ಸೆಹ್ವಾಗ್, ಪಂತ್, ಕೊಹ್ಲಿಯನ್ನು ರಿಜೆಕ್ಟ್ ಮಾಡಿತ್ತು ಡೆಲ್ಲಿ ಕ್ರಿಕೆಟ್ ಸಂಸ್ಥೆ !


ದೆಹಲಿ: ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ದೆಹಲಿಯಿಂದ ಬಂದು ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದವರು. ಸೆಹ್ವಾಗ್ ಮತ್ತು ಕೊಹ್ಲಿ ಈಗಾಗಲೇ ಕ್ರಿಕೆಟ್ ದಿಗ್ಗಜರೆಂದು ಹೆಸರು ಮಾಡಿದ್ದಾರೆ. ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿ ಮತ್ತೆ ಸುದ್ದಿಯಲ್ಲಿದ್ದಾರೆ. ಅಚ್ಚರಿಯ ಸಂಗತಿ ಏನಂದ್ರೆ ದೆಹಲಿಯ ಈ ಮೂವರೂ ಕ್ರಿಕೆಟ್ ಹೀರೋಗಳನ್ನು ದೆಹಲಿ ಕ್ರಿಕೆಟ್ ಸಂಸ್ಥೆ ಜ್ಯೂನಿಯರ್ ಲೆವೆಲ್’ನಲ್ಲಿ ರಿಜೆಕ್ಟ್ (Sehwag Pant Kohli were rejected
)ಮಾಡಿತ್ತಂತೆ. ಈ ಇಂಟ್ರೆಸ್ಟಿಂಗ್ ಸಂಗತಿಯನ್ನು ಹಿರಿಯ ಪತ್ರಕರ್ತ ವಿಜಯ್ ಲೋಕಪಲ್ಲಿ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.

ಕಿರಿಯರ ಕ್ರಿಕೆಟ್’ನಲ್ಲಿ ದೆಹಲಿ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ಆಯ್ಕೆ ಟ್ರಯಲ್ಸ್ ಸಂದರ್ಭದಲ್ಲಿ ಸೆಹ್ವಾಗ್, ಕೊಹ್ಲಿ ಮತ್ತು ಪಂತ್ ಪ್ರತಿಭೆಯನ್ನು ಗುರುತಿಸುವಲ್ಲಿ ವಿಫಲವಾಗಿದ್ದ ಡಿಡಿಸಿಎ, ಮೂವರನ್ನೂ ಆಯ್ಕೆ ಮಾಡದೆ ರಿಜೆಕ್ಟ್ ಮಾಡಿತ್ತು ಎಂಬ ಸಂಗತಿ ಈಗ ಬಹಿರಂಗಗೊಂಡಿದೆ. ಈ ವಿಚಾರವನ್ನು ಬಹಿರಂಗ ಪಡಿಸಿರುವ ಹಿರಿಯ ಪತ್ರಕರ್ತ ವಿಜಯ್ ಲೋಕಪಲ್ಲಿ ಸೆಹ್ವಾಗ್, ವಿರಾಟ್ ಕೊಹ್ಲಿ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ಅಷ್ಟೇ ಅಲ್ಲ, ದೆಹಲಿ ಕ್ರಿಕೆಟಿಗರನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಚ್ ಪಂದ್ಯದಲ್ಲಿ ಸಿಡಿಲಬ್ಬಲದ ಶತಕ ಸಿಡಿಸಿದ್ದ ರಿಷಭ್ ಪಂತ್ ಕೇವಲ 111 ಎಸೆತಗಳಲ್ಲಿ 146 ರನ್ ಸಿಡಿಸಿ ಟೀಮ್ ಇಂಡಿಯಾಗೆ ಆಸರೆಯಾಗಿದ್ದರು. ಮಾತ್ರವಲ್ಲ ಭಾರತ ತಂಡದಲ್ಲಿ ಖಾಯಂ ವಿಕೆಟ್‌ ಕೀಪರ್‌ ಆಗುವತ್ತ ಗಮನ ಹರಿಸಿದ್ದಾರೆ.

ಇದನ್ನೂ ಓದಿ : Ravi Shastri : ಒಂದೇ ಸರಣಿ… 2 ಟೂರ್… ಹೊಸ ಅವತಾರದಲ್ಲಿ ಟೀಮ್ ಇಂಡಿಯಾ ಮಾಜಿ ಕೋಚ್ ಶಾಸ್ತ್ರಿ !

ಇದನ್ನೂ ಓದಿ : Rahul Dravid celebrate : ರಾಹುಲ್ ದ್ರಾವಿಡ್ ಯಾವತ್ತಾದ್ರೂ ಈ ರೀತಿ ಸಂಭ್ರಮಿಸಿದ್ದನ್ನು ನೋಡಿದ್ದೀರಾ ?

ಇದನ್ನೂ ಓದಿ : ಇಂಗ್ಲೆಂಡ್‌ನಲ್ಲಿ ಹಸಿದ ಭಿಕ್ಷುಕನಿಗೆ ಆಹಾರ ನೀಡಿ ಮಾನವೀಯತೆ ಮೆರೆದ ರಿಷಬ್ ಪಂತ್

ಇದನ್ನೂ ಓದಿ : KL Rahul Health Report : ರಾಹುಲ್‌ಗೆ ಜರ್ಮನಿಯಲ್ಲಿ ಆಪರೇಷನ್ ಸಕ್ಸಸ್.. ಪ್ರಿಯತಮನ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ ಪ್ರೇಯಸಿ

ಇದನ್ನೂ ಓದಿ : ಟೀಮ್ ಇಂಡಿಯಾ ಹೊಸ ಕ್ಯಾಪ್ಟನ್ ಬುಮ್ರಾಗೆ ಧೋನಿಯೇ ಸ್ಫೂರ್ತಿ

Sehwag Pant Kohli were rejected by Delhi Cricket Association

Comments are closed.