IndiGo Fined Rs 5 Lakh : ವಿಶೇಷ ಚೇತನ ಮಗುವಿಗೆ ಬೋರ್ಡಿಂಗ್​ ನಿರಾಕರಿಸಿದ ಇಂಡಿಗೋ ಸಂಸ್ಥೆಗೆ ದಂಡ

IndiGo Fined Rs 5 Lakh  : ಕೆಲ ದಿನಗಳ ಹಿಂದಷ್ಟೇ ರಾಂಚಿ ವಿಮಾನ ನಿಲ್ದಾಣದಲ್ಲಿ ವಿಶೇಷ ಸಾಮರ್ಥ್ಯವುಳ್ಳ ಮಗುವಿಗೆ ವಿಮಾನ ಏರಲು ನಿರಾಕರಿಸಿದ್ದ ಇಂಡಿಗೋ ವಿಮಾನ ಸಂಸ್ಥೆ 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ದೇಶದ ವಾಯುಯಾನದ ಉನ್ನತ ನಿಯಂತ್ರಕ ನಾಗರಿಕ ವಿಮಾನಯಾನ ನಿರ್ದೇಶನಾಲಯ ಇಂಡಿಗೋ ವಿಮಾನಯಾನ ಸಿಬ್ಬಂದಿ ಕೊರತೆಯಿಂದ ವಿಶೇಷ ಚೇತನ ಮಗುವನ್ನು ನಿರ್ವಹಿಸುವಲ್ಲಿ ಎಡವಿದೆ ಎಂದು ಹೇಳಿದೆ.

ವಿಚಾರಣೆಯ ಸಮಯದಲ್ಲಿ ತಿಳಿದುಬಂದ ವಿಷಯಗಳ ಆಧಾರದ ಮೇಲೆ, ರಾಂಚಿಯಲ್ಲಿ ವಿಶೇಷ ಚೇತನ ಮಗುವನ್ನು ವಿಮಾನ ಹತ್ತಿಸುವ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದೆ. ಡಿಜಿಸಿಎಯಲ್ಲಿನ ಸಕ್ಷಮ ಪ್ರಾಧಿಕಾರವು ಸಂಬಂಧಿತ ಏರ್​ಕ್ರಾಫ್ಟ್​ ನಿಯಮಗಳ ನಿಬಂಧನೆಗಳ ಅಡಿಯಲ್ಲಿ ಏರ್​ಲೈನ್ಸ್​​ಗೆ 5 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲು ನಿರ್ಧರಿಸಿದೆ ಎಂದು ಡಿಸಿಜಿಎ ಹೇಳಿದೆ.
ಈ ಪ್ರಕರಣ ಸಂಬಂಧ ಈ ಹಿಂದೆ ಡಿಜಿಸಿಎ ಇಂಡಿಗೋ ವಿಮಾನಯಾನ ಸಂಸ್ಥೆಗೆ ಶೋಕಾಸ್​ ನೋಟಿಸ್​ ನೀಡಿತ್ತು. ಬೋರ್ಡಿಂಗ್​ ವೇಳೆಯಲ್ಲಿ ವಿಶೇಷ ಚೇತನ ಮಗುವು ಭಯಭೀತವಾಗಿತ್ತು. ಹೀಗಾಗಿ ಮಗುವಿಗೆ ವಿಮಾನವನ್ನು ಏರಲು ನಿರಾಕರಿಸಲಾಗಿದೆ ಎಂದು ಇಂಡಿಗೋ ಏರ್​ಲೈನ್ಸ್​ ಈ ವಿಚಾರವಾಗಿ ಸಮಜಾಯಿಷಿ ನೀಡಿತ್ತು.


ಮೇ 7ರಂದು ಇಂಡಿಗೋ ಮ್ಯಾನೇಜರ್​ ಮಗುವನ್ನು ವಿಮಾನ ಏರಲು ಅನುಮತಿ ನೀಡಿರಲಿಲ್ಲ. ಟ್ವಿಟರ್​ನಲ್ಲಿ ಪ್ರತ್ಯಕ್ಷದರ್ಶಿಯೊಬ್ಬರು ನೀಡಿದ ಮಾಹಿತಿಯ ಪ್ರಕಾರ, ಮಗುವಿಗೆ ಅಪಾಯವಿದೆ ಎಂದು ವಿಮಾನಯಾನ ಸಂಸ್ಥೆಯು ಹೇಳಿದೆ. ಮಗು ಹಾಗೂ ಅವನ ಪೋಷಕರನ್ನು ಅಲ್ಲಿಯೇ ಬಿಟ್ಟು ವಿಮಾನ ಹೈದರಾಬಾದ್​ಗೆ ಹೊರಟಿತ್ತು ಎಂದು ಮಾಹಿತಿ ನೀಡಿದ್ದರು.

ಇದನ್ನು ಓದಿ : KL Rahul creates history : IPL 2022ನಿಂದ ಹೊರಬಿದ್ದ ಲಕ್ನೋ : ಇತಿಹಾಸ ಸೃಷ್ಟಿಸಿದ ಕೆ.ಎಲ್.ರಾಹುಲ್‌

ಇದನ್ನೂ ಓದಿ : acid attack victim : ಆ್ಯಸಿಡ್​ ಸಂತ್ರಸ್ತೆಗೆ 5ನೇ ಶಸ್ತ್ರಚಿಕಿತ್ಸೆ: ಅನಾರೋಗ್ಯಕ್ಕೊಳಗಾದ ಯುವತಿ ಐಸಿಯುಗೆ ಶಿಫ್ಟ್​

IndiGo Fined Rs 5 Lakh For Denying Boy With Special Needs To Board Flight From Ranchi Airport

Comments are closed.