IPL Auction Sam Curran: 18.5 ಕೋಟಿಗೆ ಸ್ಯಾಮ್ ಕರನ್ ಸೇಲ್, ಗ್ರೀನ್‌ಗೆ 17.5 ಕೋಟಿ, ಸ್ಟೋಕ್ಸ್‌ಗೆ 16.25 ಕೋಟಿ

ಕೊಚ್ಚಿ:(IPL Auction Sam Curran) ಇಂಗ್ಲೆಂಡ್’ನ ಯುವ ಆಲ್ರೌಂಡರ್ ಸ್ಯಾಮ್ ಕರನ್ (Sam Curran) ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಮಾರಾಟವಾದ ಆಟಗಾರನೆಂಬ ದಾಖಲೆ ಬರೆದಿದ್ದಾರೆ.ಕೇರಳದ ಕೊಚ್ಚಿಯಲ್ಲಿ ನಡೆಯುತ್ತಿರುವ ಐಪಿಎಲ್ 2023 ಆಟಗಾರರ ಹರಾಜಿನಲ್ಲಿ (IPL 2023 Players Auction) ಸ್ಯಾಮ್ ಕರನ್ 18.50 ಕೋಟಿಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಮಾರಾಟವಾದರು. ಆಸ್ಟ್ರೇಲಿಯಾ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ (Cameron Green) ಐಪಿಎಎಲ್ ಇತಿಹಾಸದಲ್ಲೇ 2ನೇ ಗರಿಷ್ಠ ಮೊತ್ತಕ್ಕೆ (17.5 ಕೋಟಿ) ಮುಂಬೈ ಇಂಡಿಯನ್ಸ್ ಪಾಲಾದರು.

(IPL Auction Sam Curran)ಇಂಗ್ಲೆಂಡ್’ನ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ (Ben Stokes) ಅವರನ್ನು 16.25 ಕೋಟಿ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಖರೀದಿಸಿತು. ವೆಸ್ಟ್ ಇಂಡೀಸ್’ನ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ನಿಕೋಲಸ್ ಪೂರನ್ (Nicholas Pooran) 16 ಕೋಟಿ ಮೊತಕ್ಕೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾದರು.

ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಅವರನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 8.24 ಕೋಟಿ ರೂ.ಗಳ ಮೊತ್ತಕ್ಕೆ ಖರೀದಿಸಿದೆ. ಹರಾಜಿನಲ್ಲಿ 1 ಕೋಟಿ ರೂ.ಗಳ ಮೂಲಬೆಲೆ ಹೊಂದಿದ್ದ ಮಯಾಂಕ್ ಅವರನ್ನು ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್ ಕೂಡ ಜಿದ್ದಿಗೆ ಬಿದ್ದಿತ್ತು. 8 ಕೋಟಿಯವರೆಗೆ ಮಯಾಂಕ್’ಗೆ ಬಿಡ್ ಮಾಡಿದ ಚೆನ್ನೈ, ನಂತರ ಹೋರಾಟ ಕೈಬಿಟ್ಟಿತು. ಹೀಗಾಗಿ 8.25 ಕೋಟಿ ಮೊತ್ತಕ್ಕೆ ಮಯಾಂಕ್ ಅಗರ್ವಾಲ್ ಹೈದರಾಬಾದ್ ತಂಡಕ್ಕೆ ಮಾರಾಟವಾದರು.

ಇದನ್ನೂ ಓದಿ:IPL Auction Mayank Agarwal: 8.25 ಕೋಟಿ ಸನ್ ರೈಸರ್ಸ್ ಹೈದರಾಬಾದ್ ಪಾಲಾದ ಮಯಾಂಕ್ ಅಗರ್ವಾಲ್

ಇದನ್ನೂ ಓದಿ:IPL 2023 Auction: ಐಪಿಎಲ್‌ ಮಿನಿ ಹರಾಜು: ಹರಾಜು ಸಮಯ, ನೇರ ಪ್ರಸಾರ ಮತ್ತು ಆಟಗಾರರ ಪಟ್ಟಿಯ ಪೂರ್ಣ ವಿವರ

ಐಪಿಎಲ್ 2023 ಆಟಗಾರರ ಹರಾಜು (IPL 2023 Players Auction)
ಸ್ಯಾಮ್ ಕರನ್: 18.50 ಕೋಟಿ (ಪಂಜಾಬ್ ಕಿಂಗ್ಸ್)
ಕ್ಯಾಮರೂನ್ ಗ್ರೀನ್: 17.5 ಕೋಟಿ (ಮುಂಬೈ ಇಂಡಿಯನ್ಸ್)
ಬೆನ್ ಸ್ಟೋಕ್ಸ್: 16.25 ಕೋಟಿ (ಚೆನ್ನೈ ಸೂಪರ್ ಕಿಂಗ್ಸ್)
ನಿಕೋಲಸ್ ಪೂರನ್: 16 ಕೋಟಿ (ಲಕ್ನೋ ಸೂಪರ್ ಜೈಂಟ್ಸ್)
ಹ್ಯಾರಿ ಬ್ರೂಕ್: 13.25 ಕೋಟಿ (ಸನ್ ರೈಸರ್ಸ್ ಹೈದರಾಬಾದ್)
ಮಯಾಂಕ್ ಅಗರ್ವಾಲ್: 8.25 ಕೋಟಿ (ಸನ್ ರೈಸರ್ಸ್ ಹೈದರಾಬಾದ್)
ಜೇಸನ್ ಹೋಲ್ಡರ್: 5.75 ಕೋಟಿ (ರಾಜಸ್ಥಾನ್ ರಾಯಲ್ಸ್)
ಕೇನ್ ವಿಲಿಯಮ್ಸನ್: 2 ಕೋಟಿ (ಗುಜರಾತ್ ಟೈಟನ್ಸ್)
ಆದಿಲ್ ರಶೀದ್: 2 ಕೋಟಿ (ಸನ್ ರೈಸರ್ಸ್ ಹೈದರಾಬಾದ್)
ಫಿಲ್ ಸಾಲ್ಟ್: 2 ಕೋಟಿ (ಡೆಲ್ಲಿ ಕ್ಯಾಪಿಟಲ್ಸ್)
ರೀಸೀ ಟಾಪ್ಲೇ: 1.90 ಕೋಟಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಝಾಯ್ ರಿಚರ್ಡ್ಸನ್ 1.50 ಕೋಟಿ (ಮುಂಬೈ ಇಂಡಿಯನ್ಸ್)
ಅಜಿಂಕ್ಯ ರಹಾನೆ: 50 ಲಕ್ಷ (ಚೆನ್ನೈ ಸೂಪರ್ ಕಿಂಗ್ಸ್)
ಮಯಾಂಕ್ ಮಾರ್ಕಂಡೆ: 50 ಲಕ್ಷ (ಸನ್ ರೈಸರ್ಸ್ ಹೈದರಾಬಾದ್)
ಇಶಾಂತ್ ಶರ್ಮಾ: 50 ಲಕ್ಷ (ಡೆಲ್ಲಿ ಕ್ಯಾಪಿಟಲ್ಸ್)
ಜೈದೇವ್ ಉನಾದ್ಕಟ್: 50 ಲಕ್ಷ (ಲಕ್ನೋ ಸೂಪರ್ ಜೈಂಟ್ಸ್)
ಒಡೇನ್ ಸ್ಮಿತ್: 50 ಲಕ್ಷ (ಗುಜರಾತ್ ಟೈಟನ್ಸ್)

IPL Auction Sam Curran Sam Curran sold for Punjab Kings to highest bidding in IPL History

Comments are closed.