ಸ್ಯಾನ್ ಫ್ರಾನ್ಸಿಸ್ಕೋ : ವಿಶ್ವದ ಪ್ರತಿಷ್ಠಿತ ಈ ಕಾಮರ್ಸ್ ಸಂಸ್ಥೆಯಾಗಿರುವ ಅಮೆಝಾನ್ ಕಂಪೆನಿಯ 20 ಸಾವಿರಕ್ಕೂ ಅಧಿಕ ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಖುದ್ದು ಅಮೇಜಾನ್ ಈ ಕುರಿತು ಮಾಹಿತಿಯನ್ನು ನೀಡಿದೆ.

ಕೊರೊನಾ ವೈರಸ್ ಸೋಂಕು ಮಾರ್ಚ್ ತಿಂಗಳಿನಿಂದಲೇ ಕಾಣಿಸಿಕೊಂಡಿದ್ದು, ಇಂದಿನವರೆಗೆ ಒಟ್ಟು 19,800 ಮಂದಿ ವೈರಸ್ ಸೋಂಕು ದೃಢಪಟ್ಟಿದ್ದು, ಹಲವರು ಕೆಲಸಗಾರರು ಕ್ವಾರಂಟೈನ್ ನಲ್ಲಿದ್ದಾರೆ.

ಅಮೆರಿಕದ ಫುಡ್ ಮಾರ್ಕೆಟ್ ಗ್ರಾಸರಿ ಸೇರಿ 1.37 ಮಿಲಿಯನ್ ಫ್ರಂಟ್‌ಲೈನ್ ಕೆಲಸಗಾರರಲ್ಲಿ ಕೊರೋನಾ ವೈರಸ್ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಕಂಡುಬಂದಿದೆ. ತಮ್ಮ ಬಗ್ಗೆ ಕಂಪನಿ ಕಾಳಜಿ ವಹಿಸುತ್ತಿಲ್ಲ , ಯಾವುದೇ ಮಾಹಿತಿ ಹಂಚಿಕೊಳ್ಳುತ್ತಿಲ್ಲ ಎಂದು ಅಮೆಝಾನ್ ಕೆಲಸಗಾರರು ಆರೋಪಿಸಿದ ಬೆನ್ನಲ್ಲೇ ಕಂಪನಿ ಸೋಂಕಿತರ ಮಾಹಿತಿ ಬಹಿರಂಗಪಡಿಸಿದೆ.

ಪ್ರತಿದಿನ 650 ಸೈಟ್‌ಗಳಲ್ಲಿ 50 ಸಾವಿರ ಜನರ ಕೊರೋನಾ ಪರೀಕ್ಷೆ ನಡೆಸಲಾಗುತ್ತಿದ್ದು, ಕೊರೋನಾ ಪ್ರಾರಂಭವಾದಾಗಿನಿಂದ ಕಂಪನಿ ಸಿಬ್ಬಂದಿಗೆ ಮಾಹಿತಿ ನೀಡುತ್ತಲೇ ಇದೆ.