3 soldiers injured : ಬಾಡಿಗೆ ವಾಹನದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಮೂವರು ಯೋಧರು ಗಾಯಗೊಂಡ ಘಟನೆಯು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಸೆಡೋವ್ನಲ್ಲಿ ಸಂಭವಿಸಿದೆ. ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ಚುರುಕುಗತಿಯಲ್ಲಿ ಸಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಂದು ಬೆಳಗ್ಗೆ ದಕ್ಷಿಣ ಕಾಶ್ಮೀರದ ಭಾಗವಾದ ಶೋಪಿಯಾನ್ ಜಿಲ್ಲೆಯಲ್ಲಿ ಟಾಟಾ ವಾಹನದಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ. ಭಾರತೀಯ ಸೇನೆಯು ನೀಡಿರುವ ಮಾಹಿತಿಯ ಪ್ರಕಾರ ಟಾಟಾ ವಾಹನದಲ್ಲಿ ಬ್ಯಾಟರಿಯು ಸ್ಫೋಟಗೊಂಡು ಈ ಘಟನೆ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನು ಹೊರತುಡಿಸಿ ಗ್ರೆನೈಡ್ನಿಂದ ಅಥವಾ ಐಇಡಿಗಳಿಂದಲೂ ಈ ಸ್ಫೋಟ ಸಂಭವಿಸಿದ್ದರಬಹುದು ಎಂಬ ಶಂಕೆ ಕೂಡ ಇದೆ. ಈ ಸಂಬಂಧ ಮಾಹಿತಿ ಹಂಚಿಕೊಂಡ ಕಾಶ್ಮೀರದ ಐಜಿಪಿ ಈ ಸ್ಫೋಟ ಯಾವ ಕಾರಣಕ್ಕೆ ಸಂಭವಿಸಿತು ಎಂಬುದಕ್ಕೆ ಇನ್ನೂ ನಿಖರವಾದ ಕಾರಣ ಲಭ್ಯವಾಗಿಲ್ಲ. ಆದರೆ ಅದೃಷ್ಟವಶಾತ್ ವಾಹನದಲ್ಲಿದ್ದ ಯಾರೊಬ್ಬರೂ ಸ್ಫೋಟದಿಂದ ಜೀವ ಕಳೆದುಕೊಂಡಿಲ್ಲ. ಈ ಪ್ರಕರಣದ ತನಿಖೆಯನ್ನು ನಾವು ಕೈಗೆತ್ತಿಕೊಂಡಿದ್ದೇವೆ. ಶೀಘ್ರದಲ್ಲಿಯೇ ಈ ಘಟನೆಗೆ ಕಾರಣ ಪತ್ತೆ ಹಚ್ಚಲಾಗುತ್ತದೆ ಎಂದು ಹೇಳಿದರು .
ಖಾಸಗಿ ಟಾಟಾ ವಾಹನದಲ್ಲಿ 15 ಮಂದಿ ಭಾರತೀಯ ಯೋಧರಿದ್ದರು ಎನ್ನಲಾಗಿದೆ. ಇವರೆಲ್ಲ ಶೋಫಿಯಾನ್ದಲ್ಲಿದ್ದ ವೇಳೆಯಲ್ಲಿ ಈ ಭಯಾನಕ ಸ್ಫೋಟ ಸಂಭವಿಸಿದೆ. 15 ಮಂದಿ ಯೋಧರ ಪೈಕಿ ಮೂವರು ಭಾರತೀಯ ಯೋಧರು ಸ್ಫೋಟದಿಂದ ಗಾಯಗೊಂಡಿದ್ದಾರೆ. ಗಾಯಾಳು ಯೋಧರನ್ನು ಶ್ರೀನಗರದ 97 ಬೇಸ್ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಇದನ್ನು ಓದಿ : Yash : ಛತ್ರಪತಿ ಶಿವಾಜಿ ಬಯೋಪಿಕ್ ನಲ್ಲಿ ಯಶ್: ಇಲ್ಲಿದೆ ವೈರಲ್ ಪೋಟೋದ ಅಸಲಿ ಸತ್ಯ
ಇದನ್ನೂ ಓದಿ : Singer KK dies : ಹಾಡುತ್ತಿರುವಾಗಲೇ ಸಾವನ್ನಪ್ಪಿದ ಖ್ಯಾತ ಗಾಯಕ ಕೃಷ್ಣಕುಮಾರ್ ಕುಂನಾತ್
3 soldiers injured in blast at jammu and kashmirs shopian say police