India wins women’s Asia Cup : ಪುರುಷರಿಗೆ ಆಗದ್ದನ್ನು ವನಿತೆಯರು ಮಾಡಿ ತೋರಿಸಿದ್ರು, 7ನೇ ಬಾರಿ ಏಷ್ಯಾ ಕಪ್ ಗೆದ್ದ ಭಾರತ ಮಹಿಳಾ ತಂಡ

ಸಿಲ್ಹೆಟ್: IND vs SL Womens Asia Cup 2022 : ಪುರುಷರ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಕನಿಷ್ಠ ಫೈನಲ್ ಕೂಡ ತಲುಪಲಾಗದೆ ಅವಮಾನಕರ ರೀತಿಯಲ್ಲಿ ಟೂರ್ನಿಯಿಂದ ಹೊರ ಬಿದ್ದಿತ್ತು. ರೋಹಿತ್ ಶರ್ಮಾ ಬಳಗ ಕೈಯಲ್ಲಿ ಸಾಧ್ಯವಾಗದ್ದನ್ನು ಭಾರ ಮಹಿಳಾ ತಂಡ ಮಾಡಿ ತೋರಿಸಿದೆ. ಮಹಿಳಾ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಭಾರತದ ವನಿತೆಯರು ದಾಖಲೆಯ 7ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ.

ಬಾಂಗ್ಲಾದೇಶದ ಸಿಲ್ಹೆಟ್’ನಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹರ್ಮನ್’ಪ್ರೀತ್ ಕೌರ್ ಸಾರಥ್ಯದ ಭಾರತ ತಂಡ, ಚಾಮರಿ ಅಟಪಟ್ಟು ನಾಯಕತ್ವದ ಶ್ರೀಲಂಕಾ ತಂಡವನ್ನು 8 ವಿಕೆಟ್’ಗಳಿಂದ ಭರ್ಜರಿಯಾಗಿ ಮಣಿಸಿತು. ಈ ಮೂಲಕ 7ನೇ ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು.

ಏಕಪಕ್ಷೀಯವಾಗಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಭಾರತೀಯ ವನಿತೆಯರು ಬಿಗು ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ 20 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 65 ರನ್ ಕಲೆ ಹಾಕಿತು. ಭಾರತ ಪರ ಮಧ್ಯಮ ವೇಗದ ಬೌಲರ್ ರೇಣುಕಾ ಸಿಂಗ್ 3 ಓವರ್’ಗಳಲ್ಲಿ ಕೇವಲ 5 ರನ್ನಿತ್ತು 3 ವಿಕೆಟ್ ಪಡೆದರೆ, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಮತ್ತು ಸ್ನೇಹ್ ರಾಣಾ ತಲಾ 2 ವಿಕೆಟ್ ಉರುಳಿಸಿದರು.

ಸುಲಭ ಗುರಿ ಬೆನ್ನಟ್ಟಿದ ಭಾರತ 8.3 ಓವರ್’ಗಳಲ್ಲಿ 2 ವಿಕೆಟ್ ಒಪ್ಪಿಸಿ 71 ರನ್ ಗಳಿಸಿ ಸುಲಭ ಜಯ ದಾಖಿಲಿಸಿತು. ಶೆಫಾಲಿ ವರ್ಮಾ (5) ಮತ್ತು ಜೆಮಿಮಾ ರಾಡ್ರಿಗ್ಸ್ (2) ಬೇಗನೆ ಔಟಾದರೂ ಉಪನಾಯಕಿ ಸ್ಮೃತಿ ಮಂಧಾನ ಕೇವಲ 25 ಎಶೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್’ಗಳ ನೆರವಿನಿಂದ ಅಜೇಯ 51 ರನ್ ಸಿಡಿಸಿ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ನಾಯಕಿ ಹರ್ಮನ್’ಪ್ರೀತ್ ಕೌರ್ ಅಜೇಯ11 ರನ್ ಗಳಿಸಿದರು.

ಮಹಿಳಾ ಏಷ್ಯಾ ಕಪ್ ಚಾಂಪಿಯನ್ಸ್
2004: ಭಾರತ (ಏಕದಿನ)
2005: ಭಾರತ (ಏಕದಿನ)
2006: ಭಾರತ (ಏಕದಿನ)
2008: ಭಾರತ (ಏಕದಿನ)
2012: ಭಾರತ (ಟಿ20)
2016: ಭಾರತ (ಟಿ20)
2018: ಬಾಂಗ್ಲಾದೇಶ (ಟಿ20)
2022: ಭಾರತ (ಟಿ20

ಇದನ್ನೂ ಓದಿ : Virat Kohli Rohit Sharma : ರೋಹಿತ್ ಅಭಿಮಾನಿಯನ್ನು ಕೊಂದ ವಿರಾಟ್ ಫ್ಯಾನ್, ಕೊಹ್ಲಿಯನ್ನು ಅರೆಸ್ಟ್ ಮಾಡಲು ಆಗ್ರಹ

ಇದನ್ನೂ ಓದಿ : MS Dhoni starts Practicing : ಐಪಿಎಲ್‌ಗೆ ಧೋನಿ ತಾಲೀಮು ಶುರು, ಜಾರ್ಖಂಡ್’ನಲ್ಲಿ ಅಭ್ಯಾಸ ಆರಂಭಿಸಿದ “ತಲಾ”

IND vs SL Womens Asia Cup 2022 Smriti Mandhana 50 runs India win by 8 wicket

Comments are closed.