Top 10 Polluted Cities: ಏಷ್ಯಾದ ಟಾಪ್-10 ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ್ದೇ ಮೇಲುಗೈ..!

ನವದೆಹಲಿ: Top 10 pollutes cities: ದೇಶದಲ್ಲಿ ದೀಪಾವಳಿ ಸಂಭ್ರಮ ಕಳೆಗಟ್ಟಿದ್ದರೆ, ಅತ್ತ ವಿಶ್ವ ವಾಯುಗುಣಮಟ್ಟ ಸೂಚ್ಯಂಕ (WAQI) ವು ಭಾರತದ ಜನರನ್ನೇ ಬಡಿದೆಬ್ಬಿಸುವ ವರದಿಯೊಂದನ್ನು ನೀಡಿದೆ. ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಏಷ್ಯಾದ ಅತೀ ಹೆಚ್ಚು 10 ನಗರಗಳ ಪೈಕಿಯಲ್ಲಿ ಭಾರತದ್ದೇ 8 ನಗರಗಳಿವೆ ಎಂದು ಡಬ್ಲ್ಯೂಎಕ್ಯೂಐ ಎಂಬ ಆಘಾತಕಾರಿ ಮಾಹಿತಿಯೊಂದನ್ನು ಹೊರಹಾಕಿದೆ.

ಏಷ್ಯಾದ ಅತೀ ಹೆಚ್ಚು ಕಲುಷಿತಗೊಂಡಿರುವ 10 ನಗರಗಳ ಮೇಲೆ ವಿಶ್ವ ವಾಯುಗುಣಮಟ್ಟ ಸೂಚ್ಯಂಕ ಸಮೀಕ್ಷೆ ನಡೆಸಿದೆ. ಈ ಪೈಕಿ ಭಾರತದ 8 ನಗರಗಳು ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ದೆಹಲಿಯ ಗುರುಗ್ರಾಮ್ ಕಲುಷಿಂತ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾ ಎರಡನೇ ಸ್ಥಾನ ಪಡೆದುಕೊಂಡಿದೆ. ಇನ್ನುಳಿದಂತೆ ಮಹಾರಾಷ್ಟ್ರದ ಮುಂಬೈ, ಹರಿಯಾಣದ ಧಾರುಹೆರಾ, ಬಿಹಾರದ ಮುಜಾಫರ್ ಪುರ, ಉತ್ತರ ಪ್ರದೇಶದ ಲಖನೌ, ಭೋಪಾಲ್‍ನ ಚೌರಹಾ, ಮಧ್ಯಪ್ರದೇಶದ ದೇವಾಸ್ ನಗರಗಳು ಅತೀ ಹೆಚ್ಚು ಕಲುಷಿತ ನಗರಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಆದರೆ ವಾಯುಮಾಲಿನ್ಯದಿಂದಲೇ ಸದಾ ಸುದ್ದಿಯಲ್ಲಿರುವ ರಾಷ್ಟ್ರ ರಾಜಧಾನಿ ದೆಹಲಿ ಈ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದೇ ಇರುವುದು ಅಚ್ಚರಿಯ ಸಂಗತಿಯಾಗಿದೆ. ಭಾರತದ 8 ನಗರಗಳನ್ನು ಹೊರತುಪಡಿಸಿ ಚೀನಾದ ಲಝೋವುದ ಕ್ಷಿಯಾವೊಶಾಂಗ್ ಬಂದರು ಮತ್ತು ಮಂಗೋಲಿಯಾದ ಉಲಾನ್‍ಬತಾರ್‍ನ ಬಯಾಂಕೊಷು ಕಲುಷಿತ ನಗರಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ.

ಭಾರತದ ವಾಯುಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಈ ಹಿನ್ನೆಲೆ ಈ ಬಾರಿಯ ದೀಪಾವಳಿ ಹಬ್ಬದಂದು ಪಟಾಕಿಗಳ ಮೇಲೆ ನಿರ್ಬಂಧ ಹೇರಲಾಗಿದೆ. ದೆಹಲಿ ಯಲ್ಲಿ ಪಟಾಕಿಗಳನ್ನು ಬ್ಯಾನ್ ಮಾಡಲಾಗಿದ್ದು, ನಿಯಮ ಉಲ್ಲಂಘಿಸಿದರೆ 6 ತಿಂಗಳ ಜೈಲು ಶಿಕ್ಷೆ ಜೊತೆಗೆ 200 ರೂ.ದಂಡ ವಿಧಿಸಲಾಗಿದೆ. ಜೊತೆಗೆ ಪಟಾಕಿಗಳ ಉತ್ಪಾದಕರಿಗೆ, ಸಂಗ್ರಹಣೆ ಮತ್ತು ಮಾರಾಟ ಮಾಡುವವರಿಗೆ 3 ವರ್ಷಗಳ ಕಾಲ ಜೈಲು ಶಿಕ್ಷೆ, 5 ಸಾವಿರ ರೂ.ದಂಡ ಹೊರಿಸಲಾಗಿದೆ. ಪಂಜಾಬ್, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಟಾಕಿಗಳ ಮೇಲೆ ವಿವಿಧ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಕೆಲ ರಾಜ್ಯಗಳಲ್ಲಿ ಹಸಿರು ಪಟಾಕಿ ಮಾತ್ರ ಸಿಡಿಸಲು ಅನುಮತಿ ನೀಡಲಾಗಿದೆ.

ಅಂದ ಹಾಗೆ, ಉತ್ತಮ ವಾಯುಗುಣಮಟ್ಟದ ನಗರಗಳ ಪಟ್ಟಿಯೂ ಬಿಡುಗಡೆ ಆಗಿದ್ದು, ಆಂಧ್ರಪ್ರದೇಶದ ರಾಜಾಮಹೇಂದ್ರವರ್ಮಂ ಸ್ಥಾನ ಪಡೆದಿದೆ. ಈ ಮನ್ನಣೆಗೆ ಪಾತ್ರವಾದ ಭಾರತದ ಏಕೈಕ ನಗರ ಇದಾಗಿದೆ.

ಇದನ್ನೂ ಓದಿ: Britain PM: ರಿಷಿ ಸುನಕ್ ಹಾದಿ ಮತ್ತಷ್ಟು ಸುಗಮ: ಪಿಎಂ ರೇಸ್‍ನಿಂದ ಹಿಂದೆ ಸರಿದ ಬೋರಿಸ್..!

ಇದನ್ನೂ ಓದಿ: Rare Pink Diamond : ಅತ್ಯಂತ ಅಪರೂಪದ ಗುಲಾಬಿ ಬಣ್ಣದ ವಜ್ರ ಆಫ್ರಿಕಾದಲ್ಲಿ ಪತ್ತೆ : ಇದರ ಬೆಲೆ ಎಷ್ಟಿದೆ ಗೊತ್ತಾ

Among 10 most polluted cities in Asia, 8 are from India; Delhi not in list 

Comments are closed.