ನವದೆಹಲಿ : ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.
ಈ ಬಾರಿಯ ಅಮರನಾಥ ಯಾತ್ರೆ ಜೂನ್ 28 ರಂದು ಪಹಲ್ಗಮ್ ಮತ್ತು ಬಾಲ್ಟಾಲ್ ಮಾರ್ಗಗಳ ಮೂಲಕ ಪ್ರಾರಂಭವಾಗಿ ಆಗಸ್ಟ್ 22 ರಂದು ಕೊನೆಯಾಗ ಬೇಕಾಗಿತ್ತು. ಹಿಮಾಲಯದ ಎತ್ತರದ ಪ್ರದೇಶ ಗಳಲ್ಲಿ 3,880 ಮೀಟರ್ ಎತ್ತರದಲ್ಲಿರುವ ಶಿವನ ಗುಹೆ ತಲುಪಲು ಸುಮಾರು 56 ದಿನಗಳ ಪ್ರಯಾಣವನ್ನು ಕೈಗೊಳ್ಳ ಬೇಕಾಗಿತ್ತು. ಆದರೆ ಜಮ್ಮು ಕಾಶ್ಮೀರಾ ಸರ್ಕಾರ ನಿರ್ಧರಿಸಿದೆ. ಆದರೆ, ಭಕ್ತರು ಬಾಬಾ ಬಾರ್ಫಾನಿಯನ್ನ ಆನ್‌ಲೈನ್‌ನಲ್ಲಿ ನೋಡಲು ಸಾಧ್ಯವಾಗುತ್ತದೆ.
ಭಾರತೀಯ ಸೇನೆ ಈ ಬಾರಿ ಅಮರನಾಥ ಯಾತ್ರೆ ಕೈಗೊಳ್ಳಲು ಹೇಳಿತ್ತು. ಆದರೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆಯಿದೆ. ಈ ಹಿನ್ನೆಲೆ ಯಲ್ಲಿ ರದ್ದುಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.