ರಾಜ್ಯದ ಜನತೆಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರವು ಮೊಹಲ್ಲಾ ಕ್ಲಿನಿಕ್ನ್ನು ದೆಹಲಿ (Delhi’s Mohalla clinic) ರಾಜ್ಯದಾದ್ಯಂತ ತೆರೆದಿದೆ. ಆದರೆ ಇದೇ ಮೊಹಲ್ಲಾ ಕ್ಲಿನಿಕ್ ಒಂದರಲ್ಲಿ ನೀಡಲಾದ ಕಫ್ ಸಿರಪ್ ಸೇವಿಸಿದ ಪರಿಣಾಮ ಮೂವರು ಮಕ್ಕಳು ಸಾವನ್ನಪ್ಪಿದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಈ ಸಂಬಂಧ ತನಿಖೆ ನಡೆಸುವಂತೆ ಆರೋಗ್ಯ ಇಲಾಖೆ ಆದೇಶ ನೀಡಿದೆ. ಮೂವರು ಮಕ್ಕಳು ಮೊಹಲ್ಲಾ ಕ್ಲಿನಿಕ್ನಲ್ಲಿ ಸೂಚಿಸಲಾದ ಸಿರಪ್ ಸೇವಿಸಿದ ತಕ್ಷಣವೇ ಸಾವನ್ನಪ್ಪಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಒಟ್ಟು 16 ಮಕ್ಕಳನ್ನು ಕಲಾವತಿ ಸರಣ್ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಇದರಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿರುವ ಕಲಾವತಿ ಸರಣ್ ಮಕ್ಕಳ ಆಸ್ಪತ್ರೆಯಲ್ಲಿ 16 ಡೆಕ್ಸ್ಟ್ರೋಮೆಥೋರ್ಫಾನ್ ವಿಷದ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಮೂವರು ಮಕ್ಕಳು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಎಲ್ಲಾ ಮಕ್ಕಳಿಗೆ ದೆಹಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಮೊಹಲ್ಲಾ ಕ್ಲಿನಿಕ್ನಲ್ಲಿ ಡೆಕ್ಸ್ಟ್ರೋಮೆಥೋರ್ಫಾನ್ ಔಷಧಿ ಸೇವಿಸುವಂತೆ ವೈದ್ಯರು ಸೂಚನೆ ನೀಡಿದ್ದರು. ಆದರೆ ಈ ಔಷಧಿಗಳು ಮಕ್ಕಳಿಗೆ ನೀಡಬಾರದು. ಆದರೂ ಇದನ್ನು ಮಕ್ಕಳಿಗೆ ನೀಡಲಾಗಿದೆ ಎಂದು ವಿಚಾರಣಾ ವರದಿಯು ಹೇಳಿದೆ.
ಪತ್ರದಲ್ಲಿ ಡಿಜಿಹೆಚ್ಎಸ್ ಎಲ್ಲಾ ಮೊಹಲ್ಲಾ ಕ್ಲಿನಿಕ್ಗಳಲ್ಲಿ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಡೆಕ್ಸ್ಟ್ರೋಮೆಥೋರ್ಫಾನ್ ವೈದ್ಯರು ಶಿಫಾರಸು ಮಾಡದಂತೆ ಸೂಚನೆ ನೀಡಿ ಎಂದು ದೆಹಲಿ ಸರ್ಕಾರಕ್ಕೆ ಹೇಳಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಪಾಟ್ನಾದ ಮಕ್ಕಳ ವೈದ್ಯರ ಡಾ. ಚಂದ್ರ ಮೋಹನ್ ಕುಮಾರ್, ಐದು ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳಿಗೆ ಈ ಔಷಧಿಯನ್ನು ನೀಡದಂತೆ ಸೂಚನೆ ಇದ್ದರೂ ಸಹ ಇದನ್ನು ಬಳಕೆ ಮಾಡಲಾಗುತ್ತಿದೆ. ಈ ಔಷಧಿ ಸೇವನೆಯಿಂದ ಮಕ್ಕಳಲ್ಲಿ ಅರೆನಿದ್ರಾವಸ್ಥೆ, ಕಿರಿಕಿರಿ ಸೇರಿದಂತೆ ವಿವಿಧ ಅಡ್ಡಪರಿಣಾಮಗಳು ಉಂಟಾಗುತ್ತದೆ ಎಂದು ಹೇಳಿದರು.
ಇದನ್ನು ಓದಿ: Golden Temple: ಗೋಲ್ಡನ್ ಟೆಂಪಲ್ನಲ್ಲಿ ಕೊಲೆ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ..!
ಇದನ್ನೂ ಓದಿ : Aadhaar Card for Babies: ಹುಟ್ಟಿದ ತಕ್ಷಣವೇ ಮಗುವಿಗೆ ಆಧಾರ್ ಕಾರ್ಡ್
ಇದನ್ನೂ ಓದಿ : jio ₹1 Prepaid Plan : ಕೇವಲ 1 ರೂಪಾಯಿಯ ಪ್ರೀಪೇಯ್ಡ್ ಪ್ಲಾನ್ ಪರಿಚಯಿಸಿದ ರಿಲಯನ್ಸ್ ಜಿಯೋ
ಇದನ್ನೂ ಓದಿ : Asus Chromebook CX1101 : ವರ್ಕ್ ಫ್ರಂ ಹೋಂ ಮಾಡುವವರಿಗೆ ಕೇವಲ 19,999 ರೂ. ಬೆಲೆಯ ಉತ್ತಮ ಲ್ಯಾಪ್‌ಟಾಪ್ ಇಲ್ಲಿದೆ
3 kids die after taking ‘cough syrup’ at Delhi’s Mohalla clinic, 13 hospitalized