Bombay High Court : ಕೊರೊನಾ ಲಸಿಕೆ ಪಡೆಯದವರಿಗೆ ತಾರತಮ್ಯ ಮಾಡುವಂತಿಲ್ಲ : ಬಾಂಬೆ ಹೈಕೋರ್ಟ್

Bombay High Court : ಕೊರೊನಾ ಲಸಿಕೆಯನ್ನು ಸ್ವೀಕರಿಸಿದವರು ಹಾಗೂ ಲಸಿಕೆಯನ್ನು ಪಡೆಯದವರನ್ನು ಪ್ರತ್ಯೇಕವಾಗಿ ಕಾಣುವ ಅವಶ್ಯಕತೆ ಇಲ್ಲವೆಂದು ಬಾಂಬೆ ಹೈಕೋರ್ಟ್ ಅಭಿಪ್ರಾಯ ಹೊರ ಹಾಕಿದೆ. ಮುಂಬೈನ ಸ್ಥಳೀಯ ರೈಲುಗಳಲ್ಲಿ ಕೊರೊನಾ ಲಸಿಕೆ ಸ್ವೀಕರಿಸದೇ ಇರುವವರಿಗೆ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿಲ್ಲ ಎಂದು ಆರೋಪಿಸಿ ಸಾರ್ವಜಿನ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಅರ್ಜಿಗಳ ವಿಚಾರಣೆ ನಡೆಸಿದ ಬಾಂಬೆ ಹೈ ಕೋರ್ಟ್​ ಈ ನಿರ್ಧಾರ ಪ್ರಕಟಿಸಿದೆ.


ಕೊರೊನಾ ಲಸಿಕೆ ಎಂಬುದು ಕಡ್ಡಾಯವಲ್ಲ. ಲಸಿಕೆಯನ್ನು ಪಡೆಯಬೇಕೆ ಬೇಡವೇ ಎಂಬುದನ್ನು ನಿರ್ಧರಿಸಲು ಕೇಂದ್ರ ಸರ್ಕಾರವೇ ಜನತೆಗೆ ಅವಕಾಶ ನೀಡಿದೆ. ಆದರೆ ಮಹಾರಾಷ್ಟ್ರ ಸರ್ಕಾರ ಮಾತ್ರ ಜನರ ನಡುವೆ ಭೇದ ಭಾವ ಮಾಡುತ್ತಿದೆ. ಕೇಂದ್ರ ಸರ್ಕಾರದ ಆದೇಶವನ್ನೇ ವಿರೋಧಿಸಿ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ರಾಜ್ಯ ಸರ್ಕಾರ ಇಂತಹ ಆದೇಶಗಳನ್ನು ಹೊರಡಿಸಲು ಹೇಗೆ ಸಾಧ್ಯ..? ಸುಪ್ರೀಂ ಕೋರ್ಟ್​ನಲ್ಲಿಯೇ ಕೊರೊನಾ ಲಸಿಕೆ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ ಎಂದು ಹೇಳಲಾಗಿದೆ ಎಂದು ವಕೀಲ ನಿಲೇಶ್​ ಓಜಾ ಕೋರ್ಟ್ಗೆ ತಿಳಿಸಿದರು.


ಕೊರೊನಾ ಲಸಿಕೆಯ ವಿಚಾರವಾಗಿ ಕೇಂದ್ರ ಸರ್ಕಾರವು ಮಾರ್ಗಸೂಚಿಯನ್ನು ನೀಡಿದೆ. ಸುಪ್ರೀಂ ಕೋರ್ಟ್ ಕೂಡ ಅನೇಕ ಪ್ರಕರಣಗಳಲ್ಲಿ ಲಸಿಕೆ ವಿಚಾರವಾಗಿ ತನ್ನ ಅಭಿಪ್ರಾಯಗಳನ್ನು ಹೊರಹಾಕಿದೆ. ಆದರೂ ಸಹ ಮಹಾರಾಷ್ಟ್ರ ಸರ್ಕಾರ ಕೇಂದ್ರ ಹಾಗೂ ಸುಪ್ರೀಂ ಕೋರ್ಟ್​ನ ಆದೇಶಗಳನ್ನು ಉಲ್ಲಂಘಿಸಿ ಆದೇಶಗಳನ್ನು ಜಾರಿ ಮಾಡುತ್ತಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.


ಇನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯಿಸಿ ಮಹಾರಾಷ್ಟ್ರ ಆರೋಗ್ಯ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಹೈಕೋರ್ಟ್​ಗೆ ಅಫಿಡವಿಟ್​ ಸಲ್ಲಿಕೆ ಮಾಡಿದ್ದಾರೆ. ಈ ಅಫಿಡವಿಟ್​ ಪರಿಶೀಲನೆ ನಡೆಸಿದ ಹೈಕೋರ್ಟ್​ನ ವಿಭಾಗೀಯ ನ್ಯಾಯಪೀಠವು, ಕೊರೊನಾ ಲಸಿಕೆ ಅನಿವಾರ್ಯವೆಂದು ಕೆಲವರಿಗೆ ಅನಿಸಬಹುದು. ಇನ್ನೂ ಕೆಲವರಿಗೆ ಕೊರೊನಾ ಲಸಿಕೆಯ ಅಗತ್ಯವಿಲ್ಲ ಎಂದು ಎನಿಸಬಹುದು. ಆದರೆ ಜನರ ಈ ನಿರ್ಧಾರವನ್ನು ಪ್ರಶ್ನೆ ಮಾಡುವ ಅಧಿಕಾರ ಸರ್ಕಾರಕ್ಕಿಲ್ಲ. ನಮ್ಮ ಭಾವನೆಗಳನ್ನು ಆಧರಿಸಿ ನಾವು ಯಾವುದೇ ಆದೇಶಗಳನ್ನು ಜನರ ಮೇಲೆ ಹೇರಲು ಸಾಧ್ಯವಿಲ್ಲ ಎಂದು ಹೇಳಿದೆ. ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.
ಮಹಾರಾಷ್ಟ್ರದಲ್ಲಿ ಓಮಿಕ್ರಾನ್​ ಪ್ರಕರಣ ತಾಂಡವವಾಡುತ್ತಲೇ ಇದೆ. ಇಡೀ ದೇಶದಲ್ಲಿ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 1247 ಓಮಿಕ್ರಾನ್​ ಪ್ರಕರಣಗಳು ವರದಿಯಾಗಿದೆ.

State cannot differentiate between vaccinated and unvaccinated citizens: Bombay High Court

ಇದನ್ನು ಓದಿ : CM Bommai tests corona positive : ಕೊರೊನಾ ಸೋಂಕಿಗೊಳಗಾದ ಸಿಎಂ ಬೊಮ್ಮಾಯಿಯಿಂದ ಕೋವಿಡ್​ ಮಾರ್ಗಸೂಚಿ ಉಲ್ಲಂಘನೆ..?

ಇದನ್ನೂ ಓದಿ : BJP High Command : ರಾಜ್ಯ ಬಿಜೆಪಿಗೆ ವಲಸಿಗರೇ ಕಂಟಕ : ಸಚಿವ ಎಸ್.ಟಿ. ಸೋಮಶೇಖರ್‌ ಪುತ್ರನ ಪ್ರಕರಣದ ವರದಿ ಕೇಳಿದ ಹೈಕಮಾಂಡ್

Comments are closed.