Realme Discounts Offers : ರಿಯಲ್‌ ಮಿ ಸ್ಮಾರ್ಟ್‌ಫೋನ್‌ಗೆ ಭರ್ಜರಿ 5 ಸಾವಿರ ಡಿಸ್ಕೌಂಟ್; ಗ್ರಾಹಕರು ಫುಲ್ ಖುಷ್

ಡಿಸ್ಕೌಂಟ್ ಸೇಲ್ಸ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ? ಅದ್ರಲ್ಲೂ ದುಬಾರಿ ಬೆಲೆಯ ವಸ್ತುಗಳು ಕಡಿಮೆ ಬೆಲೆಗೆ ಸಿಕ್ಕರೆ ಅದೃಷ್ಟವೇ ಸರಿ. ಇದೀಗ ಸ್ಮಾರ್ಟ್ ಫೋನ್ ಕಂಪೆನಿ ರಿಯಲ್ ಮಿ ಇಂಥದೇ ಒಂದು ಭರ್ಜರಿ ಆಫರ್‌ನ್ನು (Realme Discounts Offers) ತನ್ನ ಗ್ರಾಹಕರಿಗೆ ನೀಡಿದೆ. ರಿಯಲ್ ಮಿ ಮತ್ತೊಂದು ಸರಣಿಯ ಅತ್ಯಾಕರ್ಷಕ ಕೊಡುಗೆಗಳು (flipkart) ಮತ್ತು ಸೂಪರ್ ಉಳಿತಾಯ ಡೀಲ್‌ಗಳನ್ನು ರಿಯಲ್‌ ಮಿ ಡೇಸ್‌ನ (Realme Days sale) ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮಾರಾಟದ ಬೊನಾನ್ಜಾ ಆಫರ್ ಘೋಷಿಸಿದೆ.

ಈ ಆಫರ್ ಡಿಸೆಂಬರ್ 9 ಮಧ್ಯರಾತ್ರಿಯಿಂದ ಪ್ರಾರಂಭವಾಗಲಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್ realme.com ಮತ್ತು ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ನೀವು ಈ ಸ್ಮಾರ್ಟ್‌ ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಈಗಾಗಲೇ ರಿಯಲ್ ಮಿ ಸ್ಮಾರ್ಟ್‌ಫೋನ್‌ಗಳ 5 ದಿನಗಳ ಮಾರಾಟ ಪ್ರಾರಂಭ ಆಗಿದ್ದು, ಇಂದು ಮುಗಿಯಲಿದೆ. ಈ ಅವಕಾಶವನ್ನು ಕಳೆದುಕೊಂಡ ಗ್ರಾಹಕರಿಗಾಗಿ ಡಿಸೆಂಬರ್ 9 ರಿಂದ ರಿಯಲ್ ಮಿ ಡೇಸ್ ಮಾರಾಟವನ್ನು ಆರಂಭಿಸಲಾಗಿದೆ. ಡಿಸೆಂಬರ್ 9 ರಿಂದ 13 ವರೆಗೆ ಅಂದರೆ 5 ದಿನಗಳ ಕಾಲ ಈ ಆಫರ್ ಇರಲಿದೆ. Realms X7, Realms 8S 5G, Realme narzo 5A , ಫೋನ್ ಗಳ ಮೇಲೆ ₹5000 ವರೆಗೆ ಡಿಸ್ಕೌಂಟ್ ಸಿಗಲಿದೆ. ಇದಕ್ಕಾಗಿ www.realme.com ಅಥವಾ ಫ್ಲಿಫ್ ಕಾರ್ಟ್‌ಗೆ ಭೇಟಿ ನೀಡಬೇಕಾಗುತ್ತದೆ.

ರಿಯಲ್ ಮಿ ಡೇಸ್ ಸೇಲ್‌ನ ಟಾಪ್ ಡೀಲ್‌ಗಳು (Top Deals)

  1. ರಿಯಲ್ ಮಿ ಸೇಲ್ಸ್ ಅಡಿಯಲ್ಲಿ ₹29,999 ಬೆಲೆಯ 8ಜಿ ಬಿ ರಾಮ್ ಮತ್ತು 128 ಜಿಬಿ ಮೆಮೊರಿ ಇರುವ Realme X7 Pro ಉತ್ತಮ ಆಫರ್ ಇರುವ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಈ ಆಫರ್ ನಲ್ಲಿ ನೀವು ₹5000 ಪ್ರಿಪೇಯ್ಡ್ ಕೊಡುಗೆಯನ್ನು ಪಡೆಯಬಹುದು. Realme X7 Pro 5G ಸ್ಮಾರ್ಟ್‌ಫೋನ್ ಸೋನಿ IMX686 ಸೆನ್ಸಾರ್ ಮತ್ತು 64 MP ಕ್ವಾಡ್ ಕ್ಯಾಮೆರಾ ಸೆಟಪ್‌ನ್ನು ಒಳಗೊಂಡಿದೆ. ಇದು ಡೈಮೆನ್ಸಿಟಿ 1000+ ಪ್ರೊಸೆಸರ್ ಮತ್ತು 65W ಸೂಪರ್‌ಡಾರ್ಟ್ ಚಾರ್ಜಿಂಗ್‌ ಹೊಂದಿದೆ.
  2. ನೀವು Realme X7 ಅನ್ನು (8GB ಮೆಮೊರಿ ) ₹21,999 ಬೆಲೆಯ ರಿಯಾಯತಿಯ ಅಡಿಯಲ್ಲಿ ಕೊಳ್ಳಬಹುದು. ಅಥವಾ 8GB ಯ Realme X7 Max ಮತ್ತು 12GB ಯ Realme X7 Max ಅನ್ನು ಕ್ರಮವಾಗಿ ₹26,999 ಮತ್ತು ₹29,999 ದರದಲ್ಲಿ ಪಡೆಯಬಹುದು. ಎಲ್ಲಾ ಮೂರು ರೂಪಾಂತರಗಳು ₹3000 ಪ್ರಿಪೇಯ್ಡ್ ಜೊತೆಗೆ ರಿಯಲ್ ಮಿ ಡೇಸ್ ಆಫರ್‌ನೊಂದಿಗೆ ಲಭ್ಯವಿದೆ.
  3. Realme 8 5G ಮತ್ತು Realme 8s 5G ಅನ್ನು ಕ್ರಮವಾಗಿ ₹18,499 ಮತ್ತು ₹19,999 ರ ಡಿಸ್ಕೌಂಟ್ ನಲ್ಲಿ ಖರೀದಿಸಬಹುದಾಗಿದೆ. ₹17,999 ಬೆಲೆಯ Realme 8 (8GB ಮತ್ತು 128GB) ಅನ್ನು ₹2000 ಪ್ರಿಪೇಯ್ಡ್ ಜೊತೆಗೆ ಮತ್ತು Realme 8 (6GB ಮತ್ತು 128GB) ಅನ್ನು ₹16,999 ರ ಜೊತೆಗೆ ₹1500 ರ Realme ಪ್ರಿಪೇಯ್ಡ್ ಕೊಡುಗೆಯನ್ನು ಪಡೆದುಕೊಳ್ಳಬಹುದು

ಇದನ್ನೂ ಓದಿ: Yash Radhika Pandit : ಯಶ್ ರಾಧಿಕಾಗೆ ಆನ್ಯಿವರ್ಸರಿ ಸಂಭ್ರಮ : ಪತಿ ಬಗ್ಗೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಏನಂದ್ರು ಗೊತ್ತಾ

(Realme Days Sale offers 5000 discount on flipkart check the details in Kannada)

Comments are closed.