Woman to Marry Herself : ವರನಿಲ್ಲದೇ ಮದುವೆಯಾಗಲಿದ್ದಾರೆ ಈ ಯುವತಿ : ಏಕಾಂಗಿಯಾಗಿ ಹನಿಮೂನ್​ಗೂ ಪ್ಲಾನ್​

Woman to Marry Herself : ಹೆಣ್ಣು ಮಕ್ಕಳು 20 ವರ್ಷ ದಾಟಿದರು ಎಂದರೆ ಸಾಕು. ಬಹುತೇಕ ಮನೆಗಳಲ್ಲಿ ಮದುವೆ ಚರ್ಚೆ ಶುರುವಾಗಿ ಬಿಡುತ್ತದೆ. ಕೆಲವು ಯುವತಿಯರು ತಮ್ಮ ಬಾಳ ಸಂಗಾತಿಯ ಆಯ್ಕೆಯನ್ನು ತಾವೇ ಮಾಡಿಕೊಂಡರೆ ಇನ್ನೂ ಕೆಲವರು ಮನೆಯಲ್ಲಿ ನೋಡಿದ ಹುಡುಗನನ್ನೇ ವರಿಸುತ್ತಾರೆ. ಆದರೆ ಗುಜರಾತ್​ನ ವಡೋದರಾದ ಯುವತಿಯೊಬ್ಬರು ಮದುವೆ ವಿಚಾರದಲ್ಲಿ ಅತ್ಯಂತ ವಿಭಿನ್ನವಾದ ನಿರ್ಧಾರವನ್ನು ಕೈಗೊಂಡಿದ್ದಾರೆ. ಮದುವೆ ಎಂಬ ಬಂಧಕ್ಕೊಂದು ವಿಶೇಷ ಅರ್ಥ ಕಲ್ಪಿಸಲು ನಿರ್ಧರಿಸಿರುವ 24 ವರ್ಷದ ಕ್ಷಮಾ ಬಿಂದು ತನ್ನೊಂದಿಗೆ ತಾನೇ ವಿವಾಹವಾಗಲು ನಿರ್ಧರಿಸಿದ್ದಾರೆ.


ಈ ರೀತಿಯ ಮದುವೆಯನ್ನು ಊಹಿಸಿಕೊಳ್ಳಲು ಸಹ ವಿಚಿತ್ರ ಎನಿಸಬಹುದು. ಆದರೆ ಕಾಲ ಬದಲಾದಂತೆ ಈ ರೀತಿಯ ವಿವಾಹಗಳು ಕೂಡ ಮುನ್ನೆಲೆಗೆ ಬರುತ್ತಿದೆ. ಇದನ್ನು ಸಾಮಾನ್ಯವಾಗಿ ಸ್ವಯಂ ವಿವಾಹ ಎಂದು ಕರೆಯಲಾಗುತ್ತದೆ. ವಿದೇಶಗಳಲ್ಲಿ ಈಗಾಗಲೇ ಇಂತಹ ಸಾಕಷ್ಟು ವಿವಾಹಗಳು ನಡೆದ ಉದಾಹರಣೆಗಳಿವೆ. ಇದೀಗ ಭಾರತದಲ್ಲಿಯೂ ಕೂಡ ಇಂತಹದ್ದೊಂದು ಪ್ರಯತ್ನಕ್ಕೆ ಕ್ಷಮಾ ಬಿಂದು ಮುಂದಾಗಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಕ್ಷಮಾ ಬಿಂದು, ನನಗೆ ಮದುವೆಯಾಗಬೇಕು ಎಂದು ಎಂದಿಗೂ ಎನಿಸಿಲ್ಲ. ಆದರೆ ನನಗೆ ವಧು ಆಗುವುದು ಎಂದರೆ ಇಷ್ಟ. ಇದೇ ಕಾರಣಕ್ಕೆ ನಾನು ಈ ರೀತಿಯಾಗಿ ಮದುವಾಗಲು ಬಯಸಿದ್ದೇನೆ. ನಮ್ಮ ದೇಶದಲ್ಲಿ ಈ ರೀತಿಯಾಗಿ ಸ್ವಯಂ ವಿವಾಹವಾದ ಯಾವೊಬ್ಬ ಯುವತಿ ಕೂಡ ನನಗೆ ಸಿಗಲಿಲ್ಲ.ಹೀಗಾಗಿ ಈ ರೀತಿಯ ಮದುವೆಯ ಮೂಲಕ ನಾನು ಇಡೀ ದೇಶಕ್ಕೆ ಸ್ವಯಂ ಪ್ರೀತಿಗೆ ಪ್ರತ್ಯಕ್ಷ ಉದಾಹರಣೆಯಾಗಲು ಬಯಸುತ್ತೇನೆ. ಬಹುಶಃ ನಮ್ಮ ದೇಶದಲ್ಲಿ ಇಂತಹದ್ದೊಂದು ವಿವಾಹವಾಗುತ್ತಿರುವ ಮೊದಲ ಮಹಿಳೆ ನಾನೇ ಇರಬಹುದು ಎಂದು ಹೇಳಿದರು.

ಸ್ವಯಂ ವಿವಾಹದ ಪ್ರಾಮುಖ್ಯತೆಗಳ ಬಗ್ಗೆ ಮಾತನಾಡಿದ ಕ್ಷಮಾ ಬಿಂದು, ಇದೊಂದು ರೀತಿಯಲ್ಲಿ ನಮ್ಮನ್ನೇ ನಾವು ಸ್ವೀಕಾರ ಮಾಡಿಕೊಳ್ಳುವ ಸ್ಥಿತಿಯಾಗಿದೆ. ಬೇರೆಯವರನ್ನು ನೋಡಿ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದು ಮದುವೆಯಾಗುವವರಿಗೂ ನನಗೂ ಯಾವುದೇ ವ್ಯತ್ಯಾಸವಿಲ್ಲ. ಏಕೆಂದರೆ ನನ್ನೊಂದಿಗೆ ನಾನು ಪ್ರೀತಿಯಲ್ಲಿ ಬಿದ್ದಿದ್ದೇನೆ ಎಂದು ಹೇಳಿದರು.


ಕ್ಷಮಾ ಬಿಂದು ತನ್ನೊಂದಿಗೆ ತಾನು ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ. ಜೂನ್​ 11ರಂದು ಕ್ಷಮಾ ಬಿಂದು ವರನಿಲ್ಲದೇ ವಿವಾಹವಾಗಲಿದ್ದಾರೆ. ಈ ಮದುವೆಯು ಸಾಮಾನ್ಯ ಮದುವೆಯಂತೆಯೇ ಇರಲಿದೆ. ಕ್ಷಮಾ ಸಿಂಧೂರ ಧರಿಸುತ್ತಾರೆ,ತನ್ನೊಂದಿಗೆ ತಾನು ಹನಿಮೂನ್​ ಯೋಜನೆಯನ್ನೂ ಕ್ಷಮಾ ಹೊಂದಿದ್ದಾರೆ. ಮದುವೆಯಾದ ಬಳಿಕ 2 ವಾರಗಳ ಕಾಲ ಕ್ಷಮಾ ಗೋವಾದಲ್ಲಿ ಹನಿಮೂನ್​ ಎಂಜಾಯ್​ ಮಾಡಲಿದ್ದಾರೆ.

ಇದನ್ನು ಓದಿ : rape hubby’s friend :ಪತಿಯೊಂದಿಗೆ ಸಲುಗೆಯಿಂದಿದ್ದ ಮಹಿಳೆಯ ಮೇಲೆ ಗ್ಯಾಂಗ್​​ರೇಪ್​ಗೆ ಸುಪಾರಿ ಕೊಟ್ಟ ಪತ್ನಿ

ಇದನ್ನೂ ಓದಿ : Kerala HC Reunites Lesbian : ಪೋಷಕರ ಒತ್ತಡದಿಂದ ದೂರಾದ ಸಲಿಂಗಕಾಮಿಗಳನ್ನು ಒಂದುಗೂಡಿಸಿದ ಕೇರಳ ಹೈಕೋರ್ಟ್​

24-Year-old Vadodara Woman to Marry Herself, Calls it ‘Act of Self-acceptance’

Comments are closed.