ಜಮ್ಮು & ಕಾಶ್ಮೀರ : Amarnath : ದಕ್ಷಿಣ ಕಾಶ್ಮೀರದ ಪವಿತ್ರ ಅಮರನಾಥ ಗುಹೆಯ ಬಳಿಯಲ್ಲಿ ಮೇಘಸ್ಫೋಟ ಸಂಭವಿಸಿದ್ದು ಕನಿಷ್ಟ 16 ಮಂದಿ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಇನ್ನು ಮೇಘಸ್ಫೋಟಕ್ಕೆ ತುತ್ತಾದ ಅಮರನಾಥ ಗುಹೆಯಿಂದ ಸೋನಾಮಾರ್ಗ್ನ ಬಾಲ್ಟಾಲ್ ಬೇಸ್ ಕ್ಯಾಂಪ್ ತಲುಪುವಲ್ಲಿ ಯಶಸ್ವಿಯಾದ ಕೆಲವು ಯಾತ್ರಾರ್ಥಿಗಳು ತಮಗಾದ ಘೋರ ಅನುಭವವನ್ನು ವಿವರಿಸಿದ್ದಾರೆ.
ಉತ್ತರ ಪ್ರದೇಶದ ಯಾತ್ರಾರ್ಥಿ ದೀಪಕ್ ಚೌಹಾಣ್ ಎಂಬವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು. ಮೇಘಸ್ಫೋಟವಾಗುತ್ತಿದ್ದಂತೆಯೇ ಅಲ್ಲಿ ಕಾಲ್ತುಳಿತದ ಪರಿಸ್ಥಿತಿ ಎದುರಾಯ್ತು. ಆದರೆ ಭಾರತೀಯ ಸೇನೆಯ ಸಿಬ್ಬಂದಿ ನಮಗೆ ತುಂಬಾನೇ ಸಹಾಯ ಮಾಡಿದರು. ನೀರಿನ ರಭಸಕ್ಕೆ ಅನೇಕ ಪೆಂಡಾಲ್ಗಳು ಕೊಚ್ಚಿ ಹೋದವು ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಮೂಲದ ಮತ್ತೊಬ್ಬ ಯಾತ್ರಾರ್ಥಿ ಸುಮಿತ್ ಎಂಬವರು ಈ ವಿಚಾರವಾಗಿ ಮಾತನಾಡಿದ್ದು, ಮೇಘಸ್ಫೋಟದಿಂದ ಉಂಟಾದ ಪ್ರವಾಹವು ದೊಡ್ಡ ದೊಡ್ಡ ಬಂಡೆಗಲ್ಲುಗಳನ್ನೇ ಕೊಚ್ಚಿಕೊಂಡು ಸಾಗಿತ್ತು. ಮೇಘಸ್ಫೋಟ ನಡೆದ ಸ್ಥಳದಿಂದ ನಾವು ಕೇವಲ 2 ಕಿಲೋಮೀಟರ್ ದೂರದಲ್ಲಿ ಇದ್ದೆವು ಎಂದು ಹೇಳಿದ್ದಾರೆ .
ಮೇಘಸ್ಫೋಟ ಉಂಟಾಗುತ್ತಿದೆ ಎಂಬುದನ್ನೇ ನಮ್ಮ ಬಳಿ ನಂಬಲು ಸಾಧ್ಯವಾಗಲಿಲ್ಲ.ಸ್ವಲ್ಪ ಸಮಯದ ಬಳಿಕ ನಾವು ನೀರನ್ನು ಮಾತ್ರ ನೋಡಿದೆವು. ಬೋಲೆನಾಥನ ಕೃಪೆಯಿಂದ ನಾವು ಏಳೆಂಟು ಜನರ ಗುಂಪು ಪ್ರಾಣಾಪಾಯದಿಂದ ಪಾರಾದೆವು. ಆದರೆ ಅಲ್ಲಿದ್ದ ಅನೇಕ ಜನರು ಹಾಗೂ ಅವರ ಲಗೇಜ್ಗಳೆಲ್ಲ ಕೊಚ್ಚಿ ಹೋಗುತ್ತಿದ್ದುದ್ದನ್ನು ನೋಡುವಾಗ ಮನಸ್ಸಿಗೆ ಘಾಸಿಯೆನಿಸುತ್ತಿತ್ತು ಎಂದು ಮತ್ತೊಬ್ಬ ಯಾತ್ರಿಕ ಹೇಳಿದ್ದಾರೆ.
ಮೇಘ ಸ್ಫೋಟ ನಡೆದು ಕೇವಲ 10 ನಿಮಿಷಗಳಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಆ ನೀರಿನಲ್ಲಿ ಹೆಚ್ಚಿನ ಸಂಖ್ಯೆಯ ಬಂಡೆಗಳು ಕೊಚ್ಚಿ ಹೋಗಿವೆ. ಯಾತ್ರೆಗೆ ಸುಮಾರು 15 ಸಾವಿರ ಮಂದಿ ಯಾತ್ರಾರ್ಥಿಗಳು ಬಂದಿದ್ದರು. ಭಾರೀ ಮಳೆಯ ಹೊರತಾಗಿಯೂ ಯಾತ್ರಾರ್ಥಿಗಳು ಬರುತ್ತಲೇ ಇದ್ದರು ಎಂದು ಹೇಳಿದರು.
ಇದನ್ನು ಓದಿ : ravindra jadeja : ಸಿಎಸ್ಕೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್ಗಳನ್ನು ಡಿಲೀಟ್ ಮಾಡಿದ ರವೀಂದ್ರ ಜಡೇಜಾ
ಇದನ್ನೂ ಓದಿ : amarnath yatra : ಅಮರನಾಥ ಯಾತ್ರೆಯಲ್ಲಿರುವ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸೂಕ್ತ ಕ್ರಮ : ಸಿಎಂ ಬೊಮ್ಮಾಯಿ
Amarnath: Rescued pilgrims narrate horrifying experiences of witnessing cloudburst