ಜಾರ್ಖಂಡ್ : (Aishwarya rai photo on student admit card)ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಪ್ರವೇಶ ಪತ್ರವನ್ನು ಪಡೆಯಲು ಸೈಬರ್ ಸೆಂಟರ್ ಗೆ ತೆರಳಿದ ವಿದ್ಯಾರ್ಥಿಗೆ ಬಿಗ್ ಶಾಕ್ ಕಾದಿತ್ತು. ಸೈಬರ್ ಸೆಂಟರ್ ನಲ್ಲಿ ಹಾಲ್ ಟಿಕೆಟ್ ಪಡೆದು ಅದರಲ್ಲಿ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ನೋಡುವಾಗ ತನ್ನ ಪೋಟೋ ಇರುವ ಜಾಗದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಪೋಟೋವನ್ನು ನೋಡಿ ತಬ್ಬಿಬ್ಬಾಗಿದ್ದಾಳೆ. ಹಲವು ಬಾರಿ ಪ್ರವೇಶ ಪತ್ರವನ್ನು ನೋಡಿದ್ದಾಳೆ. ಅದರಲ್ಲಿ ಬೇರೆ ಎಲ್ಲಾ ಮಾಹಿತಿ ಸರಿಯಾಗಿದ್ದು, ಹೆಸರು ಮತ್ತು ಸಹಿ ತಪ್ಪಾಗಿದೆ. ಇಂತಹ ಘಟನೆ ಜಾರ್ಖಾಂಡ್ ನಲ್ಲಿ ನಡೆದಿದೆ .
(Aishwarya rai photo on student admit card)ಬಿನೋದ್ ಬಿಹಾರಿ ಮಹ್ತೊ ಕೊಯಲಾಂಚಲ್ ವಿಶ್ವವಿದ್ಯಾಲಯದ ಪಿಜಿ ಎರಡನೇ ಸೆಮಿಸ್ಟರ್ ಪರೀಕ್ಷೆ ಇಂದಿನಿಂದ ಶುರುವಾಗಿದೆ. ಇಲ್ಲಿ ಅರ್ಥಶಾಸ್ತ್ರದ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಕಾಜಲ್ ಕುಮಾರಿ ವಿಶ್ವವಿದ್ಯಾಲಯದ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಾದ ಪ್ರವೇಶ ಪತ್ರವನ್ನು ಮುಂಚಿತವಾಗಿ ಅಂದರೆ ಸೋಮವಾರ ಸಂಜೆಯಂದು ಪ್ರವೇಶ ಪತ್ರ ಪಡೆಯುವುದಕ್ಕಾಗಿ ಸೈಬರ್ ತೆರಳಿದಾಗ ಪೋಟೋ ಮತ್ತು ಸಹಿ ಬದಲಾಗಿರುವುದನ್ನು ಗಮನಿಸಿದ್ದಾಳೆ. ಪ್ರವೇಶ ಪತ್ರದಲ್ಲಾದ ಬದಲಾವಣೆಯನ್ನು ನೋಡಿ ವಿದ್ಯಾರ್ಥಿನಿ ಗಾಬರಿಯಾಗಿದ್ದಾಳೆ.
ವಿದ್ಯಾರ್ಥಿನಿಯು ಫಾರ್ಮ್ ಭರ್ತಿ ಮಾಡುವಾಗ ಪೋಟೋ ಹಾಗೂ ಮಾಹಿತಿಯನ್ನು ಸರಿಯಾಗಿ ಕೊಟ್ಟಿದ್ದಾಳೆ. ಅದರೆ ವಿಶ್ವವಿದ್ಯಾಲಯದ ಯಡವಟ್ಟಿನಿಂದಾಗಿ ಹೀಗಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಅರ್ಜಿ ಹಾಕಿದ ನಂತರ ಜೊರಾಕ್ಸ್ ತೆಗೆದಾಗ ಫಾರ್ಮ್ ಸರಿಯಾಗಿತ್ತು. ಆನ್ ಲೈನ್ ನಲ್ಲಿ ಪ್ರವೇಶ ಪತ್ರ ಪಡೆಯಲು ಹೋದಾಗ ಬದಲಾಗಿದೆ ಎಂದು ವಿದ್ಯಾರ್ಥಿ ಆತಂಕ ವ್ಯಕ್ತಪಡಿಸಿದ್ದಾಳೆ. ಪರೀಕ್ಷೆ ಬರೆಯಲು ಅನುಮತಿ ನೀಡುತ್ತಾರೊ ಇಲ್ಲವೊ ಎಂದು ಭಯಭೀತಳಾಗಿದ್ದಾಳೆ.
ಇದನ್ನೂ ಓದಿ:Honnavar accident:ಹೊನ್ನಾವರ : ಭೀಕರ ಅಪಘಾತ: 15 ಮಂದಿಗೆ ಗಾಯ, ಓರ್ವ ಸಾವು
ಇದನ್ನೂ ಓದಿ:Supreme Court of India : ಭಾರತದ ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಯ್ಕೆ ಹೇಗೆ ನಡೆಯುತ್ತೆ ಗೊತ್ತಾ ?
ಬಿಬಿಎಂಕೆಯ ಪರೀಕ್ಷಾ ನಿಯಂತ್ರಕ ಎಸ್ ಕೆ ಬರನ್‌ವಾಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ವಿಶ್ವವಿದ್ಯಾಲಯದ ಹೆಸರನ್ನು ಕೆಡಿಸಲು ಕಿಡಿಗೆಡಿಗಳು ಈ ಸಂಚನ್ನು ರೂಪಿಸಿದ್ದಾರೆ. ಅರ್ಜಿ ಬರ್ತಿ ಮಾಡುವಾಗ ವಿದ್ಯಾರ್ಥಿ ಸರಿಯಾದ ಮಾಹಿತಿ ನೀಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ,ಇದರ ಬಗ್ಗೆ ತನಿಖೆಯನ್ನು ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೆವೆ ಎಂದು ಎಸ್ ಕೆ ಬರನ್‌ವಾಲ್ ತಿಳಿಸಿದ್ದಾರೆ.ಆದರೆ ವಿದ್ಯಾರ್ಥಿಗೆ ಪರೀಕ್ಷೆಯನ್ನು ಬರೆಯಲು ಅನುಮತಿಯನ್ನು ನೀಡಿರುವುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.
Aishwarya Rai photo on exam hall ticket: Shocked student