Arogya Bharat Health Accounts:ವಿಶಿಷ್ಟ ಆರೋಗ್ಯ ಖಾತೆಗೆ ಮರುನಾಮಕರಣ

ನವದೆಹಲಿ: ಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಮಿಷನ್(Ayushman Bharat Digital Mission-ABDM) (ಎಬಿಡಿಎಂ) ಅಡಿಯಲ್ಲಿ ಆರಂಭಿಸಲಾಗಿರುವ ವಿಶಿಷ್ಟ ಆರೋಗ್ಯ ಖಾತೆಗೆ ‘ಆರೋಗ್ಯ ಭಾರತ ಹೆಲ್ತ್ ಅಕೌಂಟ್’ (ಎಬಿಎಚ್ಎ)(ABHA- Aarogya Bharat Health Accounts)ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಬಯಸಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಜನವರಿ 26ರ ಗಣರಾಜ್ಯೋತ್ಸವ (Republic Day January 26) ಸಂದರ್ಭದಲ್ಲಿ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೇಶದ ಜನರು ಎಬಿಎಚ್ಎ ಉಪಕ್ರಮದಲ್ಲಿ ಭಾಗಿಯಾಗುವಂತೆ ಉತ್ತೇಜಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಭಾರತೀಯನೂ ಡಿಜಿಟಲ್ ಹೆಲ್ತ್ ರೆಕಾರ್ಡ್ ಖಾತೆ ರಚಿಸಬೇಕು ಮತ್ತು ಅದನ್ನು ನಿರ್ವಹಿಸಬೇಕು ಎಂಬ ಕಾರಣಕ್ಕೆ ಎಬಿಎಚ್ಎ ಎಂದು ಮರುನಾಮಕರಣ ಮಾಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.

ಎಬಿಎಸ್ಎ ಅನ್ನು ಪ್ರಧಾನಿ ನರೇಂದ್ರ ಮೋದಿ 2020ರ ಆಗಸ್ಟ್ 15ರಂದು ಘೋಷಣೆ ಮಾಡಿದ್ದರು. ಸೆಪ್ಟೆಂಬರ್ 27ರಂದು ಇದು ಜಾರಿಗೊಂಡಿತ್ತು. ಡಿಜಿಟಲ್ ಹೆಲ್ತ್ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಭಾರತೀಯನಿಗೂ 14 ಅಂಕಿಯ ಡಿಜಿಟಲ್ ಹೆಲ್ತ್ ಐಡಿ ಸಿಗಲಿದೆ.

ಈ ರೀತಿಯ ಹೆಲ್ತ್ ಐಡಿ ಜನವರಿ 6ರವರೆಗೆ 15 ಕೋಟಿ ರಚನೆಯಾಗಿದೆ. 15,000ಕ್ಕೂ ಹೆಚ್ಚು ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಸಂಸ್ಥೆಗಳು ಈ ವ್ಯವಸ್ಥೆಗೆ ಒಳಪಟ್ಟಿವೆ. 2 ಲಕ್ಷಕ್ಕೂ ಹೆಚ್ಚು ಆರೋಗ್ಯ ದಾಖಲೆ ಆ್ಯಪ್‌ಗಳು ಇದುವರೆಗೆ ಡೌನ್ಲೋಡ್ ಆಗಿವೆ.

ಎಬಿಎಸ್ಎ ಯೋಜನೆಯಡಿ ಪ್ರತಿಯೊಬ್ಬ ಭಾರತೀಯನಿಗೂ ಡಿಜಿಟಲ್ ಹೆಲ್ತ್ ಐಡಿ ಸಿಗಲಿದೆ. ಮೊಬೈಲ್ ಆ್ಯಪ್ ಮೂಲಕ ಆರೋಗ್ಯ ದಾಖಲೆಗಳು ಈ ಐಡಿ ಮೂಲಕ ಯಾವಾಗಲೂ ಲಭ್ಯವಾಗಲಿದೆ.

ಹೆಲ್ತ್‌ಕೇರ್ ಪ್ರೊಫೆಷನಲ್ಸ್ ರಿಜಿಸ್ಟ್ರಿ (ಎಚ್‌ಪಿಆರ್) ಎಂಬುದು ಆರೋಗ್ಯ ಕ್ಷೇತ್ರದ ವೃತ್ತಿಪರರ ರಿಜಿಸ್ಟ್ರಿ ಆಗಿದ್ದು, ಇದರಲ್ಲಿ ನೋಂದಣಿಯಾದವರ ವಿವರಗಳು ಸಿಗಲಿದೆ.
ಹೆಲ್ತ್‌ಕೇರ್ ಫೆಸಿಲಿಟೀಸ್ ರಿಜಿಸ್ಟ್ರೀಸ್ (ಎಚ್ಎಫ್ಆರ್) ಎನ್ನವುದು ಆರೋಗ್ಯ ಕ್ಷೇತ್ರದ ಎಲ್ಲ ಆರೋಗ್ಯ ಸೇವಾ ಪೂರೈಕೆದಾರರ ಸೌಲಭ್ಯಗಳ ದಾಖಲೆ ಆಗಿದೆ. ಇದರಲ್ಲಿ ಆಧುನಿಕ ಮತ್ತು ಸಾಂಪ್ರದಾಯಿಕ ವೈದ್ಯ ಪದ್ಧತಿಯ ವಿವರಗಳು ಇರಲಿವೆ.

ಇದನ್ನೂ ಓದಿ:
world’s largest lock : ಅಯೋಧ್ಯೆ ರಾಮ ಮಂದಿರಕ್ಕಾಗಿ ಬರೋಬ್ಬರಿ 400 ಕೆಜಿ ತೂಕದ ಬೀಗ ನಿರ್ಮಾಣ

(Abha Yojana 2022 or Arogya Bharat well being accounts can be renamed launched by PM Modi)

Comments are closed.