ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಷ್ಟೋ ವರ್ಷಗಳು ಕಳೆದರೂ ಸಹ ಇನ್ನೂ ಕರೆಂಟ್ ಭಾಗ್ಯವನ್ನು ಕಂಡಿಲ್ಲ. ಇಂತಹದ್ದೇ ಒಂದು ಗ್ರಾಮವಾದ ಜಮ್ಮು – ಕಾಶ್ಮೀರದ ಉಧಮ್ಪುರದ ಸದ್ದಲ್ಗೆ ಕೇಂದ್ರ ಸರ್ಕಾರವು ಇದೇ ಮೊದಲ ಬಾರಿಗೆ ವಿದ್ಯುತ್ ಸಂಪರ್ಕವನ್ನು (village gets electricity) ನೀಡಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ ಈ ಗ್ರಾಮವು ಬೆಳಕನ್ನು ಕಂಡಂತಾಗಿದೆ. ಕೇಂದ್ರ ಸರ್ಕಾರದ ಅನ್ವೈಡ್ ಗ್ರ್ಯಾಂಟ್ಸ್ ಯೋಜನೆಯ ಅಡಿಯಲ್ಲಿ ಈ ಗ್ರಾಮದ ನಿವಾಸಿಗಳು ಕತ್ತಲೆಯಿಂದ ಮುಕ್ತಿಯನ್ನು ಪಡೆದಿದ್ದಾರೆ. ವಿದ್ಯುತ್ ಸಂಪರ್ಕವೇ ಇಲ್ಲದ ಹಿನ್ನೆಲೆಯಲ್ಲಿ ಮೇಣದ ಬತ್ತಿ ಹಾಗೂ ದೀಪಗಳನ್ನೇ ಇಲ್ಲಿಯ ಜನ ನಂಬಿಕೊಂಡಿದ್ದರು. ತಮ್ಮ ಗ್ರಾಮ ಕ್ಕೊಂದು ವಿದ್ಯುತ್ ಸಂಪರ್ಕವನ್ನು ನೀಡಿ ಎಂದು ಇಲ್ಲಿನ ಜನರು ಅನೇಕ ಸಮಯಗಳಿಂದ ವಿದ್ಯುತ್ಗಾಗಿ ಮೇಲಾಧಿಕಾರಿಗಳು ಬೇಡಿಕೆ ಇಟ್ಟಿದ್ದರು. ಈ ಗ್ರಾಮದ ದಶಕಗಳ ಬೆಳಕಿನ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.
ಈ ವಿಚಾರವಾಗಿ ಸಂತಸ ವ್ಯಕ್ತಪಡಿಸಿದ 72 ವರ್ಷದ ಬದರಿನಾಥ್ ಎಂಬವರು, ನಮ್ಮ ಗ್ರಾಮದಲ್ಲಿ ಹಿಂದಿನ ಪೀಳಿಗೆಯವರು ಕರೆಂಟ್ ಎಂದರೆ ಏನು ಎಂಬುವುದನ್ನೇ ನೋಡಿರಲಿಲ್ಲ. ದಶಕಗಳ ಕಾಯುವಿಕೆಯ ಬಳಿಕ ನಾವು ವಿದ್ಯುತ್ ಕಂಡಿದ್ದೇವೆ. ನಮ್ಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡಿದ ಕೇಂದ್ರ ಸರ್ಕಾರಕ್ಕೆ ನಾವು ಋಣಿಯಾಗಿದ್ದೇವೆ ಎಂದು ಹೇಳಿದರು.
ಇದನ್ನು ಓದಿ : Photoshoot Dead : ಪೋಸ್ಟ್ ವೆಡ್ಡಿಂಗ್ ಪೋಟೋ ಶೂಟ್ ವೇಳೆ ದುರಂತ : ಮದುಮಗ ಸಾವು
ಇದನ್ನೂ ಓದಿ : Minor Daughter Rape Case : ಮಗಳ ಮೇಲೆ ನಿರಂತರ ಅತ್ಯಾಚಾರ : ಪಾಪಿ ತಂದೆಗೆ 25 ವರ್ಷ ಜೈಲು ಶಿಕ್ಷೆ
75 years after Independence, this Jammu & Kashmir village gets electricity