ನವದೆಹಲಿ : ಒಂದೆಡೆ ಕೊರೊನಾ ಲಾಕ್ ಡೌನ್ ಸಂಕಷ್ಟ, ಇನ್ನೊಂದೆಡೆ ತೈಲಬೆಲೆ ಏರಿಕೆಯ ಬಿಸಿ. ಈ ನಡುವಲ್ಲೇ ಜುಲೈ 1 ರಿಂದ ಹಾಲಿನ ಬೆಲೆ ಹೆಚ್ಚಳವಾಗಲಿದೆ. ಈ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.

ಅಮೂಲ್ ಸಂಸ್ಥೆ ತನ್ನ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಲಿದೆ. ಇದರಿಂದಾಗಿ ದೆಹಲಿ, ಗುಜರಾತ್ ಮತ್ತು ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಮೂಲ್ ಹಾಲಿನ ಹೊಸ ಬೆಲೆ ಹೆಚ್ಚಳವಾಗ ಲಿದೆ. ಅಮೂಲ್ ಕಂಪನಿ ತನ್ನ ಎಲ್ಲಾ ಬ್ರಾಂಡ್‌ಗಳ ಬೆಲೆ ಯನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸಿದೆ.

ಅಮೂಲ್ ಗೋಲ್ಡ್ ಹಾಲು ಒಂದು ಲೀಟರ್ ಗೆ 58 ರೂಪಾಯಿ ಇದೆ. ಅಲ್ಲದೇ ಅಮೂಲ್ ಹಾಲಿನ ಇತರ ಉತ್ಪನ್ನಗಳಾದ ಅಮೂಲ್ ಗೋಲ್ಡ್, ಅಮೂಲ್ ಶಕ್ತಿ, ಅಮೂಲ್ ತಾಜಾ, ಅಮೂಲ್ ಟಿ-ಸ್ಪೆಷಲ್, ಅಮೂಲ್ ಸ್ಲಿಮ್ ಬೆಲೆ ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಾಗಲಿದೆ. ಕೊರೊನಾದಿಂದಾಗಿ ಹಾಲು ವ್ಯಾಪಾರಸ್ಥರ ಒತ್ತಡಕ್ಕೆ ಮಣಿದು ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.