ನಾಗ್ಪುರ : cardiac arrest while having sex : ಪ್ರೇಮಿಗಳು ತಮ್ಮ ಖಾಸಗಿ ಕ್ಷಣಗಳನ್ನು ಸಂಗಾತಿಯ ಜೊತೆಯಲ್ಲಿ ಹೆಚ್ಚೆಚ್ಚು ಕಳೆಯಲು ಇಷ್ಟ ಪಡ್ತಾರೆ. ಆದರೆ ನಾಗ್ಪುರದಲ್ಲಿ ಇಬ್ಬರು ಪ್ರೇಮಿಗಳಿಗೆ ಇವರ ಖಾಸಗಿ ಕ್ಷಣವೇ ಸಂಚಕಾರವಾಗಿ ಪರಿಣಮಿಸಿದೆ. ಲೈಂಗಿಕ ಕ್ರಿಯೆ ನಡೆಸಬೇಕು ಎಂದು ಲಾಡ್ಜ್ಗೆ ತೆರಳಿದ್ದ ಪ್ರೇಮಿಗಳು ಸಂಭೋಗದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಬಾಯ್ಫ್ರೆಂಡ್ ಅಚಾನಕ್ ಆಗಿ ಮೃತಪಟ್ಟ ಘಟನೆಯೊಂದು ವರದಿಯಾಗಿದೆ. ಮೃತ ವ್ಯಕ್ತಿಯನ್ನು 28 ವರ್ಷದ ಅಜಯ್ ಪರ್ಟೆಕಿ ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಈತ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಅಜಯ್ ಯಾವುದೇ ರೀತಿಯ ಡ್ರಗ್ಸ್ ಸೇವನೆ ಅಥವಾ ಮದ್ಯಪಾನ ಮಾಡಿರುವ ಬಗ್ಗೆ ಪೊಲೀಸರಿಗೆ ಯಾವುದೇ ಸಾಕ್ಷ್ಯಾಧಾರಗಳು ದೊರಕಿಲ್ಲ.
ವೃತ್ತಿಯಲ್ಲಿ ಚಾಲಕ ಹಾಗೂ ವೆಲ್ಡಿಂಗ್ ತಂತ್ರಜ್ಞನಾಗಿದ್ದ ಅಜಯ್ ಪರ್ಟೆಕಿ ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಎನ್ನಲಾಗಿದೆ. ಈತ ಮಧ್ಯ ಪ್ರದೇಶ ಛಿಂದವಾಡದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ 23 ವರ್ಷದ ಯುವತಿಯ ಜೊತೆ ಕಳೆದ ಮೂರು ವರ್ಷಗಿಂದ ರಿಲೇಷನ್ಶಿಪ್ನಲ್ಲಿದ್ದ ಎನ್ನಲಾಗಿದೆ. ಈ ವಿಚಾರ ಇಬ್ಬರ ಮನೆಯವರಿಗೂ ತಿಳಿದಿತ್ತು. ಅಲ್ಲದೇ ಇವರು ಇನ್ನೇನು ಕೆಲವು ದಿನಗಳಲ್ಲಿ ಮದುವೆ ಕೂಡ ಆಗಬೇಕಿತ್ತು. ಆದರೆ ವಿಧಿಯಾಟ ಇವರ ಜೀವನದಲ್ಲಿ ಬೇರೆಯ ಕತೆಯನ್ನೇ ಬರೆದಿತ್ತು.
ಭಾನುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಒಬ್ಬರನ್ನೊಬ್ಬರು ಭೇಟಿಯಾದ ಪ್ರೇಮಿಗಳು ಸೀದಾ ಲಾಡ್ಜ್ಗೆ ತೆರಳಿದ್ದಾರೆ. ಲಾಡ್ಜ್ನಲ್ಲಿ ರೂಮ್ ಬುಕ್ ಮಾಡಿದ ಇವರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು. ಅರ್ಧ ಗಂಟೆ ಬಳಿಕ ಅಜಯ್ ಏಕಾ ಏಕಿ ಹಾಸಿಗೆಯ ಮೇಲೆ ಕುಸಿದು ಬಿದ್ದಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಪ್ರಿಯತಮೆ ಲಾಡ್ಜ್ನ ಸಿಬ್ಬಂದಿಯನ್ನು ಕರೆದು ಮಾಹಿತಿಯನ್ನು ನೀಡಿದ್ದಾಳೆ. ಕೂಡಲೇ ಅಜಯ್ನನ್ನು ಹತ್ತಿರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಈತ ಮೃತಪಟ್ಟಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಸಾವೊನೆರ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಪಾಟೀಲ್ ಈ ವಿಚಾರವಾಗಿ ಮಾತನಾಡಿದ್ದು. ಇಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಅಜಯ್ ಕುಸಿದು ಬಿದ್ದಿದ್ದಾರೆ. ಮೃತ ವ್ಯಕ್ತಿ ಯಾವುದೇ ರೀತಿಯ ಔಷಧಿ ಸೇವಿಸಿದ್ದರು ಎಂಬುದ್ದಕ್ಕೆ ನಮಗೆ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೇ ಯಾವುದೇ ರೀತಿಯ ಮಾದಕ ದ್ರವ್ಯ ಕೂಡ ಈ ಜೋಡಿಯ ಬಳಿಯಲ್ಲಿ ಪತ್ತೆಯಾಗಿಲ್ಲ. ಯುವತಿ ಕೂಡ ಈತ ನನ್ನ ಎದುರು ಏನನ್ನೂ ಸೇವಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು. ಹೆಚ್ಚಿನ ತನಿಖೆಗಾಗಿ ಮೃತ ವ್ಯಕ್ತಿಯ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದರು.
ಇದನ್ನು ಓದಿ : Bike horn Murder : ಬೈಕ್ ಹಾರ್ನ್ ವಿಚಾರಕ್ಕೆ ಶುರುವಾದ ದ್ವೇಷ ಕೊಲೆಯಲ್ಲಿ ಅಂತ್ಯ : ಆರೋಪಿಗಳ ಬಂಧನ
ಇದನ್ನೂ ಓದಿ : Uttar Pradesh : ಹಿಂದೂ ದೇವರ ಫೋಟೋ ಇರುವ ಕಾಗದದ ಮೇಲೆ ಮಾಂಸ ಮಾರಾಟ : ಆರೋಪಿ ಬಂಧನ
28-year-old Nagpur man suffers cardiac arrest while having sex with girlfriend, dies