IPL 2021 FINAL : ಚೆನ್ನೈ ಸೂಪರ್ ಕಿಂಗ್ಸ್ VS ಕೋಲ್ಕತಾ ನೈಟ್ ರೈಡರ್ಸ್ ಇಬ್ಬರಲ್ಲಿ ಯಾರು ಬಲಿಷ್ಠ : ಏನ್‌ ಹೇಳುತ್ತೆ ಅಂಕಿ ಅಂಶ

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2021) ಫೈನಲ್‌ ಪಂದ್ಯ ಇಂದು ನಡೆಯಲಿದೆ. ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಇಯಾನ್‌ ಮಾರ್ಗನ್‌ ನೇತೃತ್ವದ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಈ ಎರಡು ತಂಡಗಳಲ್ಲಿ ಯಾರೂ ಬಲಿಷ್ಟ. ಎರಡೂ ತಂಡಗಳ ಮುಖಾಮುಖಿಯಲ್ಲಿ ಅತೀ ಹೆಚ್ಚು ಗೆಲುವು ಕಂಡವರಾರೂ ಅನ್ನೋ ಮಾಹಿತಿ ಇಲ್ಲಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಆರಂಭದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ರೂ ಕೂಡ ಅಂತಿಮ ಹಂತದಲ್ಲಿ ಕೆಲ ಪಂದ್ಯಗಳಲ್ಲಿ ಸೋಲು ಕಂಡು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಾರಿತ್ತು. ಇನ್ನು ಕೊಲ್ಕತ್ತಾ ನೈಟ್‌ ರೈಡರ್ಸ್‌ ಈ ಬಾರಿ ಕ್ವಾಲಿಫೈಯರ್‌ ಹಂತಕ್ಕೇರಲು ಸಾಕಷ್ಟು ಹರಸಾಹಸ ಪಟ್ಟಿತ್ತು. ಆದರೆ ಕ್ವಾಲಿಫೈಯರ್‌ ಪಂದ್ಯದಲ್ಲಿ ಅಗ್ರಸ್ಥಾನ ದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಸೋಲಿನ ರುಚಿಯನ್ನು ತೋರಿಸುವ ಮೂಲಕ ಫೈನಲ್‌ಗೆ ಎಂಟ್ರಿ ಕೊಟ್ಟಿದೆ.

IPL 2021: Kolkata Knight Riders beat Royal Challengers Bangalore by 9 wickets
IMAGE CREDIT : BCCI/IPL

ಮೇಲ್ನೋಟಕ್ಕೆ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಬಲಿಷ್ಠವಾಗಿದೆ. ರುತುರಾಜ್‌ ಗಾಯಕ್ವಾಡ್‌, ಪೌಲ್‌ ಡುಪ್ಲಸಿ, ಅಂಬಟಿ ರಾಯಡು, ಮಹೇಂದ್ರ ಸಿಂಗ್‌ ಧೋನಿ, ಡ್ವೇನ್‌ ಬ್ರಾವೋ, ಮೊಯಿನ್‌ ಅಲಿ, ರಾಬಿನ್‌ ಉತ್ತಪ್ಪ, ರವೀಂದ್ರ ಜಡೇಜಾ, ಜೋಸ್‌ ಹಜಲ್‌ವುಡ್‌, ಶಾರ್ದೂಲ್‌ ಠಾಕೂರ್‌ ಅವರಂತಹ ಬಲಿಷ್ಠ ಆಟಗಾರರಿದ್ದಾರೆ. ಬ್ಯಾಟಿಂಗ್‌, ಬೌಲಿಂಗ್‌ನಲ್ಲಿಯೂ ಸಮರ್ಥವಾಗಿದೆ. ಇನ್ನು ಚೆನ್ನೈ ತಂಡಕ್ಕೆ ಯಶಸ್ವಿ ನಾಯಕ ಮಹೇಂದ್ರ ಸಿಂಗ್‌ ನಾಯಕತ್ವವೇ ಪ್ಲಸ್‌ ಪಾಯಿಂಟ್.‌ ಎಂತಹ ಕಠಿಣ ಸಂದರ್ಭದಲ್ಲಿ ಯೂ ತಂಡವನ್ನು ಗೆಲ್ಲಿಸಿಕೊಂಡು ಬರುವ ಸಾಮರ್ಥ ಧೋನಿಗಿದಿದೆ. ಇನ್ನೊಂದೆಡೆ ರುತುರಾಜ್‌ ಗಾಯಕ್ವಾಡ್‌ ಅದ್ಬುತ ಫಾರ್ಮ್‌ನಲ್ಲಿರುವುದು ಚೆನ್ನೈ ಹುರುಪು ಹೆಚ್ಚಿಸಿದೆ.

ಇನ್ನೊಂದೆಡೆಯಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಕೂಡ ಬಲಿಷ್ಠವಾಗಿದೆ.ಇಯೊನ್‌ ಮಾರ್ಗನ್‌ ನಾಯಕತ್ವದ ಕೋಲ್ಕತ್ತಾ ತಂಡದಲ್ಲಿ ವೆಂಕಟೇಶ್‌ ಅಯ್ಯರ್‌, ರಾಹುಲ್‌ ತ್ರಿಪಾಠಿ, ನಿತೇಶ್‌ ರಾಣಾ, ಶುಭಮನ್‌ ಗಿಲ್‌, ಸುನಿಲ್‌ ನರೇನ್‌, ಇಯೊನ್‌ ಮಾರ್ಗನ್‌, ದಿನೇಶ್‌ ಕಾರ್ತಿಕ್‌, ಶಕಿಬ್‌ ಉಲ್‌ ಹಸನ್‌ ಲೂಕ್‌ ಫರ್ಗುಸನ್‌, ಶಿವಂ ಮಾವೆ ಅವರಂತಹ ಬಲಿಷ್ಠ ಆಟಗಾರರಿದ್ದಾರೆ. ಈ ಪೈಕಿ ಸುನಿಲ್‌ ನರೇನ್‌ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಆರ್ಭಟಿಸುತ್ತಿದ್ದರೆ, ವೆಂಕಟೇಶ್‌ ಅಯ್ಯರ್‌ ಹಾಗೂ ಶುಭಮನ್‌ ಗಿಲ್‌ ಉತ್ತಮ ಆರಂಭವನ್ನು ಒದಗಿಸುತ್ತಿದ್ದಾರೆ. ಅನುಭವಿ ಆಟಗಾರರಿಂದಾಗಿ ಕೋಲ್ಕತ್ತಾ ಕೂಡ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಿಂದಲೂ ಬಲಿಷ್ಠವಾಗಿದೆ.

ಎರಡೂ ತಂಡಗಳು ಬಲಿಷ್ಠವಾಗಿದ್ದರೂ ಕೂಡ ಐಪಿಎಲ್‌ ಇತಿಹಾಸವನ್ನು ನೋಡಿದ್ರೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಕೋಲ್ಕತ್ತಾ ನೈಟ್‌ ರೈಡರ್ಸ್‌ಗಿಂತಲೂ ಹೆಚ್ಚು ಬಲಿಷ್ಠವಾಗಿದೆ. ಐಪಿಎಲ್‌ ಇತಿಹಾಸದಲ್ಲಿ ಎರಡೂ ತಂಡಗಳು ಒಟ್ಟು 24 ಬಾರಿ ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಸಿಎಸ್‌ಕೆ 16 ಬಾರಿ ಗೆಲವು ಕಂಡಿದ್ರೆ, ಕೆಕೆಆರ್‌ ಕೇವಲ 8 ಪಂದ್ಯಗಳಲ್ಲಿ ಮಾತ್ರವೇ ಗೆಲುವನ್ನು ದಾಖಲಿಸಿದೆ. ಅದ್ರಲ್ಲೂ ಕಳೆದ ಐದು ಪಂದ್ಯಗಳಲ್ಲಿ ಸಿಎಸ್‌ಕೆ ನಾಲ್ಕು ಪಂದ್ಯಗಳಲ್ಲಿ ಗೆಲವು ಕಂಡಿದೆ.

BCCI Announces Release Of Tender to Own And Operate An IPL TEAM
IMAGE CREDIT : BCCI-IPL

ಅತೀ ಹೆಚ್ಚಿನ ಸಂಖ್ಯೆಯ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಕೆಕೆಆರ್‌ ತಂಡ ಬಲಿಷ್ಠವಾಗಿದೆ. ಆದರೂ ಇಂದಿನ ಪಂದ್ಯ ತೀವ್ರ ಕೂತೂಹಲವನ್ನು ಮೂಡಿಸಿದೆ. ಚೆನ್ನೈ ಸೋಲಿಸುವ ಮೂಲಕ ಕೆಕೆಆರ್‌ ತಂಡ ಹೊಸ ಇತಿಹಾಸವನ್ನು ಸೃಷ್ಟಿಸುತ್ತಾ ಅನ್ನೋದನ್ನು ಕಾದುನೋಡಬೇಕಾಗಿದೆ.

ಇದನ್ನೂ ಓದಿ :

ಡೆಲ್ಲಿ ಕ್ಯಾಪಿಟಲ್ಸ್‌ ಸೋಲಿಗೆ ಕಾರಣವಾಯ್ತು ರಿಷಬ್‌ ಪಂತ್‌ ಕೈಗೊಂಡ ಒಂದು ನಿರ್ಧಾರ

ರಾಹುಲ್‌ ದ್ರಾವಿಡ್‌ ಟೀಂ ಇಂಡಿಯಾ ಕೋಚ್‌ ?

( Who is the strongest of the Chennai Super Kings VS Kolkata Knight Riders ? )

Comments are closed.