ಗುಜರಾತ್ : Amul hikes milk prices : ಸಧ್ಯ ದೇಶದಲ್ಲಿ ಸಾಲು ಸಾಲು ಹಬ್ಬಗಳ ಋತು ಆರಂಭಗೊಂಡಿದೆ. ಈ ನಡುವೆಯೇ ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ತನ್ನ ಉತ್ಪನ್ನಗಳಲ್ಲಿ ಒಂದಾದ ಅಮುಲ್ ಬ್ರ್ಯಾಂಡ್ನ ಹಾಲಿನ ದರವನ್ನು ಏರಿಕೆ ಮಾಡಿದೆ. ಪ್ರತಿ ಲೀಟರ್ ಅಮುಲ್ ಹಾಲಿಗೆ 2 ರೂಪಾಯಿ ಏರಿಕೆ ಮಾಡಲಾಗಿದ್ದು ಈ ಬೆಲೆ ಏರಿಕೆಯು ಗುಜರಾತ್ ರಾಜ್ಯವನ್ನು ಹೊರತುಪಡಿಸಿ ಮಿಕ್ಕೆಲ್ಲ ರಾಜ್ಯಗಳಿಗೆ ಅನ್ವಯವಾಗಲಿದೆ. ಪೂರ್ಣ ಕೆನೆಯುಕ್ತ ಹಾಲಿನ ಬೆಲೆಯು ಲೀಟರ್ಗೆ ಅರವತ್ತೊಂದು ರೂಪಾಯಿಗಳಿಂದ ಅರವತ್ತಮೂರು ರೂಪಾಯಿಗಳವರೆಗೆ ಏರಿಕೆ ಕಂಡಿದೆ. ಇದು ಜನಸಾಮಾನ್ಯರ ಜೇಬಿಗೆ ಹಬ್ಬದ ಸಂದರ್ಭದಲ್ಲಿಯೇ ಕತ್ತರಿ ಹಾಕಿದಂತಾಗಿದೆ. ಅಮುಲ್ ಗೋಲ್ಡ್ ಹಾಗೂ ಎಮ್ಮೆಯ ಹಾಲಿನ ದರವನ್ನು ಲೀಟರ್ಗೆ ಎರಡು ರೂಪಾಯಿ ಏರಿಕೆ ಮಾಡಿದೆ.
ಗುಜರಾತ್ನಲ್ಲಿ ಈ ವರ್ಷದ ಅಂತ್ಯದಲ್ಲಿ ಚುನಾವಣೆ ಕೂಡ ಇರುವುದರಿಂದ ಈ ರಾಜ್ಯದಲ್ಲಿ ಮಾತ್ರ ಅಮುಲ್ ಹಾಲಿನ ದರದಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ. ಗುಜರಾತ್ ಹೊರತುಪಡಿಸಿ ಮಿಕ್ಕೆಲ್ಲ ರಾಜ್ಯಗಳಲ್ಲಿ ಅಮುಲ್ ಕೆನೆಭರಿತ ಹಾಲು, ಗೋಲ್ಡ್ ಹಾಗೂ ಎಮ್ಮೆ ಹಾಲಿನ ಬೆಲೆಯನ್ನು ಲೀಟರ್ಗೆ ಎರಡು ರೂಪಾಯಿ ಏರಿಕೆ ಮಾಡಲಾಗಿದೆ ಎಂದು ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ ಲಿಮಿಟೆಡ್ನ ಎಂಡಿ ಆರ್ಎಸ್ ಸೋಧಿ ಹೇಳಿಕೆ ನೀಡಿದ್ದಾರೆ.
ಹಾಲಿನ ಕೊಬ್ಬಿನ ದರಕ್ಕೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಲಿನ ದರವನ್ನು ಹೆಚ್ಚಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮದರ್ ಡೈರಿಯ ಸಂಗ್ರಹಣೆ ವೆಚ್ಚದಲ್ಲಿನ ಹೆಚ್ಚಳವನ್ನು ಸರಿದೂಗಿಸಲು ಬೆಲೆಗಳನ್ನು ಹೆಚ್ಚಿಸಲಾಗಿದೆ. ಗುಜರಾತ್ನ ಇತರೆ ಕೆಲವು ಮಾರುಕಟ್ಟೆಗಳಲ್ಲಿ ಕೊಬ್ಬಿನ ಬೆಲೆ ಏರಿಕೆಯಿಂದಾಗಿ ಗೋಲ್ಡ್ ಹಾಗೂ ಎಮ್ಮೆ ಹಾಲಿನ ಬೆಲೆಯನ್ನು ಲೀಟರ್ಗೆ ಎರಡು ರೂಪಾಯಿಗಳಷ್ಟು ಏರಿಕೆ ಮಾಡಲಾಗಿದೆ ಎಂದು ಆರ್ಎಸ್ ಸೋಧಿ ಹೇಳಿದರು.
ಇದನ್ನು ಓದಿ : APJ Abdul Kalam Birthday : ಭಾರತದ “ಕ್ಷಿಪಣಿ ಮಾನವ ” ಡಾ. ಎಪಿಜೆ ಅಬ್ದುಲ್ ಕಲಾಂ ಜನ್ಮ ದಿನಾಚರಣೆ
ಇದನ್ನೂ ಓದಿ : BCCI may lose 955 crore: ಬಿಸಿಸಿಐಗೆ ಬಿಗ್ ಶಾಕ್ ಕೊಟ್ಟ ಮೋದಿ ಸರ್ಕಾರ, ವಿಶ್ವಕಪ್ ಆಯೋಜನೆಗೆ 955 ಕೋಟಿ ಟ್ಯಾಕ್ಸ್
Amul hikes milk prices by Rs 2 per litre, except in poll-bound Gujarat