ಖ್ಯಾತ ನಟಿಯ ಬಾಳಲ್ಲಿ ಕಣ್ಣೀರು ತರಿಸಿದ ಕೊರೊನಾ : 15 ದಿನಗಳ ಅಂತರದಲ್ಲಿ ಮಗ, ಪತಿ ಸಾವು

ಆಕೆ ದಕ್ಷಿಣ ಭಾರತದ ಖ್ಯಾತ ನಟಿ. ಪತಿ, ಮಗನ ಜೊತೆಗೆ ನೆಮ್ಮದಿ ಯಾಗಿದ್ದ ನಟಿಯ ಬದುಕಿಗೆ ಕೊರೊನಾ ಹೆಮ್ಮಾರಿ ಕೊಳ್ಳಿಯಿಟ್ಟಿದೆ‌. ಕೇವಲ 15 ದಿನಗಳ ಅಂತರದಲ್ಲಿ ಪತಿ, ಮಗನನ್ನು ಹೆಮ್ಮಾರಿ ಬಲಿ ಪಡೆದಿದೆ.

ಮಾರಣಾಂತಿಕ ಕೊರೊನಾ ವೈರಸ್‌  ಸೋಂಕಿನ ಅಬ್ಬರಕ್ಕೆ ಖ್ಯಾತ ನಟಿ ಕವಿತಾ ಬದುಕು ನರಕವಾಗಿ ಪರಿಣಮಿಸಿದೆ. ವುಹಾನ್ ವೈರಸ್ ಗೆ ನಟಿ ಕವಿತಾ ಅವರ ಪತಿ ಮತ್ತು ಪುತ್ರ ಬಲಿಯಾಗಿದ್ದಾರೆ. ಕೈ ಹಿಡಿದ ಪತಿ ದಶರಥ ರಾಜ್ ಮತ್ತು ಹೆತ್ತ ಮಗ ಸಂಜಯ್ ರೂಪ್ ಅವರನ್ನು ಕಳೆದುಕೊಂಡ ನಟಿ ಕವಿತಾ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದಾರೆ.

ನಟಿ ಕವಿತಾ ಅವರ ಮಗ ಸಂಜಯ್ ರೂಪ್​​ಗೆ ಕೊರೋನಾ ಸೋಂಕು ತಗುಲಿ, ಚಿಕಿತ್ಸೆ ಫಲಿಸದೆ​​ ಜೂನ್​ 15ರಂದು ಸಂಜಯ್​ ಸಾವನ್ನಪ್ಪಿ ದ್ದರು. ಇದೀಗ ಕವಿತಾ ಅವರ ಪತಿ ದಶರಥ ರಾಜ್ ಗೆ  ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ   ಅವರು ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರೆಳಿದಿದ್ದಾರೆ .

ದಕ್ಷಿಣ ಭಾರತದ ಚಿತ್ರರಂಗದ ಜನಪ್ರಿಯ ನಟಿ ಕವಿತಾ. ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿ ಕವಿತಾ  ಅಭಿನಯಿಸಿದ್ದಾರೆ. ತಮ್ಮ 11ನೇ ವರ್ಷ ವಯಸ್ಸಿ ನಲ್ಲಿಯೇ ನಟಿ ಕವಿತಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 1976ರಲ್ಲಿ ತೆರೆಕಂಡ ಓ ಮಂಜು ನಟಿ ಕವಿತಾ ಅಭಿನಯದ ಚೊಚ್ಚಲ ಚಿತ್ರ. ಸಿರಿ ಸಿರಿ ಮುವ್ವ, ಯುಗಳಗೀತಂ, ಮೀನಾಕ್ಷಿ,  ಕನ್ನಡದ ಸಹೋದರರ ಸವಾಲ್, ಕಿಲಾಡಿ ಕಿಟ್ಟು ಸೇರಿದಂತೆ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕವಿತಾ ನಟಿಸಿದ್ದಾರೆ. ಕೆಲವು ಧಾರವಾಹಿ ಗಳಲ್ಲೂ ಕವಿತಾ ಕಾಣಿಸಿಕೊಳ್ಳುತ್ತಿದ್ದಾರೆ.

Comments are closed.