಸ್ಟೋರೆಂಟ್‌ನಲ್ಲಿ ಪ್ರಚಾರ ಮಾಡುತ್ತಿದ್ದ ರೇಡಿಯೊ ಸ್ಟೇಷನ್‌ನ ನಾಲ್ವರು ಉದ್ಯೋಗಿಗಳನ್ನು ಕೂಡ ಕೊಲೆ ಮಾಡಿ ಇರುತ್ತಾರೆ. ಮೆಕ್ಸಿಕನ್ ಜೈಲುಗಳಲ್ಲಿ ಹಿಂಸಾಚಾರವು ಆಗಾಗ್ಗೆ ನಡೆಯುತ್ತದೆ. ಅಷ್ಟೇ ಅಲ್ಲದೇ ಅಲ್ಲಿನ ಅಧಿಕಾರಿಗಳು ಹೆಸರಿಗೆ ಮಾತ್ರದ ನಿಯಂತ್ರಣವನ್ನು ನಿರ್ವಹಿಸುತ್ತಾರೆ. ಪ್ರತಿಸ್ಪರ್ಧಿ ಗ್ಯಾಂಗ್‌ಗಳ ಕೈದಿಗಳ ನಡುವೆ ಘರ್ಷಣೆಗಳು ನಿಯಮಿತವಾಗಿ ಹೆಚ್ಚಾಗಿ ಇರುತ್ತದೆ. ಇದು ಜುವಾರೆಜ್‌ನಂತಹ ಸ್ಥಳಗಳಲ್ಲಿ ಡ್ರಗ್ ಕಾರ್ಟೆಲ್‌ಗಳಿಗೆ ಪ್ರಾಕ್ಸಿಗಳಾಗಿ ಕಾರ್ಯನಿರ್ವಹಿಸುತ್ತದೆ.

Attack on Mexican border prison: 10 security guards, 4 inmates killed

Comments are closed.