Rohit Sharma Batting : 7 ಇನ್ನಿಂಗ್ಸ್, 2 ಡಕ್ 4 ಸಿಂಗಲ್ ಡಿಜಿಟ್ ; ಪಾಕ್ ವಿರುದ್ಧ ಮುಗ್ಗರಿಸೋದ್ಯಾಕೆ ಹಿಟ್‌ಮ್ಯಾನ್ ?

ಬೆಂಗಳೂರು: (Rohit Sharma Batting) ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಹೈವೋಲ್ಟೇಜ್ ಮ್ಯಾಚ್’ಗೆ ಕೌಂಟ್ ಡೌನ್ ಶುರುವಾಗಿದೆ. ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನ ವಿರುದ್ಧ ಎದುರಾದ ಸೋಲಿಗೆ ಭಾರತ ತಂಡ ಏಷ್ಯಾ ಕಪ್’ನಲ್ಲಿ ಸೇಡು ತೀರಿಸಿಕೊಳ್ಳುವ ಪಣ ತೊಟ್ಟಿದೆ. ಏಷ್ಯಾ ಕಪ್’ನಲ್ಲಿ (Asia Cup 2022) ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕ್ ಮುಖಾಮುಖಿ ಇದೇ ಭಾನುವಾರ (ಆಗಸ್ಟ್ 28) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ಸಜ್ಜಾಗುತ್ತಿದ್ದು, ಈಗಾಗಲೇ ದುಬೈ ತಲುಪಿರುವ ರೋಹಿತ್ ಶರ್ಮಾ ಬಳಗ ಅಭ್ಯಾಸ ಆರಂಭಿಸಿದೆ. ಭಾರತ ತಂಡವೇ ಪಾಕ್ ವಿರುದ್ಧ ಗೆಲ್ಲುವ ಫೇವರಿಟ ಎಂದು ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತರು ಭವಿಷ್ಯ ನುಡಿಯುತ್ತಿದ್ದಾರೆ. ಆದರೆ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಕಣಕ್ಕಿಳಿಯಲು ರೆಡಿಯಾಗಿರುವ ಟೀಮ್ ಇಂಡಿಯಾಗೆ ಒಂದೇ ಒಂದು ತಲೆ ಬಿಸಿ ಏನಂದ್ರೆ, ಪಾಕಿಸ್ತಾನ ವಿರುದ್ಧ ನಾಯಕ ರೋಹಿತ್ ಶರ್ಮಾ ಅವರ ಟಿ20 ದಾಖಲೆ.

ಟಿ20 ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ ಜಗತ್ತಿನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಆದರೆ ಪಾಕಿಸ್ತಾನ ವಿರುದ್ಧ ಮಾತ್ರ ರೋಹಿತ್ ದಾಖಲೆ ತೀರಾ ಅಂದ್ರೆ ತೀರಾ ಕಳಪೆಯಾಗಿದೆ. ಪಾಕ್ ವಿರುದ್ಧ ರೋಹಿತ್ ಇಲ್ಲಿಯವರೆಗೆ 8 ಟಿ20 ಪಂದ್ಯಗಳನ್ನಾಡಿದ್ದು, ಈ ಪೈಕಿ ಏಳು ಪಂದ್ಯಗಳಲ್ಲಿ ಬ್ಯಾಟಿಂಗ್ ಅವಕಾಶ ಸಿಕ್ಕಿದೆ. ಆ ಏಳು ಪಂದ್ಯಗಳಲ್ಲಿ ರೋಹಿತ್ ಗಳಿಸಿರುವ ರನ್ ಕೇವಲ 70, ಸರಾಸರಿ 14, ಬೆಸ್ಟ್ ಸ್ಕೋರ್ 30 ನಾಟೌಟ್.

2007ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಟಿ20 ಪಂದ್ಯವಾಡಿದ್ದ ರೋಹಿತ್ ಶರ್ಮಾ, ಆ ಪಂದ್ಯದಲ್ಲಿ 16 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿದ್ದರು. ಅದಾದ ನಂತರ ಪಾಕ್ ವಿರುದ್ಧ ರೋಹಿತ್ 6 ಪಂದ್ಯಗಳನ್ನಾಡಿದ್ದಾರೆ. ಆ ಆರು ಪಂದ್ಯಗಳಲ್ಲಿ ಗಳಿಸಿರುವ ಒಟ್ಟು ರನ್ ಕೇವಲ 40. ಕಳೆದ ವರ್ಷದ ಅಕ್ಟೋಬರ್’ ನಲ್ಲಿ ದುಬೈನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾಗಿದ್ದರು.

ಇದನ್ನೂ ಓದಿ : Asia Cup 2022 Trophy : 6 ಟೀಮ್,1 ಡ್ರೀಮ್, ಏಷ್ಯಾ ಕಪ್ ಟ್ರೋಫಿ ಅನಾವರಣ; ಯಾರಾಗ್ತಾರೆ ಚಾಂಪಿಯನ್..?

ಇದನ್ನೂ ಓದಿ : Cheteshwar Pujara Scores : 75 ಎಸೆತಗಳಲ್ಲಿ ಶತಕ; 8 ಪಂದ್ಯಗಳಲ್ಲಿ 600+ ರನ್; ಏಕದಿನ ಕ್ರಿಕೆಟ್‌ಗೆ ನಾಲಾಯಕ್ ಅಂದವವರಿಗೆ ಖಡಕ್ ಉತ್ತರ

ಪಾಕ್ ವಿರುದ್ಧ ಆಡಿದ 7 ಟಿ20 ಇನ್ನಿಂಗ್ಸ್’ಗಳಲ್ಲಿ ರೋಹಿತ್ ಶರ್ಮಾ ಗಳಿಸಿರುವ ರನ್: 30, 2, 4, 24, 0, 10, 0.

7 innings 2 ducks 4 single digits A hitman Rohit Sharma Batting who stumbles against Pakistan

Comments are closed.