ನವದೆಹಲಿ : ವಿಮಾನಯಾನ ಸೇವೆ ನಿಷೇಧದ ಹಿನ್ನೆಲೆಯಲ್ಲಿ ವಿದೇಶ ದಲ್ಲಿಯೇ ಉಳಿದುಕೊಂಡು, ಭಾರತಕ್ಕೆ ಮರಳಲು ಕಾಯುತ್ತಿರುವ ಭಾರತದ ಪ್ರಯಾಣಿಕರಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಗುಡ್ ನ್ಯೂಸ್ ಕೊಟ್ಟಿದೆ.
ಸೌದಿ ಅರೇಬಿಯಾ, ಕುವೈತ್ ಮತ್ತು ದುಬೈನಿಂದ ಭಾರತಕ್ಕೆ ವಿಮಾನ ಯಾನದ ವೇಳಾಪಟ್ಟಿಯನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಘೋಷಣೆ ಯನ್ನು ಮಾಡಿದೆ. ಜುಲೈನಿಂದ ಅಕ್ಟೋಬರ್ ರವರೆಗೆ ವಂದೇ ಭಾರತ್ ಮಿಷನ್ ನಡಿಯಲ್ಲಿ ವೇಳಾಪಟ್ಟಿ ಪ್ರಕಟಿಸಿದೆ. ಅಲ್ಲದೇ ಕುವೈತ್ ನಿಂದ ಭಾರತಕ್ಕೆ ಸಂಚರಿಸುವ ವಿಮಾನಗಳಿಗಾಗಿ ಬುಕಿಂಗ್ ಮುಕ್ತವಾಗಿದೆ.
ಕುವೈತ್ ವಿಜಯವಾಡ-ಕೊನ್ಞಿಕೋಡ್ ನಡುವೆ ಸೋಮವಾರ, ಬುಧವಾರ, ಶುಕ್ರವಾರದಂದು ವಿಮಾನ ಸಂಚರಿಸಲಿದೆ. ಅಲ್ಲದೇ ಕುವೈತ್-ಕಣ್ಣೂರು-ತಿರುಚಿ ನಡುವಿನ ವಿಮಾನಗಳು ಮಂಗಳವಾರ ಮತ್ತು ಶನಿವಾರದಂದು ಕುವೈತ್- ಮಂಗಳೂರು- ತಿರುಚ್ಚಿ ನಡುವೆ ಕಾರ್ಯ ನಿರ್ವಹಿಸಲಿವೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಘೋಷಿಸಿದೆ.
ಜುಲೈ 17 ರಂದು ದುಬೈನಿಂದ ತಿರುವನಂತಪುರಂ ಹಾಗೂ ಚೆನ್ನೈ ನಡುವೆ ಹಾರಾಟ ನಡೆಸಲಿದೆ. ಏರ್ ಇಂಡಿಯಾ ಐಎಕ್ಸ್ 1582 ವಿಮಾನ ಬೆಳಿಗ್ಗೆ 10: 30 ಕ್ಕೆ ದುಬೈ ನಿಂದ ಹೊರಟು ಸಂಜೆ 5:35 ಕ್ಕೆ ತಿರುವನಂತಪುರಕ್ಕೆ ತಲುಪುತ್ತದೆ. ಸಂಜೆ 7: 45 ಕ್ಕೆ ಚೆನ್ನೈನಲ್ಲಿ ಲ್ಯಾಂಡ್ ಆಗಲಿದೆ.