ಬುಧವಾರ, ಏಪ್ರಿಲ್ 30, 2025
HomeNational7th Pay Commission Latest Update : 50 ಲಕ್ಷ ಪಿಂಚಣಿದಾರರಿಗೆ ಗುಡ್ ನ್ಯೂಸ್ ಕೊಟ್ಟ...

7th Pay Commission Latest Update : 50 ಲಕ್ಷ ಪಿಂಚಣಿದಾರರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರಕಾರ

- Advertisement -

ನವದೆಹಲಿ : ಇಂದು ಕೇಂದ್ರ ನೌಕರರಿಗೆ ಕೇಂದ್ರ ಸರಕಾರ ಸಂಪುಟದಿಂದ ಬಿಗ್‌ ನ್ಯೂಸ್‌ (7th Pay Commission Latest Update) ಕಾದಿದೆ. ಇಂದು ನಡೆಯಲಿರುವ ಮೋದಿ ಸಂಪುಟ ಸಭೆಯಲ್ಲಿ 65 ಲಕ್ಷ ನೌಕರರು ಮತ್ತು 50 ಲಕ್ಷ ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಕುರಿತು ಸರಕಾರದಿಂದ ಮಹತ್ವದ ಮಾಹಿತಿ ಘೋಷಣೆಯಾಗಲಿದೆ. ಹಾಗಾಗಿ ಹೊಸವರ್ಷದ ಹೊಸ್ತಿಲನಲ್ಲಿರುವ ಲಕ್ಷಾಂತರ ಜನ ನೌಕರರಿಗೆ ಹಾಗೂ ಚಿಂಚಣಿದಾರರಿಗೆ ಸಿಹಿ ಸುದ್ದಿಯೊಂದು ಕಾದಿದೆ.

ಅಷ್ಟೇ ಅಲ್ಲದೇ ದೇಶದಲ್ಲಿ ವೇಗವಾಗಿ ಹರಡುತ್ತಿರುವ ಕೋವಿಡ್ -19 ಪ್ರಕರಣ ಮತ್ತು ತಡೆಗಟ್ಟುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ ಲಭ್ಯವಿರುವ ಉಚಿತ ಪಡಿತರವನ್ನು ಇನ್ನಷ್ಟು ವಿಸ್ತರಿಸಬಹುದು ಎಂದು ಶೋಭಾ ಕರಂದ್ಲಾಜೆ ಹೇಳಿದರು. ಹಾಗಾಗಿ ಇಂದು ನಡೆಯುವ ಮೋದಿ ಸಂಪುಟದಲ್ಲಿ ಯಾರಿಗೆಲ್ಲಾ ಸಿಹಿ ಸುದ್ದಿ ಲಭಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಮೋದಿ ಸಂಪುಟದಿಂದ ನಿರ್ಧಾರ ತೆಗೆದುಕೊಳ್ಳಬಹುದು. ಸರಕಾರದಿಂದ ಈ ಘೋಷಣೆ ಹೊರಬಿದ್ದರೆ ನೌಕರರಿಗೆ ಹೊಸ ವರ್ಷದ ಉಡುಗೊರೆಯಾಗಲಿದೆ. ಅಕ್ಟೋಬರ್‌ವರೆಗಿನ ಎಐಸಿಪಿಐ ಸೂಚ್ಯಂಕದ ಅಂಕಿಅಂಶಗಳನ್ನು ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿದೆ. ಸೆಪ್ಟೆಂಬರ್‌ಗೆ ಹೋಲಿಸಿದರೆ ಅಕ್ಟೋಬರ್‌ನ ಎಐಸಿಪಿಐ ಸೂಚ್ಯಂಕವು 1.2 ಪಾಯಿಂಟ್‌ಗಳಷ್ಟು ಹೆಚ್ಚಾಗಿದ್ದು, 132.5 ಮಟ್ಟವನ್ನು ತಲುಪಿದೆ. ಸೆಪ್ಟೆಂಬರ್‌ನಲ್ಲಿ ಇದು ಶೇ 131.3ರಷ್ಟು ಇರುತ್ತದೆ.

ತುಟ್ಟಿ ಭತ್ಯೆ ಶೇ.42ಕ್ಕೆ ಏರಿಕೆ :
ತುಟ್ಟ ಭತ್ಯೆ ಶೇ.4ರಷ್ಟು ಹೆಚ್ಚಾದರೆ ಅದು ಶೇ.42ಕ್ಕೆ ಏರಿಕೆಯಾಗಲಿದೆ. ಸೆಪ್ಟೆಂಬರ್‌ನಲ್ಲಿ ಡಿಎ ಹೆಚ್ಚಳದ ಆಧಾರದ ಮೇಲೆ, ಇದು ಪ್ರಸ್ತುತ ಶೇಕಡಾ 38 ರಷ್ಟಿದೆ. ಈ ಹೆಚ್ಚಳದ ನಂತರ ಉದ್ಯೋಗಿಗಳ ವೇತನದಲ್ಲಿ ಉತ್ತಮ ಏರಿಕೆಯಾಗಲಿದೆ. ಏಳನೇ ವೇತನ ಆಯೋಗದ ಅಡಿಯಲ್ಲಿ (7ನೇ ವೇತನ ಆಯೋಗ), ಸರಕಾರವು ಪ್ರತಿ ವರ್ಷ ಎರಡು ಬಾರಿ ಡಿಎ ಹೆಚ್ಚಳವನ್ನು ಮಾಡುತ್ತದೆ. ಜನವರಿ 2022 ಮತ್ತು ಜುಲೈ 2022 ರಲ್ಲಿ, ಒಟ್ಟು ಶೇಕಡಾ 7 ಡಿಎ ಹೆಚ್ಚಳವನ್ನು ಘೋಷಿಸಲಾಗಿದೆ.

ಇದನ್ನೂ ಓದಿ : 7th Pay Commission Latest News | ಕೇಂದ್ರ ಸರಕಾರಿ ನೌಕರರಿಗೆ ಹೊಸ ವರ್ಷದ ಗಿಫ್ಟ್ : 10 ತಿಂಗಳ ಡಿಎ ಬಾಕಿ ಹೆಚ್ಚಳ

ಇದನ್ನೂ ಓದಿ : 7th Pay Commission Update : ಸರಕಾರಿ ನೌಕರರಿಗೆ ಗುಡ್ ನ್ಯೂಸ್‌ : . 2 ಲಕ್ಷ ರೂ. ಬಾಕಿ ಡಿಎ ಬಿಡುಗಡೆಗೆ ಡೇಟ್ ಫಿಕ್ಸ್‌

ಕಾರ್ಮಿಕ ಸಚಿವಾಲಯದಿಂದ ಡೇಟಾ ಬಿಡುಗಡೆ :
ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ತುಟ್ಟಿಭತ್ಯೆಯಲ್ಲಿ ಎಷ್ಟು ಹೆಚ್ಚಳ ಎಂದು ನಿರ್ಧರಿಸಲಾಗುತ್ತದೆ. ಪ್ರತಿ ತಿಂಗಳ ಕೊನೆಯ ಕೆಲಸದ ದಿನದಂದು, ಕಾರ್ಮಿಕ ಸಚಿವಾಲಯವು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತದೆ. ಈ ಸೂಚ್ಯಂಕವನ್ನು 88 ಕೇಂದ್ರಗಳಿಗೆ ಮತ್ತು ಇಡೀ ದೇಶಕ್ಕೆ ಸಿದ್ಧಪಡಿಸಲಾಗಿದೆ.

7th Pay Commission Latest Update: Modi government gave good news to 50 lakh pensioners

RELATED ARTICLES

Most Popular