ತಮಿಳುನಾಡು : Acid attack on cows: ಹಳೆಯ ದ್ವೇಷಕ್ಕಾಗಿ ಹಲ್ಲೆಗಳು ಹಾಗೂ ಕೊಲೆಗಳು ನಡೆಯೋದನ್ನು ನೀವು ನೋಡಿರುತ್ತೀರಿ ಅಥವಾ ಕೇಳಿರುತ್ತೀರಿ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಅನೇಕ ಘಟನೆಗಳು ಈಗಾಗಲೇ ನಡೆದಿವೆ . ಆದರೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಮಾನವೀಯತೆ ಮರೆತ ದುಷ್ಕರ್ಮಿಯೊಬ್ಬ ಹಳೆಯ ದ್ವೇಷಕ್ಕಾಗಿ ಮಾಡಬಾರದ ಕೆಲಸ ಮಾಡಿ ಜನರಿಂದ ಹಿಡಿ ಶಾಪವನ್ನು ಹಾಕಿಸಿಕೊಂಡಿದ್ದಾನೆ. ವೈಯಕ್ತಿಕ ದ್ವೇಷಕ್ಕಾಗಿ ಈತ ಗೋವುಗಳ ಮೇಲೆ ಆ್ಯಸಿಡ್ ಎರಚಿದ್ದಾನೆ.
ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಹಳೆಯ ದ್ವೇಷವನ್ನು ಇಟ್ಟುಕೊಂಡಿದ್ದ ಅಯೋಗ್ಯನೊಬ್ಬ ಗೋವುಗಳ ಮೇಲೆ ಆ್ಯಸಿಡ್ ಎರಚಿದ್ದಾನೆ. ತೋಟದಲ್ಲಿ ಕಟ್ಟಲಾಗಿದ್ದ ಹಸು ಹಾಗೂ ಎಮ್ಮೆಗಳಿಗೆ ಆ್ಯಸಿಡ್ ಎರೆಚಿ ವಿಕೃತಿ ಮೆರೆದಿದ್ದಾನೆ. ರಾಜಕುಮಾರ್ ಎಂಬವರಿಗೆ ಸೇರಿದೆ ಎಮ್ಮೆ ಹಾಗೂ ಹಸುಗಳು ಆ್ಯಸಿಡ್ ದಾಳಿಗೆ ಒಳಗಾಗಿವೆ. ಈ ಘಟನೆಯಲ್ಲಿ ಸುಮಾರು ಎಪ್ಪತ್ತಕ್ಕೂ ಅಧಿಕ ರಾಸುಗಳು ಆ್ಯಸಿಡ್ ದಾಳಿಗೆ ಒಳಗಾಗಿವೆ.
ಹಸುಗಳ ಬೆನ್ನು, ತಲೆ , ಕಾಲು ಸೇರಿದಂತೆ ದೇಹದ ಇತರೆ ಭಾಗಗಳಲ್ಲಿ ತೀವ್ರ ರಕ್ತಸ್ರಾವ ಉಂಟಾಗಿದೆ. ರೈತ ರಾಜಕುಮಾರ್ ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಇದೀಗ ಈ ಹಸುಗಳು ಆ್ಯಸಿಡ್ ದಾಳಿಗೆ ಒಳಗಾಗಿರುವುದರಿಂದ ರಾಜಕುಮಾರ್ಗೆ ದಿಕ್ಕೇ ತೋಚದಂತಾಗಿದೆ. ಆಸಿಡ್ ದಾಳಿಗೆ ಒಳಗಾದ ಜಾನುವಾರುಗಳಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಮಾನುಷ ಕೃತ್ಯವೆಸಗಿದ ದುಷ್ಕರ್ಮಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ. ಈ ಸಂಬಂಧ ಮೆಟ್ಟುಪಾಳ್ಯಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : Student Kills Friend : ಶಾಲೆ ಹೋಗುವುದರಿಂದ ತಪ್ಪಿಸಿಕೊಳ್ಳಲು ಸ್ನೇಹಿತನನ್ನೇ ಕೊಂದು ಜೈಲು ಸೇರಿದ ಬಾಲಕ
ಇದನ್ನೂ ಓದಿ : Naleen Kumar Kateel : ಸೆ.2ರಂದು ಮಂಗಳೂರಿಗೆ ಪ್ರಧಾನಿ ಮೋದಿ ಆಗಮನ : ನಳೀನ್ ಕುಮಾರ್ ವಿರುದ್ಧ ಶುರುವಾಯ್ತು ಅಭಿಯಾನ
ಇದನ್ನೂ ಓದಿ : Student Kills Friend : ಶಾಲೆ ಹೋಗುವುದರಿಂದ ತಪ್ಪಿಸಿಕೊಳ್ಳಲು ಸ್ನೇಹಿತನನ್ನೇ ಕೊಂದು ಜೈಲು ಸೇರಿದ ಬಾಲಕ
ಇದನ್ನೂ ಓದಿ : Tomato Flu 100 cases : ಟೊಮ್ಯಾಟೊ ಜ್ವರ ಭೀತಿ: ಭಾರತದಲ್ಲಿ 9 ವರ್ಷದೊಳಗಿನ ಮಕ್ಕಳಲ್ಲಿ 100 ಪ್ರಕರಣ
Acid attack on cows: Incident in Tamil Nadu