free electricity in Punjab : ಪಂಜಾಬ್‌ನ ಆಮ್ ಆದ್ಮಿ ಸರ್ಕಾರವು ಜುಲೈ 1ರಿಂದ ಪ್ರತಿ ಮನೆಗೆ 300 ಯೂನಿಟ್ ವಿದ್ಯುತ್ನ್ನು ಉಚಿತವಾಗಿ ನೀಡಲಾಗುವುದು ಎಂದು ಘೋಷಣೆ ಮಾಡಿದೆ. ಪಂಜಾಬ್‌ನ ಮುಖ್ಯಮಂಯ್ರಿ ಭಗವಂತ್ ಮಾನ್ ಅಧಿಕಾರಕ್ಕೆ ಬಂದು ಒಂದು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಆಪ್ ಸರ್ಕಾರವು ಜುಲೈ 1 ರಿಂದ300 ಯುನಿಟ್ ಉಚಿತ ವಿದ್ಯುತ್ ಸೌಕರ್ಯವನ್ನು ಜನರಿಗೆ ನೀಡಲಿದೆ ಎಂದು ಜಾಹೀರಾತುಗಳನ್ನು ಪ್ರಕಟಿಸಲಾಗಿದೆ.
ಜೂನ್ 2021 ರಲ್ಲಿ ಪಂಜಾಬ್‌ನ ಮತದಾರರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿದ ಮೊದಲ ಭರವಸೆ 300 ಯುನಿಟ್‌ಗಳ ಉಚಿತ ವಿದ್ಯುತ್ ಆಗಿತ್ತು. ಈ ಭರವಸೆಯು ಅವರ ಸರ್ಕಾರವು ಹೊಸ ದೆಹಲಿಯಲ್ಲಿ ಜಾರಿಗೊಳಿಸಿದ ಯೋಜನೆಯಂತೆಯೇ ಇತ್ತು. ಇದಕ್ಕೂ ಮೊದಲು, ಪಂಜಾಬ್‌ನ ಗ್ರಾಹಕರು ದೇಶದಲ್ಲೇ ಅತ್ಯಂತ ದುಬಾರಿ ವಿದ್ಯುತ್ ಪಡೆಯುತ್ತಿದ್ದರು.
ಪಂಜಾಬ್ ಸರ್ಕಾರವು ಬಹುತೇಕ ವಿಚಾರಗಳಲ್ಲಿ ದೆಹಲಿ ಸರ್ಕಾರದ ಮಾದರಿಯನ್ನೇ ಅನುಸರಿಸುತ್ತಿದೆ. ಇದರನ್ವಯ ಪಂಜಾಬ್ನಲ್ಲಿ ಪ್ರತಿ ತಿಂಗಳು 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಸೌಲಭ್ಯ ಸಿಗಲಿದೆ. ಇದಕ್ಕಿಂತ ಹೆಚ್ಚು ಯೂನಿಟ್ ಬಳಕೆ ಮಾಡುವವರು ಹಣ ಪಾವತಿಸಬೇಕು.
ಈ ಯೋಜನೆಯು ಮಾರ್ಚ್‌ನಲ್ಲಿ ಅಧಿಕಾರಕ್ಕೆ ಆಯ್ಕೆಯಾದ ನಂತರ ಆಪ್ ಸರ್ಕಾರ ಮಾಡಿದ ಅತಿದೊಡ್ಡ ಘೋಷಣೆಯಾಗಿದೆ.ರಾಜ್ಯದ 73.80 ಲಕ್ಷ ಗ್ರಾಹಕರಲ್ಲಿ ಸುಮಾರು 62.25 ಲಕ್ಷ ಜನರು ಇದರ ಪ್ರಯೋಜನ ಪಡೆಯಲಿದ್ದಾರೆ.
ನವದೆಹಲಿಯಲ್ಲಿ ಇತ್ತೀಚೆಗೆ ಕೇಜ್ರಿವಾಲ್ ಮತ್ತು ಪಂಜಾಬ್ ಅಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ ಯೋಜನೆಯನ್ನು ಜಾರಿಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದರೆ, ಈ ವಿಚಾರವನ್ನು ಮೊದಲು ರಾಜ್ಯ ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ. ಅಜೆಂಡಾ ನಿಗದಿಯಾಗಿರುವಾಗಲೇ ಕೊನೆ ಗಳಿಗೆಯಲ್ಲಿ ಏಪ್ರಿಲ್ 16ರಂದು ಯೋಜನೆಯನ್ನು ಘೋಷಿಸಲು ನಿರ್ಧರಿಸಲಾಯಿತು.
ಇದನ್ನು ಓದಿ : ರಾಜೀನಾಮೆಗೂ ಮುನ್ನ ಈಶ್ವರಪ್ಪ ಮುಂದಿಟ್ಟಿದ್ರು ವಿಚಿತ್ರ ಬೇಡಿಕೆ: ಇಲ್ಲಿದೆ Resign Inside Story
AAP announces 300 units of free electricity in Punjab from July 1