ಹೈದರಾಬಾದ್ : smoke like KGF’s Yash : ಮೊಟ್ಟ ಮೊದಲ ಬಾರಿಗೆ ಒಂದು ಪ್ಯಾಕ್ ಸಿಗರೇಟ್ ಸೇದಿದ ಹೈದರಬಾದ್ನ 15 ವರ್ಷದ ಬಾಲಕ ತೀವ್ರ ಕೆಮ್ಮು ಹಾಗೂ ಗಂಟಲು ನೋವಿನಿಂದ ಆಸ್ಪತ್ರೆಗೆ ದಾಖಲಾದ ಘಟನೆಯೊಂದು ವರದಿಯಾಗಿದೆ. ವೈದ್ಯರು ಹಾಗೂ ಪೋಷಕರ ಎದುರು ಈ ಬಾಲಕ ತಾನು ಕೆಜಿಎಫ್ 2 ಸಿನಿಮಾದಲ್ಲಿ ರಾಕಿ ಭಾಯ್ ಸಿಗರೇಟ್ ಸೇದಿದ ಸೀನ್ಗಳಿಂದ ಪ್ರೇರಣೆ ಪಡೆದು ಸಿಗರೇಟ್ ಸೇದಲು ಆರಂಭಿಸಿದೆ ಎಂದು ಹೇಳಿದ್ದಾನೆ.
ಹೈದರಾಬಾದ್ನ ಪ್ರಮುಖ ಮಲ್ಟಿ ಸ್ಪೆಷಾಲಿಟಿ ಹೆಲ್ತ್ಕೇರ್ ಪ್ರೊವೈಡರ್ ಆಗಿರುವ ಸೆಂಚುರಿ ಆಸ್ಪತ್ರೆಯ ವೈದ್ಯರು ಕೆಜಿಎಫ್ 2 ಸಿನಿಮಾದಲ್ಲಿ ರಾಕಿ ಭಾಯ್ ಪಾತ್ರದಿಂದ ಪ್ರೇರಣೆ ಪಡೆದು ಸಿಗರೇಟ್ ಸೇದಿ ಅಸ್ವಸ್ಥನಾದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೀಡಿದ್ದಾರೆ. ಒಂದೇ ಸಮನೆ ಬಾಲಕ ಅತಿಯಾಗಿ ಸಿಗರೇಟ್ ಸೇವನೆ ಮಾಡಿದ್ದರಿಂದ ಆತನಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿತ್ತು ಎಂದು ವೈದ್ಯರು ಹೇಳಿದ್ದಾರೆ.
ಹೈದರಾಬಾದ್ನ ರಾಜೇಂದ್ರ ನಗರ ನಿವಾಸಿಯಾಗಿರುವ 15 ವರ್ಷದ ಬಾಲಕ ಎರಡು ದಿನಗಳಲ್ಲಿ ಮೂರು ಬಾರಿ ಕೆಜಿಎಫ್ 2 ಸಿನಿಮಾವನ್ನು ವೀಕ್ಷಣೆ ಮಾಡಿದ್ದ. ಈ ಸಿನಿಮಾದಲ್ಲಿ ನಟ ಯಶ್ ಪಾತ್ರದಿಂದ ಪ್ರೇರಣೆ ಪಡೆದ ಈತ 1 ಪ್ಯಾಕ್ ಸಿಗರೇಟ್ ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋಗಿದ್ದಾನೆ. ಹಾಗೂ ಅದನ್ನು ರಾಕಿ ಭಾಯ್ ಸ್ಟೈಲ್ನಲ್ಲಿ ಸೇದಿದ್ದಾನೆ. ಬಾಲಕನ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದ್ದಂತೆಯೇ ಪೋಷಕರು ಈತನನ್ನು ಸೆಂಚುರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
ಬಾಲಕನ ಕೈ ಬೆರಳುಗಳಲ್ಲಿ ಸಿಗರೇಟ್ ಸೇದಿದ ಗುರುತು ಪತ್ತೆಯಾದ ಬಳಿಕ ಆತನನ್ನು ಕೌನ್ಸೆಲಿಂಗ್ಗೆ ಒಳಪಡಿಸಿದ ವೇಳೆಯಲ್ಲಿ ಬಾಲಕ ತಾನು ಕೆಜಿಎಫ್ 2 ಸಿನಿಮಾದಲ್ಲಿ ರಾಕಿಭಾಯ್ ಪಾತ್ರದಿಂದ ಪ್ರೇರಿತನಾಗಿ ಒಂದು ಪ್ಯಾಕ್ ಸಿಗರೇಟ್ ಸೇದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.
ಈ ಪ್ರಕರಣದ ಕುರಿತು ಮಾತನಾಡಿದ ಸೆಂಚುರಿ ಆಸ್ಪತ್ರೆಯ ಶ್ವಾಸಕೋಶತಜ್ಞ ಡಾ. ರೋಹಿತ್ ರೆಡ್ಡಿ ಪಥೂರಿ, ಹದಿಹರೆಯದ ಮಕ್ಕಳು ರಾಕಿ ಭಾಯ್ನಂತಹ ಪಾತ್ರಗಳಿಂದ ಬಹುಬೇಗ ಪ್ರೇರಣೆ ಪಡೆಯುತ್ತಾರೆ. ಚಲನಚಿತ್ರಗಳು ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ. ಹೀಗಾಗಿ ಚಲನಚಿತ್ರ ತಯಾರಕರು ನೈತಿಕ ಜವಾಬ್ದಾರಿಯನ್ನು ಹೊತ್ತು ಇಂತಹ ದೃಶ್ಯಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು .
ಇದನ್ನು ಓದಿ : IPL 2022 ನಿಂದ RCB Out : ಫೈನಲ್ ಪ್ರವೇಶಿಸಿದ ರಾಜಸ್ಥಾನ್ ರಾಯಲ್ಸ್
ಇದನ್ನೂ ಓದಿ : KL Rahul creates history : IPL 2022ನಿಂದ ಹೊರಬಿದ್ದ ಲಕ್ನೋ : ಇತಿಹಾಸ ಸೃಷ್ಟಿಸಿದ ಕೆ.ಎಲ್.ರಾಹುಲ್
15-year-old boy hospitalised after trying to smoke like KGF’s Yash aka Rocky Bhai