ಸೋಮವಾರ, ಏಪ್ರಿಲ್ 28, 2025
HomeNationalAhmedabad Serial Blast Verdict : ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ: 38 ಅಪರಾಧಿಗಳಿಗೆ ಮರಣದಂಡನೆ,...

Ahmedabad Serial Blast Verdict : ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ: 38 ಅಪರಾಧಿಗಳಿಗೆ ಮರಣದಂಡನೆ, 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

- Advertisement -

ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದ ( Ahmedabad Serial Blast Verdict) 49 ಅಪರಾಧಿಗಳ ಪೈಕಿ 38 ಮಂದಿಗೆ ಗುಜರಾತ್‌ನ ವಿಶೇಷ ನ್ಯಾಯಾಲಯವು ಇಂದು (ಫೆಬ್ರವರಿ 18, ಶುಕ್ರವಾರ) ಮರಣದಂಡನೆ ಶಿಕ್ಷೆಯನ್ನು ಪ್ರಕಟಿಸಿದೆ. ಇತರ ಹನ್ನೊಂದು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಭಾರತೀಯ ದಂಡ ಸಂಹಿತೆ (IPC) ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಸೆಕ್ಷನ್ 302 ರ ಅಡಿಯಲ್ಲಿ 38 ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿದೆ. ವಿಶೇಷ ನ್ಯಾಯಾಧೀಶ ಎ ಆರ್ ಪಟೇಲ್ ಅವರು ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ 1 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕೆಂದು ಘೋಷಿಸಿದ್ದಾರೆ. ಕಳೆದ ವಾರ ನ್ಯಾಯಾಲಯವು 49 ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿದ್ದು, ಇತರ 28 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ !

ಜುಲೈ 26, 2008 ರಂದು, ಅಹಮದಾಬಾದ್ ನಗರದಲ್ಲಿ ಸರಣಿ ಬಾಂಬ್ ಸ್ಫೋಟಿಸಿ ಇಡೀ ನಗರಕ್ಕೆ ನಗರವೆ ತತ್ತರಿಸಿಹೋಗಿತ್ತು, ಸರಣಿ ಬಾಂಬ್ ಸ್ಫೋಟದಲ್ಲಿ 56 ಜನರು ಸಾವನ್ನಪ್ಪಿದ್ದರು. ಜೊತೆಗೆ 200 ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಹರ್ಕತ್-ಉಲ್-ಜಿಹಾಂದ್-ಅಲ್-ಇಸ್ಲಾಮಿ ದಾಳಿಯ ಹೊಣೆ ಹೊತ್ತುಕೊಂಡಿತ್ತು. 70 ನಿಮಿಷಗಳ ಅವಧಿಯಲ್ಲಿ ನಗರದಾದ್ಯಂತ 21 ಬಾಂಬ್ ಸ್ಫೋಟವಾಗಿತ್ತು. ಅಹಮದಾಬಾದ್ ಸಿವಿಲ್ ಆಸ್ಪತ್ರೆಯನ್ನು ಕೂಡ ಸ್ಫೋಟದ ಗುರಿಯಾಗಿಸ ಲಾಗಿತ್ತು. 2002ರಲ್ಲಿ ಗುಜರಾತ್‌ನ ಗೋಧ್ರಾದಲ್ಲಿ ನಡೆದ ಗಲಭೆಗೆ ಪ್ರತೀಕಾರ ತೀರಿಸಿಕೊಳ್ಳಲು ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಗುಜರಾತ್ ಪೊಲೀಸರು ಅಪರಾಧದಲ್ಲಿ ಭಾಗಿಯಾಗಿದ್ದಕ್ಕಾಗಿ 85 ಜನರನ್ನು ಬಂಧಿಸಿದ್ದರು.

ಇದನ್ನೂ ಓದಿ : ಭವಿಷ್ಯದಲ್ಲಿ ಮಧ್ಯಮ ವರ್ಗದ ನಾಗರಿಕರು ಹೂಡಿಕೆ ಮಾಡಲು ಯಾವ ಕ್ಷೇತ್ರ ಉತ್ತಮ? ದಿಗ್ಗಜ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಉತ್ತರವಿದು

ಇದನ್ನೂ ಓದಿ : ನಿಗೂಢ ರೀತಿಯಲ್ಲಿ ಆನ್‌ಲೈನ್‌ನಲ್ಲಿ 64 ಲಕ್ಷ ಕಳೆದುಕೊಂಡ ವ್ಯಕ್ತಿ

ಇದನ್ನೂ ಓದಿ : ಹೂವು ಅರಳದಕ್ಕೆ ಮಾಲಿಗೆ ಶಿಕ್ಷೆ; ಸರ್ವಾಧಿಕಾರಿ ಕಿಮ್ ಜೋಂಗ್ ಅನ್ ಹೊರಡಿಸಿದ ಆದೇಶ ಏನು ಗೊತ್ತಾ?

(Ahmedabad Serial Blast Verdict announced 38 death penalty 11 life imprisonment)

RELATED ARTICLES

Most Popular