ಮಂಗಳವಾರ, ಏಪ್ರಿಲ್ 29, 2025
HomeNationalDasara March 4 dead : ದಸರಾ ಮೆರವಣಿಗೆ ವೇಳೆ ಘೋರ ದುರಂತ : 4...

Dasara March 4 dead : ದಸರಾ ಮೆರವಣಿಗೆ ವೇಳೆ ಘೋರ ದುರಂತ : 4 ಮಂದಿ ಸಾವು, 20 ಮಂದಿ ಗಂಭೀರ

- Advertisement -

ಜೆಸ್ಪರ್‌ : ದಸರಾ ಮೆರವಣಿಗೆ ನಡೆಯುತ್ತಿರುವ ವೇಳೆಯಲ್ಲಿ ಕಾರು ಹರಿದು ನಾಲ್ವರು ಹಿಂದೂ ಭಕ್ತರು ಸಾವನ್ನಪ್ಪಿದ್ದು, 20 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಡದ ಜೆಸ್ಪುರ್‌ ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಬೂಲ್‌ ವಿಶ್ವಕರ್ಮ ಹಾಗೂ ಸಾಹುಲ್‌ ಎಂಬವರೇ ಹಿಂದೂ ಭಕ್ತರ ಮೇಲೆ ಕಾರು ಹರಿಸಿರುವ ಆರೋಪಿಗಳು. ಛತ್ತೀಸ್‌ಗಡದಲ್ಲಿ ನವರಾತ್ರಿಯನ್ನೂ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಅದ್ರಲ್ಲೂ ವಿಜಯ ದಶಮಿಯ ದಿನದಂದು ಜೆಸ್ಪುರ್‌ನಲ್ಲಿ ದುರ್ಗಾಮಾತೆಯ ದಸರಾ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆಯಲ್ಲಿ ಏಕಾಏಕಿಯಾಗಿ ಕಾರು ನುಗ್ಗಿತ್ತು. ಜನರು ತಪ್ಪಿಸಿಕೊಳ್ಳಲು ಯತ್ನಿಸುವ ವೇಳೆಯಲ್ಲಿಯೇ ಕಾರು ಹರಿದಿದ್ದು ನಾಲ್ಕು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಸುಮಾರು ಇಪ್ಪತ್ತು ಮಂದಿಯನ್ನು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹಿಂದೂ ಭಕ್ತರ ಮೇಲೆ ಕಾರು ಹರಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇನ್ನು ಘಟನೆ ನಡೆದ ಒಂದು ಘಂಟೆಯ ಅವಧಿಯಲ್ಲಿ ಆರೋಪಿಗಳನ್ನು ಬಂಧಿಸಿರುವ ಜೆಸ್ಪುರ್‌ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಛತ್ತೀಸ್‌ಗಢದಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂಸಾಚಾರ ಮಿತಿಮೀರುತ್ತಿದ್ದು, ಇದರ ಬೆನ್ನಲ್ಲೇ ಇದೀಗ ದಸರಾ ಮೆರವಣಿಯ ಹೊತ್ತಲ್ಲೇ ಮತ್ತೊಂದು ಘೋರ ದುರಂತ ಸಂಭವಿಸಿದೆ. ಘಟನೆಯ ಬೆನ್ನಲ್ಲೇ ಛತ್ತೀಸ್‌ಗಡ ಸಿಎಂ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ, ಆರೋಪಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ :

ಮೊಟ್ಟೆ ತಿನ್ನುವ ವೇಳೆ ಹುಷಾರ್‌ ! ಬೇಯಿಸಿದ ಮೊಟ್ಟೆ ತಿಂದು ಮಹಿಳೆ ಸಾವು

ಶಾರೂಖ್‌ ಖಾನ್‌ ಪುತ್ರನಿಗಿಲ್ಲ ಬಿಡುಗಡೆ ಭಾಗ್ಯ : 3 ವರ್ಷದಿಂದ ಡ್ರಗ್ಸ್‌ ದಾಸನಾಗಿದ್ದ ಆರ್ಯನ್‌ ಖಾನ್‌

4 Dead After Car Runs Over Dussehra Crowd in Chhattisgarh’s Jashpur

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular