Summer Special Trains : ಬೇಸಿಗೆಯಲ್ಲಾಗುವ ಜನದಟ್ಟಣೆ ನಿರ್ವಹಿಸಲು 217 ವಿಶೇಷ ರೈಲುಗಳು

ಪ್ರಯಾಣಿಕರ (Passengers) ಅನುಕೂಲಕ್ಕಾಗಿ ಮತ್ತು ಬೇಸಿಗೆಯಲ್ಲಾಗುವ ಜನದಟ್ಟಣೆಯನ್ನು (Rush) ತಪ್ಪಿಸುವ ಸಲುವಾಗಿ 217 ವಿಶೇಷ ರೈಲುಗಳು (Summer Special Trains) ಓಡಲಿವೆ ಎಂದು ರೈಲ್ವೆ ಸಚಿವಾಲಯ (Ministry of Railways) ಏಪ್ರಿಲ್‌ 11 ರಂದು ಸೂಚಿಸಿದೆ. ಅದು ಒಟ್ಟು 4,010 ಟ್ರಿಪ್‌ಗಳನ್ನು ಪೂರ್ಣಗೊಳಿಸಲಿದೆ. ಈ ಸೌಲಭ್ಯವು ಬೇಸಿಗೆಯ ತಿಂಗಳುಗಳಲ್ಲಿ ಮಾತ್ರ ಅನ್ವಯಿಸುತ್ತದೆ. ಈ ವಿಶೇಷ ಬೇಸಿಗೆ ರೈಲುಗಳು ಭಾರತದಾದ್ಯಂತ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುತ್ತವೆ ಎಂದು ಸೂಚಿಸಲಾಗಿದೆ. ಪಾಟ್ನಾ, ಮುಂಬೈ, ಚೆನ್ನೈ ಮತ್ತು ಬೆಂಗಳೂರುಗಳಂತಹ ಜನಪ್ರಿಯ ಪ್ರವಾಸಿ ತಾಣಗಳಿಗೆ ಪ್ರಯಾಣ ಬೆಳೆಸುವವರಿಗೆ ಈ ವಿಶೇಷ ರೈಲು ಅವರ ಪ್ರಯಾಣವನ್ನು ಹೆಚ್ಚು ಸುಲಭಗೊಳಿಸಲಿದೆ.

ನೈಋತ್ಯ ರೈಲ್ವೆಯು 69 ವಿಶೇಷ ರೈಲುಗಳನ್ನು ಓಡಿಸಲಿದ್ದು, ದಕ್ಷಿಣ ಕೇಂದ್ರ ವಿಭಾಗವು ಅಂತಹ 48 ರೈಲುಗಳನ್ನು ಘೋಷಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ನೈಋತ್ಯ ರೈಲ್ವೆ ವಲಯದ ಅಡಿಯಲ್ಲಿ ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣ ರೈಲು ನಿಲ್ದಾಣಗಳು ಸೇರಿವೆ. ಅದೇ ರೀತಿ ಪಶ್ಚಿಮ ರೈಲ್ವೇ 40 ವಿಶೇಷ ರೈಲುಗಳನ್ನು ಪರಿಚಯಿಸಲಿದ್ದು, ದಕ್ಷಿಣ ರೈಲ್ವೆ 20 ರೈಲುಗಳನ್ನು ಓಡಿಸಲಿದೆ.

ಸೆಂಟ್ರಲ್‌ ಮತ್ತು ಈಸ್ಟ್‌ ಸೆಂಟ್ರಲ್‌ ರೈಲ್ವೇ ವಲಯಗಳು ತಲಾ 10 ವಿಶೇಷ ರೈಲುಗಳನ್ನು ಓಡಿಸಲಿದೆ. ಬಿಹಾರವು ಪೂರ್ವ ಮಧ್ಯ ರೈಲ್ವೇ ವಲಯದ ಅಡಿಯಲ್ಲಿ ಬರುತ್ತದೆ. ಬಿಹಾರ ರಾಜ್ಯವು ಪಡೆದಿರುವ ವಿಶೇಷ 10 ರೈಲುಗಳು 296 ಟ್ರಿಪ್‌ಗಳನ್ನು ಪೂರ್ಣಗೊಳಿಸಲಿದೆ. ಪಶ್ಚಿಮ ಬಂಗಾಳ ರಾಜ್ಯವು ಪೂರ್ವ ರೈಲ್ವೇ ವಲಯದ ಅಡಿಯಲ್ಲಿ ಬರಲಿದ್ದು ಅದು 4 ಈ ವಿಶೇಷ ರೈಲುಗಳನ್ನು ಓಡಿಸಲಿದೆ.

ವಾಯುವ್ಯ ರೈಲ್ವೆಯು 16 ಬೇಸಿಗೆ ವಿಶೇಷ ರೈಲುಗಳಿಗೆ ಸೂಚನೆ ನೀಡಿದೆ. ಆದರೆ ಉತ್ತರ ರೈಲ್ವೆಯು ಯಾವುದೇ ವಿಶೇಷ ರೈಲುಗಳನ್ನು ಓಡಿಸುತ್ತಿಲ್ಲ. ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಉತ್ತರಾಖಂಡ ಮತ್ತು ಚಂಡೀಗಢದಲ್ಲಿ ಯಾವುದೇ ವಿಶೇಷ ಬೇಸಿಗೆ ರೈಲುಗಳು ಓಡುವುದಿಲ್ಲ ಎಂದು ಇದು ಸೂಚಿಸುತ್ತದೆ. ರೈಲ್ವೇ ಹೊರಡಿಸಿದ ಸೂಚನೆಯ ಪ್ರಕಾರ, ಪ್ರಮುಖ ನಿಲ್ದಾಣಗಳು ಮಾತ್ರ ಈ ಪ್ರತಿಯೊಂದು ವಲಯಗಳ ಅಡಿಯಲ್ಲಿ ಬರುತ್ತವೆ. ಸದ್ಯ ವಲಯಗಳನ್ನು ಮಾತ್ರ ನಿರ್ದಿಷ್ಟಪಡಿಸಲಾಗಿದ್ದು, ಉಳಿದ ಯಾವುದೇ ಮಾಹಿತಿಗಳನ್ನು ರೈಲ್ವೇ ಸಚಿವಾಲಯ ಹಂಚಿಕೊಂಡಿಲ್ಲ. ಶೀಘ್ರದಲ್ಲೇ ರೈಲ್ವೆ ಅಧಿಕಾರಿಗಳು ರೈಲುಗಳ ಸಮಯದ ಪ್ರಕಟಣೆಯನ್ನು ತಿಳಿಸಬಹುದು. ಬೇಸಿಗೆ ವಿಶೇಷ ರೈಲುಗಳ ಸಮಯ ಮತ್ತು ಇತರ ಮಾಹಿತಿ ದೊರೆತ ನಂತರ ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ರೈಲ್ವೇ ಕೌಂಟರ್‌ ಅಥವಾ IRCTC ವೆಬ್‌ಸೈಟ್‌ ಮುಖಾಂತರ ಕಾಯ್ದಿರಿಸಬಹುದಾಗಿದೆ.

ಇದನ್ನೂ ಓದಿ: NEET registration extended : NEET ಪರೀಕ್ಷಾ ನೋಂದಣಿ ದಿನಾಂಕ ಏಪ್ರಿಲ್ 15 ರವರೆಗೆ ವಿಸ್ತರಣೆ

ಇದನ್ನೂ ಓದಿ: Covid RT-PCR test : ಹೆಚ್ಚಿದ ಕೊರೊನಾ ಆತಂಕ : ರಾಜ್ಯ ಆರೋಗ್ಯ ಇಲಾಖೆಯಿಂದ ಮಹತ್ವದ ಪ್ರಕಟಣೆ

(217 summer special trains operate to avoid rush says Indian Railways)

Comments are closed.