Uttar Pradesh : ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದ ಬಾಲಕಿ ; ಕೊಲ್ಲಲು ಮುಂದಾದ ತಾಯಿ ಮತ್ತು ಸಹೋದರಿ

ಮಣಿಪುರ : (Uttar Pradesh ) ಎಲ್ಲೆಡೆಯಲ್ಲಿ ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಿದ್ದು , ಅದೆಷ್ಟೋ ಅಪ್ರಾಪ್ತ ಹೆಣ್ಣು ಮಕ್ಕಳು ಬಲಿಯಾಗಿದ್ದಾರೆ. ಆದರೆ ಇದನ್ನು ತಡೆಗಟ್ಟಲು ಇನ್ನೂ ಯಾರಿಂದಲೂ ಸಾಧ್ಯವಾಗದೆ ಇರುವುದು ವಿಷಾಧನೀಯ. ಮೂರು ತಿಂಗಳ ಹಿಂದೆ ಇಂತಹದೆ ಘಟನೆಯೊಂದು ಉತ್ತರ ಪ್ರದೇಶದ ಮಣಿಪುರಿಯಲ್ಲಿ ನಡೆದಿತ್ತು . ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದ ಹುಡುಗಿಯನ್ನು ತನ್ನ ತಾಯಿಯೇ ಕೊಲ್ಲಲು ಹೊರಟ ಧುರಂತ ಘಟನೆಯ ಬಗ್ಗೆ ಇಲ್ಲಿದೆ ನೋಡಿ.

15 ವರ್ಷದ ಬಾಲಕಿಯ ಮೇಲೆ 25ರ ಹರೆಯದ ಯುವಕ ಅತ್ಯಾಚಾರವೆಸಗಿದ್ದಾನೆ . ಈಗ ಅದೇ 15 ವರ್ಷದ ಬಾಲಕಿ ಅತ್ಯಾಚಾರಕ್ಕೊಳಗಾಗಿ ಇದೀಗ ಗರ್ಭಿಣಿಯಾಗಿದ್ದು, ಈ ವಿಷಯ ತಿಳಿದ ಆಕೆಯ ತಾಯಿ ಮತ್ತು ಸಹೋದರಿ ಅಪ್ರಾಪ್ತ ಬಾಲಕಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಪ್ರಯತ್ನ ಪಟ್ಟಿರುವ ಘಟನೆ ಮಣಿಪುರಿಯಲ್ಲಿ(Uttar Pradesh ) ನಡೆದಿದೆ.

ಇದನ್ನೂ ಓದಿ : DY Chandrachood : ಸುಪೀಂಕೋರ್ಟ್‌ ನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಡಿವೈ ಚಂದ್ರಚೂಡ್‌

ಇದನ್ನೂ ಓದಿ : Anil Kumble watched Kantara : ಕಾಂತಾರ ಸಿನಿಮಾ ವೀಕ್ಷಿಸಿ ಶಹಬ್ಬಾಸ್ ಅಂದ್ರು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ

ಗರ್ಭಿಣಿಯಾಗಿರುವ ತನ್ನ ಮಗಳನ್ನು ಆರೋಪಿಗೆ ಮದುವೆ ಮಾಡಿಸಿ ಕೊಡುವುದಾಗಿ ಹೇಳಿ ನಂಬಿಸಿ ಆಕೆಯನ್ನು ಮನೆಗೆ ಕರೆದೊಯ್ದು, ರಾತ್ರಿ ವೇಳೆಯಲ್ಲಿ ಅಪ್ರಾಪ್ತೆ ಬಾಲಕಿಯ ಮೇಲೆ ಎಣ್ಣೆ ಸುರಿದು ಕೊಲ್ಲಲು ಪ್ರಯತ್ನ ಪಟ್ಟಿದ್ದಾರೆ.

ಇದನ್ನೂ ಓದಿ : Madhya Pradesh : ಪತ್ನಿಯನ್ನು ಕೊಲ್ಲಲು ಹೂಡಿದ್ದ ಸಂಚಿಗೆ ಅತ್ತೆ ಬಲಿ : ಅಷ್ಟಕ್ಕೂ ಆಗಿದ್ದೇನು ?

ಬೆಂಕಿಯಲ್ಲಿ ಬೇಯುತ್ತಿರುವ ಅಪ್ರಾಪ್ತ ಬಾಲಕಿಯನ್ನು ನೆರೆಹೊರೆಯವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಂಕಿಯಲ್ಲಿ ಬೆಂದು ತೀವ್ರ ಸುಟ್ಟ ಗಾಯಗಳಾಗಿದ್ದ ಆಕೆಯನ್ನು ಸೈಫಾಯಿ ವೈಧ್ಯಕೀಯ ಕಾಲೇಜಿಗೆ ಕರೆದೊಯ್ದು ದಾಖಲಿಸಲಾಗಿದೆ. ಆಕೆಯ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಪೋಲೀಸ್‌ ವರಿಷ್ಠಾಧಿಕಾರಿ ಕಮಲೇಶ್‌ ದೀಕ್ಷಿತ್‌ ತಿಳಿಸಿದ್ದಾರೆ.

ಇದನ್ನೂ ಓದಿ : Bada Poojary died : ಕಂಬಳ ಕ್ಷೇತ್ರದ ಸಾಧಕ ಇರುವೈಲ್‌ ಪಾಣಿಲ ಬಾಡ ಪೂಜಾರಿ ವಿಧಿವಶ

ಅತ್ಯಾಚಾರವೆಸಗಿದ 25ರ ಹರೆಯದ ಯುವಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು ,ಅಪ್ರಾಪ್ತ ಬಾಲಕಿ ತಾಯಿ ಮತ್ತು ಸಹೋದರಿಯ ಮೇಲೆ ಕೊಲೆ ಯತ್ನದ ಆರೋಪವನ್ನು ಹೊರಿಸಲಾಗಿದೆ ಎಂದು ಪೋಲೀಸ್‌ ಅಧಿಕಾರಿಗಳು ತಿಳಿಸಿದ್ದು, ಆಕೆಯ ತಾಯಿಯನ್ನು ಬಂಧಿಸಿ ಜೈಲಿಗೆ ಕರೆದೊಯ್ಯಲಾಗಿದೆ. ಆರೋಪಿ ಯುವಕ ಮತ್ತು ಸಹೋದರಿ ತಲೆ ಮರೆಸಿಕೊಂಡಿದ್ದು, ಅವರಿಬ್ಬರ ಹುಡುಕಾಟಕ್ಕೆ ಪೋಲೀಸರು ಬಲೆ ಬೀಸಿದ್ದಾರೆ.

(Uttar Pradesh) Rape cases are increasing everywhere and so many minor girls have become victims. But it is regrettable that no one has been able to prevent this

Comments are closed.