ಸೋಮವಾರ, ಏಪ್ರಿಲ್ 28, 2025
HomeNationalmurder in Maharashtra : ನೂಪುರ್​ ಶರ್ಮಾ ಪರ ಪೋಸ್ಟ್​ ಶೇರ್​ ಮಾಡಿದ್ದಕ್ಕೆ ಮಹಾರಾಷ್ಟ್ರದಲ್ಲಿ ರಾಜಸ್ಥಾನ ಮಾದರಿಯ...

murder in Maharashtra : ನೂಪುರ್​ ಶರ್ಮಾ ಪರ ಪೋಸ್ಟ್​ ಶೇರ್​ ಮಾಡಿದ್ದಕ್ಕೆ ಮಹಾರಾಷ್ಟ್ರದಲ್ಲಿ ರಾಜಸ್ಥಾನ ಮಾದರಿಯ ಹತ್ಯೆ

- Advertisement -

ಮಹಾರಾಷ್ಟ್ರ : murder in Maharashtra : ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾರನ್ನು ಬೆಂಬಲಿಸಿ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿದ್ದರು ಎಂಬ ಕಾರಣಕ್ಕೆ ಮಹಾರಾಷ್ಟ್ರದ ಅಮರಾವತಿಯಲ್ಲಿ ರಾಜಸ್ಥಾನ ಮಾದರಿಯ ಕೊಲೆ ನಡೆದಿದೆ. 54 ವರ್ಷದ ರಸಾಯನಶಾಸ್ತ್ರಜ್ಞರನ್ನು ಮಹಾರಾಷ್ಟ್ರದ ಅಮರಾವತಿಯಲ್ಲಿ ಹತ್ಯೆ ಮಾಡಲಾಗಿದೆ.

ಜೂನ್​ 21ರಂದು ಅಮರಾವತಿಯ ರಸಾಯನಶಾಸ್ತ್ರಜ್ಞ ಉಮೇಶ್​ ಪ್ರಹ್ಲಾದ್​​ರಾವ್​​ರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ರಾಜಸ್ಥಾನದಲ್ಲಿ ಕನ್ಹಯ್ಯಲಾಲ್​​ನನ್ನು ಇಬ್ಬರು ದುಷ್ಕರ್ಮಿಗಳು ಇರಿದು ಕೊಲೆ ಮಾಡುವ ಒಂದು ವಾರದ ಮುಂಚಿತವಾಗಿ ಈ ಘಟನೆ ಸಂಭವಿಸಿದೆ.


ಉಮೇಶ್​ ಪ್ರಹ್ಲಾದ್​ ರಾವ್​​ ಕೊಲೆಯ ಬಗ್ಗೆ ತನಿಖೆಗೆ ಆಗ್ರಹಿಸಿ ಸ್ಥಳೀಯ ಬಿಜೆಪಿ ಮುಖಂಡರು ಪೊಲೀಸರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. ಸೇಡು ತೀರಿಸಿಕೊಳ್ಳಲು ಹಾಗೂ ಸಮಾಜಕ್ಕೆ ಉದಾಹರಣೆಯನ್ನು ನೀಡಲು ಈ ಕೊಲೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಬಿಜೆಪಿ ನಾಯಕರಿಂದ ಪತ್ರವನ್ನು ಸ್ವೀಕರಿಸಿದ್ದೇವೆ. ಈ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಐಆರ್​ ದಾಖಲಾಗಿದ್ದು ಆರು ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಕೊಲ್ಹೆ ಅಮರಾವತಿ ನಗರದಲ್ಲಿ ಮೆಡಿಕಲ್​ ಸ್ಟೋರ್​ ಹೊಂದಿದ್ದರು. ನೂಪುರ್​ ಶರ್ಮಾ ಪರವಾಗಿ ಕೆಲವು ಪೋಸ್ಟ್​ಗಳನ್ನು ವಾಟ್ಸಾಪ್​ನಲ್ಲಿ ಶೇರ್​ ಮಾಡಿದ್ದರು. ಮುಸ್ಲಿಮರು ಕೂಡ ಇದ್ದ ಗ್ರೂಪ್​​ನಲ್ಲಿ ಉಮೇಶ್​ ಪ್ರಹ್ಲಾದ್​ ಈ ಪೋಸ್ಟ್​ಗಳನ್ನು ಹಂಚಿಕೊಂಡಿದ್ದರು ಎಂದು ಸಿಟಿ ಕೊತ್ವಾಲಿ ಪೊಲೀಸ್​ ಠಾಣೆ ಅಧಿಕಾರಿ ಮಾಹಿತಿ ನೀಡಿದ್ದಾರೆ.


ಎನ್​ಐಎ ತಂಡ ಅಮರಾವತಿ ತಲುಪಿದ್ದು ಈ ಪ್ರಕರಣದ ತನಿಖೆಯನ್ನು ನಡೆಸಲಿದೆ ಎನ್ನಲಾಗಿದೆ. ಮಹಾರಾಷ್ಟ್ರ ಪೊಲೀಸರಿಂದ ಮಾಹಿತಿ ಕಲೆ ಹಾಕುತ್ತಿರುವ ಎನ್​ಐಎ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆಯನ್ನು ನಡೆಸುತ್ತಿದ್ದಾರೆ .ಅಮರಾವತಿಯಲ್ಲಿ ಉಮೇಶ್ ಕೊಲ್ಹೆ ಬರ್ಬರ ಹತ್ಯೆಗೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಲಾಗಿದೆ. ಹತ್ಯೆಯ ಹಿಂದಿನ ಪಿತೂರಿ, ಸಂಘಟನೆಗಳ ಒಳಗೊಳ್ಳುವಿಕೆ ಮತ್ತು ಅಂತರರಾಷ್ಟ್ರೀಯ ಸಂಪರ್ಕಗಳ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿದೆ.

ಇದನ್ನು ಓದಿ : Rahul Dravid celebrate : ರಾಹುಲ್ ದ್ರಾವಿಡ್ ಯಾವತ್ತಾದ್ರೂ ಈ ರೀತಿ ಸಂಭ್ರಮಿಸಿದ್ದನ್ನು ನೋಡಿದ್ದೀರಾ ?

ಇದನ್ನೂ ಓದಿ : India Vs England Test : ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಭಾರತಕ್ಕೆ ಆರಂಭಿಕ ಆಘಾತ

After Udaipur, another murder in Maharashtra over post on Nupur Sharma; NIA to probe case

RELATED ARTICLES

Most Popular