CGPSC Recruitment 2022 : ಸಿಜಿಪಿಎಸ್​ಸಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಛತ್ತೀಸ್‌ಗಢ ಸಾರ್ವಜನಿಕ ಸೇವಾ ಆಯೋಗವು (CGPSC Recruitment 2022) ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ಸಾರಿಗೆ ಸಬ್ ಇನ್‌ಸ್ಪೆಕ್ಟರ್ (ಟೆಕ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಹುದ್ದೆಗಳಿಗೆ ಅರ್ಹತೆ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಮೇ 14ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.


ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಇಚ್ಛಿಸುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಸಂಬಂಧಿಸಿದ ಕೆಲವು ಮಹತ್ವದ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.


20 ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿಯನ್ನು ನಡೆಸಲಾಗುತ್ತಿದೆ.ಖಾಲಿ ಇರುವ 20 ಹುದ್ದೆಗಳ ಪೈಕಿ 2 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, 15 ಸಾರಿಗೆ ಸಬ್‌ ಇನ್‌ಸ್ಪೆಕ್ಟರ್‌ ಮತ್ತು 3 ಬ್ಯಾಕ್‌ಲಾಗ್‌ ಹುದ್ದೆಗಳಾಗಿವೆ.


ವಯಸ್ಸಿನ ಮಿತಿ : ಜನವರಿ 1, 2022 ರಂತೆ 24 ವರ್ಷದಿಂದ 30 ವರ್ಷ ವಯಸ್ಸಿನವರಾಗಿರಬೇಕು

.
ಅರ್ಜಿ ಶುಲ್ಕಕ್ಕೆ ಸಂಬಂಧಿಸಿದಂತೆ, ಛತ್ತೀಸ್‌ಗಢದ ಹೊರಗಿನ ಅಭ್ಯರ್ಥಿಗಳು ₹ 400 ಶುಲ್ಕವನ್ನು ಪಾವತಿಸಬೇಕು, ಆದರೆ ರಾಜ್ಯದೊಳಗಿನವರು ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ಪಡೆಯಲಿದ್ದಾರೆ.


ಹೊರ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳ ಬಗ್ಗೆಯೂ ಇಲ್ಲಿದೆ ವಿವರ :


psc.cg.gov.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
ಹೋಮ್​ ಪೇಜ್​​ನಲ್ಲಿರುವ ಆನ್​ಲೈನ್​ ಅಪ್ಲಿಕೇಶನ್​ ಆಯ್ಕೆ ಮೇಲೆ ಕ್ಲಿಕ್​ ಮಾಡಿ.
ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೀವು ರಿಜಿಸ್ಟರ್​ ಆಗಿ ಲಾಗಿನ್ ಆಗಬೇಕು.
ಅರ್ಜಿಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ನಮೂದಿಸಿ. ಕೇಳುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿ.
ಅಪ್ಲಿಕೇಶನ್​ ಶುಲ್ಕವನ್ನು ಪಾವತಿ ಮಾಡಿ.
ಮುಂದಿನ ಬಳಕೆಗಾಗಿ ಅರ್ಜಿ ಸಲ್ಲಿಸಿದ ಕಾಪಿಯನ್ನು ಪ್ರಿಂಟ್​ ತೆಗೆದಿಟ್ಟುಕೊಳ್ಳಿ.

UPSC, ESIC, BOB, SBI JOBS : ಸರಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿಗೆ ಸುವರ್ಣಾವಕಾಶ

ನೀವೇನಾದ್ರೂ ಉದ್ಯೋಗ ಹುಡುಕುತ್ತಿದ್ದಾರಾ ? ಹಾಗಾದ್ರೆ ನಿಮಗೆ ಸರಕಾರಿ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣಾವಕಾಶ. ದೇಶದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಎಸ್‌ಬಿಐ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ರೆ, ಬ್ಯಾಂಕ್ ಆಫ್ ಬರೋಡಾ ಸ್ವೀಕಾರಾರ್ಹ ವ್ಯವಸ್ಥಾಪಕ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಸರಕಾರಿ ಉದ್ಯೋಗ, ಖಾಲಿ ಹುದ್ದೆ, ಅರ್ಹತೆ ಸೇರಿದಂತೆ ಅರ್ಜಿ ಸಲ್ಲಿಸುವ ವಿಧಾನದ ಕುರಿತ ಮಾಹಿತಿ ಇಲ್ಲಿದೆ.

ಯುಪಿಎಸ್‌ಇ ನೇಮಕಾತಿ (UPSC Recruitment 2022) :
ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್, UPSC, ಸಹಾಯಕ ಇಂಜಿನಿಯರ್, ಜೂನಿಯರ್ ಟೆಕ್ನಿಕಲ್ ಆಫೀಸರ್, ಲೆಕ್ಚರರ್ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆಯೋಗದ ವೆಬ್‌ಸೈಟ್ upsconline.nic.in ನಲ್ಲಿ ಏಪ್ರಿಲ್ 28 ರೊಳಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ಹೆಸರು : ಸಹಾಯಕ ಇಂಜಿನಿಯರ್, ಜೂನಿಯರ್ ಟೆಕ್ನಿಕಲ್ ಆಫೀಸರ್, ಲೆಕ್ಚರರ್
ಹುದ್ದೆಯ ಸಂಖ್ಯೆ: 11 ಪೋಸ್ಟ್‌ಗಳು
ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 28, 2022
ಅಧಿಕೃತ ವೆಬ್‌ಸೈಟ್: upsconline.nic.in.
ನೇಮಕಾತಿ ಪ್ರಕ್ರಿಯೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ : ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ : Anganwadi Recruitment 2022 : ಅಂಗನವಾಡಿ ಕಾರ್ಯಕರ್ತರು, ಸಹಾಯಕರ ಖಾಲಿ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : RBI Recruitment 2022: ರಿಸರ್ವ್ ಬ್ಯಾಂಕ್‌ನಲ್ಲಿ 950 ಹುದ್ದೆಗಳು ಖಾಲಿ; 36,091 ರೂ.ವರೆಗೂ ಸಂಬಳ, ಇನ್ನಷ್ಟು ವಿವರ ಓದಿ

CGPSC Recruitment 2022: Apply For ARTO and Transport Sub Inspector Posts | Check Vacancy Details Here

Comments are closed.