ತಮಿಳುನಾಡಿನ ಕುನೂರಿನಲ್ಲಿ ನಡೆದ ದುರಂತದಲ್ಲಿ ಹುತಾತ್ಮರಾದ ಯೋಧರು ಹಾಗೂ ಸೇನಾಧಿಕಾರಿಗಳಲ್ಲಿ ಒಬ್ಬರ ಪಾರ್ಥಿವ ಶರೀರಗಳನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ತಮಿಳುನಾಡಿನ ಮೆಟ್ಟುಪಾಳ್ಯಂ(Mettupalayam) ಎಂಬಲ್ಲಿ ಅಪಘಾತಕ್ಕೀಡಾಗಿದೆ.
ಹುತಾತ್ಮ ಯೋಧರ ಪಾರ್ಥೀವ ಶರೀರಗಳನ್ನು ದೆಹಲಿ ಸಾಗಿಸಲು ಯೋಜನೆ ರೂಪಿಸಲಾಗಿತ್ತು. ಅದರಂತೆಯೇ ಸೇನಾಧಿಕಾರಿಗಳ ಪಾರ್ಥೀವ ಶರೀರಗಳನ್ನು ಹೊತ್ತ ಆ್ಯಂಬುಲೆನ್ಸ್ ಸುಲೂರು ಏರ್ಬೇಸ್ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಮೆಟ್ಟುಪಾಳ್ಯಂ ಎಂಬಲ್ಲಿ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಕೆಲ ಪೊಲೀಸರಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಈ ಆ್ಯಂಬುಲೆನ್ಸ್ನಲ್ಲಿ ಮೃತ ಸೇನಾಧಿಕಾರಿಗಳ ಪೈಕಿ ಓರ್ವರ ಪಾರ್ಥೀವ ಶರೀರವಿತ್ತು ಎನ್ನಲಾಗಿದೆ.
A hearse service vehicle, ferrying the body of one of the 13 victims of Mi-17V5 #helicoptercrash near Coonoor, met with an accident near Mettupalayam on its way to the #IAF’s airbase in #Sulur.
— Deccan Herald (@DeccanHerald) December 9, 2021
https://t.co/4ph10onmXf
ತಮಿಳುನಾಡಿನಲ್ಲಿ ನಿನ್ನೆ ಮಧ್ಯಾಹ್ನ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಸಿಡಿಎಸ್ ರಕ್ಷಣಾ ಸಲಹೆಗಾರ ಬ್ರಿಗೇಡಿಯರ್ ಲಖ್ಬಿಂದರ್ ಸಿಂಗ್ ಲಿಡ್ಡೆರ್, ಲೆ.ಕ ಹರ್ಜಿಂದರ್ ಸಿಂಗ್, ವಿಂಗ್ ಕಮಾಂಡರ್ ಪಿಎಸ್ ಚವ್ಹಾಣ್, ಸ್ಕ್ವಾಡ್ರನ್ ಲೀಡರ್ ಕೆ ಸಿಂಗ್, ಜೆಡಬ್ಲು ಓ ಪ್ರದೀಪ್, ಜೆಡಬ್ಲುಓ ದಾಸ್, ನಾಯಕ್ ಬಿ ಸಾಯಿ ತೇಜ, ಸತ್ಪಾಲ್, ನಾಯಕ್ ವಿವೇಕ ಕುಮಾರ್, ನಾಯಕ್ ಗುರುಸೇವಕ್ ಸಿಂಗ್ ಹುತಾತ್ಮರಾಗಿದ್ದಾರೆ. ಐಎಎಫ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದು ಅವರ ಶೀಘ್ರ ಚೇತರಿಕೆಗೆ ಇಡೀ ದೇಶವೇ ಪ್ರಾರ್ಥಿಸುತ್ತಿದೆ.
A hearse service vehicle, ferrying the body of one of the 13 victims met with an accident near Mettupalayam
ಇದನ್ನು ಓದಿ : Lt col Harjinder Singh: ಸೇನಾ ಹೆಲಿಕಾಪ್ಟರ್ ಪತನ: ಕನ್ನಡತಿಯನ್ನೇ ವರಿಸಿದ್ದರು ಹುತಾತ್ಮ ಲೆ.ಕ.ಹರ್ಜಿಂದರ್ ಸಿಂಗ್
ಇದನ್ನೂ ಓದಿ : Varun Singh : ವೆಲ್ಲಿಂಗ್ಟನ್ನಿಂದ ಬೆಂಗಳೂರಿನ ಆಸ್ಪತ್ರೆಗೆ ವರುಣ್ ಸಿಂಗ್ ಶಿಫ್ಟ್: ತಂದೆಯಿಂದ ಅಧಿಕೃತ ಮಾಹಿತಿ