ಮುಂಬೈ : ಬಾಲಕ ನಿತ್ಯವೂ ಟ್ಯೂಷನ್ ಹೇಳಿಸಿಕೊಳ್ಳಲು ಶಿಕ್ಷಕಿಯ ಮನೆಗೆ ಬರುತ್ತಿದ್ದ. ಹೀಗೆ ಬಂದ ಬಾಲಕ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಟ್ಯೂಷನ್ ಶಿಕ್ಷಕಿಯ (Tuition teacher ) ಸ್ನಾನದ ವಿಡಿಯೋವನ್ನು ಸೆರೆ ಹಿಡಿದ ಘಟನೆ ಪುಣೆಯಲ್ಲಿ ನಡೆದಿದೆ. 16 ವರ್ಷದ ಬಾಲಕನ ವಿರುದ್ದ ಇದೀಗ ಪ್ರಕರಣ ದಾಖಲಾಗಿದೆ.

ಬಾಲಕ 10 ವರ್ಷದವನು ಆಗಿದ್ದಾಗಲೇ ಶಿಕ್ಷಕಿಯ ಬಳಿಗೆ ಟ್ಯೂಷನ್ ಹೇಳಿಸಿಕೊಳ್ಳುವುದಕ್ಕೆ ಬರುತ್ತಿದ್ದ. ಮನೆಯಲ್ಲೆಲ್ಲಾ ಓಡಾಡಿಕೊಂಡಿದ್ದ. ಆದರೆ ಶಿಕ್ಷಕಿ ಒಮ್ಮೆ ಸ್ನಾನ ಮಾಡಲು ಬಾತ್ ರೂಮ್‌ಗೆ ತೆರಳಿದ್ದಾರೆ. ಈ ವೇಳೆಯಲ್ಲಿ ಸೋಪ್ ಬಾಕ್ಸ್ ಹಿಂದೆ ಮೊಬೈಲ್ ಕಾಣಿಸಿತ್ತು. ಮೊಬೈಲ್ ತೆಗೆದು ನೋಡಿದಾಗ ಕ್ಯಾಮರಾದಲ್ಲಿ ರೆಕಾರ್ಡ್ ಆಗುತ್ತಿತ್ತು.

ಮೊಬೈಲ್ ಪರಿಶೀಲನೆ ನಡೆಸಿದ್ದ ಶಿಕ್ಷಕಿಯ ಬೆತ್ತಲೆ ಪೋಟೋ, ನಗ್ನ ವಿಡಿಯೋ ಸೆರೆಯಾಗಿತ್ತು. ಇದನ್ನು ನೋಡಿದ ಶಿಕ್ಷಕಿಗೆ ಶಾಕ್ ಎದುರಾಗಿತ್ತು. ಬಾಲಕ ಹಲವು ಸಮಯದಿಂದಲೂ ಶಿಕ್ಷಕಿಯ ಪೋಟೋ ಹಾಗೂ ವಿಡಿಯೋಗಳನ್ನು ಸೆರೆ ಹಿಡಿರುವುದು ಪತ್ತೆಯಾಗಿತ್ತು. ಈ ಕುರಿತು ಶಿಕ್ಷಕಿ ಪುಣೆಯ ಅಲಂಕಾರ್ ಪೊಲೀಸ್ ಠಾಣೆಗೆ ಬಾಲಕನ ವಿರುದ್ದ ದೂರು ನೀಡಿದ್ದಾರೆ. ಪೊಲೀಸರು ಬಾಲಕನ ವಿರುದ್ದ ಐಟಿ ಕಾಯ್ಡೆಯ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ : ಖಾಸಗಿ ಆಸ್ಪತ್ರೆಯಲ್ಲಿ ಗರ್ಭಿಣಿ ಸಾವು, ನೇಣು ಬಿಗಿದು ವೈದ್ಯೆ ಆತ್ಮಹತ್ಯೆ
ಇದನ್ನೂ ಓದಿ : ಕಾಸರಗೋಡಿನಲ್ಲಿ ಗರ್ಭಿಣಿ ಮೇಕೆಯನ್ನು ಅತ್ಯಾಚಾರ ಎಸಗಿ ಕೊಲೆ : ಆರೋಪಿ ಬಂಧನ
16 year Old boy Booked for filming Tuition teacher in bathroom