Malpe beach : ಮಲ್ಪೆ ಬೀಚಿನಲ್ಲಿ ಮುಳುಗಿ ಕೇರಳದ ಮೂವರು ವಿದ್ಯಾರ್ಥಿಗಳು ಸಾವು

ಉಡುಪಿಯ ಮಲ್ಪೆ ಸಮುದ್ರದ(Malpe beach) ದ್ವೀಪದಲ್ಲಿ ಈಜಾಡಲು ಹೋಗಿದ್ದ ಮೂವರು ಇಂಜಿನಿಯರಿಂಗ್​ ವಿದ್ಯಾರ್ಥಿಗಳು ದುರಂತ ಅಂತ್ಯ ಕಂಡಿದ್ದಾರೆ. ತೋನ್ಸೆಪಾರ್​​​ ದ್ವೀಪದಲ್ಲಿ ಈ ಅವಘಡ ಸಂಭವಿಸಿದೆ. ಅತ್ಯಂತ ಕಡಿದಾಗಿರುವ ದ್ವೀಪದ ಪ್ರದೇಶ ಇದಾಗಿದ್ದು ಇಲ್ಲಿ ಈಜುವ ಸಾಹಸ ಮಾಡಲು ಹೋಗಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ಕೇರಳದ ಕೊಟ್ಟಾಯಂನ ಮಂಗಳಂ ಇಂಜಿನಿಯರಿಂಗ್​ ಕಾಲೇಜಿನ 80 ಮಂದಿ ವಿದ್ಯಾರ್ಥಿಗಳು ಉಡುಪಿಗೆ ಪ್ರವಾಸಕ್ಕೆಂದು ಆಗಮಿಸಿದ್ದರು, ಇವರಲ್ಲಿ ವಿದ್ಯಾರ್ಥಿಗಳು ಅಲೆನ್ ರೆಜಿ, ಅನಿಲ್​, ಅಮುಲ್ ಎಂಬವರು ನೀರಿನಲ್ಲಿ ಮುಳುಗಿದ್ದಾರೆ. ಇವರನ್ನು ರಕ್ಷಿಸಿ ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ಈ ಮೂವರು ವಿದ್ಯಾರ್ಥಿಗಳು ಮಾತ್ರವಲ್ಲದೇ ಇನ್ನೊಬ್ಬ ವಿದ್ಯಾರ್ಥಿ ಕೂಡ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದ್ದು ಶೋಧ ಕಾರ್ಯ ಮುಂದುವರಿದಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Photoshoot Dead : ಪೋಸ್ಟ್‌ ವೆಡ್ಡಿಂಗ್‌ ಪೋಟೋ ಶೂಟ್‌ ವೇಳೆ ದುರಂತ : ಮದುಮಗ ಸಾವು

ಕೋಯಿಕ್ಕೋಡ್‌ (ಕೇರಳ) : ಪೋಸ್ಟ್‌ ವೆಡ್ಡಿಂಗ್‌ ಪೋಟೋಶೂಟ್‌ ವೇಳೆಯಲ್ಲಿ ಮದುಮಗ ನದಿಯಲ್ಲಿ ಮುಳುಗಿ (Photoshoot Dead) ಸಾವನ್ನಪ್ಪಿರುವ ದುರಂತ ಘಟನೆ ಕೇರಳದ ಕೋಯಿಕ್ಕೋಡ್‌ ಸಮೀಪದ ಕುಟ್ಟಿಯಾಡಿ ಎಂಬಲ್ಲಿ ನಡೆದಿದೆ. ಸದ್ಯ ಮದುಮಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಕೇರಳ ಕಡಿಯಂಗಡ ಮೂಲದ ರೆಜಿಲ್ ಎಂಬಾತನೇ ಮೃತ ಮದುಮಗ. ಪತ್ನಿ ಕಾರ್ತಿಕಾ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರ್ಚ್ 14ರಂದು ರೆಜಿಲ್ ಮತ್ತು ಕಾರ್ತಿಕಾ ಮದುವೆ ನಡೆದಿತ್ತು. ಪೋಸ್ಟ್‌ ವೆಡ್ಡಿಂಗ್‌ ಪೋಟೋ ಶೂಟ್‌ ನಡೆಸೋ ಸಲುವಾಗಿಯೇ ರೆಜಿಲ್‌ ಹಾಗೂ ಕಾರ್ತಿಕಾ ಕುಟ್ಟಿಯಾಡಿ ಸಮೀಪದ ನದಿಯ ದಂಡೆಯ ಬಳಿಗೆ ಬಂದಿದ್ದರು. ಪೋಟೋ ಕ್ಲಿಕ್ಕಿಸೋ ಸಲುವಾಗಿಯೇ ಇಬ್ಬರೂ ಕೂಡ ಒಟ್ಟಾಗಿ ನದಿಗೆ ಬಿದ್ದಿದ್ದಾರೆ.

ನದಿಗೆ ಬಿದ್ದ ದಂಪತಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಸ್ಥಳೀಯರು ಇಬ್ಬರನ್ನೂ ನದಿಯಿಂದ ಹೊರ ತೆಗೆದಿದ್ದಾರೆ. ಅಲ್ಲದೇ ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಗುತ್ತು. ದುರದೃಷ್ಟವಶಾತ್‌ ರೆಜಿಲ್‌ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಅಲ್ಲದೇ ಕಾರ್ತಿಕಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಸದ್ಯ ಆಕೆಯ ಸ್ಥಿತಿ ಗಂಭೀರವಾಗಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನು ಓದಿ : Minor Daughter Rape Case : ಮಗಳ ಮೇಲೆ ನಿರಂತರ ಅತ್ಯಾಚಾರ : ಪಾಪಿ ತಂದೆಗೆ 25 ವರ್ಷ ಜೈಲು ಶಿಕ್ಷೆ

ಇದನ್ನು ಓದಿ : Bike Accident : ಕೋಟ ಮಣೂರು ಬಳಿ ಭೀಕರ ಅಪಘಾತ : ಓರ್ವ ಸಾವು, ಇಬ್ಬರು ಗಂಭೀರ

three engineering students death in malpe beach

Comments are closed.