ನವದೆಹಲಿ: (Applications for Kailasa e-citizenship) ಹಲವಾರು ವಿವಾದಗಳಿಗೆ ಸಿಲುಕಿ, ಭಾರತದಿಂದ ಪಲಾಯನಗೈದು ಈಗ ತನ್ನದೇ ಆದ ದೇಶ “ಕೈಲಾಸ”ವನ್ನು (United Nations of Kailas) ನಿರ್ಮಸಿಕೊಂಡಿರುವ ʼಸ್ವಾಮಿʼ ನಿತ್ಯಾನಂದ (Nithyananda) ತನ್ನ ದೇಶದಲ್ಲಿ ಇ-ನಾಗರೀಕತ್ವ ಹೊಂದಲು ಅರ್ಜಿ ಆಹ್ವಾನಿಸಿದ್ದಾನೆ. ತನ್ನ ವೆಬ್‌ಸೈಟ್ gov.shrikailas.org ನಲ್ಲಿ ಇ-ನಾಗರೀಕತ್ವದ ಉದ್ದೇಶ ಹಾಗೂ ಅದರಿಂದಾಗುವ ಪ್ರಯೋಜನಗಳ ಬಗ್ಗೆ ನಿತ್ಯಾನಂದ ವಿವರವಾಗಿ ವಿವರಿಸಿದ್ದಾನೆ.
ಲೈಂಗಿಕ ಕಿರುಕುಳದ ಆರೋಪ ಸೇರಿದಂತೆ ಹಲವಾರು ಆರೋಪಗಳನ್ನು ಎದುರಿಸುತ್ತಿರುವ ನಿತ್ಯಾನಂದ ಈ ಮೊದಲು ಬೆಂಗಳೂರು ಸಮೀಪದ ಬಿಡದಿಯಲ್ಲಿ ವಾಸಿಸುತ್ತಿದ್ದ. ಆದರೆ ಈ ಆರೋಪಗಳಿಗೆ ಸಂಬಂಧಿಸಿದ ವಿಚಾರಣೆಯನ್ನು ಎದುರಿಸಲಾಗದೆ ಬೆಂಗಳೂರಿನಿಂದ ಪಲಾಯನಗೈದಿದ್ದ. ಇದಾದ ಬಳಿಕ ಇಕ್ವೆಡಾರ್‌ನ ಕರಾವಳಿಯಲ್ಲಿರುವ ದ್ವೀಪವೊಂದನ್ನು ಖರೀದಿಸಿ ಅದಕ್ಕೆ ಕೈಲಾಸ ಎಂದು ಹೆಸರಿಟ್ಟು, ಅಲ್ಲಿಯೇ ಆನ್‌ಲೈನ್ ಮೂಲಕ ಮುಗ್ದ ಜನರಿಗೆ ಪ್ರವಚನ ನೀಡುತ್ತಿದ್ದಾನೆ. ಇದೀಗ ತನ್ನ ದೇಶದಲ್ಲಿ ಇ-ನಾಗರೀಕತ್ವ ಹೊಂದಲು ಅರ್ಜಿಯನ್ನು ಆಹ್ವಾನಿಸಿದ್ದು, ಇದರ ಪ್ರಯೋಜನ ಹಾಗೂ ಉದ್ದೇಶವನ್ನು ತಿಳಿಸಿದ್ದಾರೆ.
ಕೈಲಾಸ ಸಂಸ್ಥಾನದ ಇ-ನಾಗರೀಕತ್ವ ಹೊಂದುವುದರಿಂದ ಜಗತ್ತಿನ ಪ್ರತಿಯೊಬ್ಬರಿಗೂ ಇಲ್ಲಿಯ ಸೇವೆ ಲಭ್ಯವಾಗುತ್ತದೆ. ಜಗತ್ತಿನ ಮೂಲೆ ಮೂಲೆಯಲ್ಲಿರುವ ಹಿಂದೂಗಳು ಇಲ್ಲಿಯ ನಾಗರೀಕತ್ವ ಪಡೆಯಲು ಅರ್ಹರಾಗಿರುತ್ತಾರೆ. ನಾಗರೀಕತ್ವ ಪಡೆದ ಪ್ರತಿಯೊಬ್ಬರಿಗೂ ಒಂದೊಂದು ಕಾರ್ಡ್ ನೀಡಲಾಗುತ್ತದೆ. ಇ-ನಾಗರೀಕತ್ವ ಪಡೆದ ಪ್ರತಿಯೊಬ್ಬರಿಗೂ ಅವರ ಹೆಸರಿನಲ್ಲಿ ವಿಶೇಷ ಪೂಜೆ ಮತ್ತು ಹೋಮ ಹವನಾದಿಗಳನ್ನು ಮಾಡಿಸಲಾಗುತ್ತದೆ. ವಿಶೇಷ ದರ್ಶನ ಮತ್ತು ವರಸಿದ್ಧಿಯನ್ನು ಕಲ್ಪಿಸಲಾಗುತ್ತದೆ. ಅಲ್ಲದೇ ಈ ಮೂಲಕ ನಿಮ್ಮ ಆಧ್ಯಾತ್ಮಿಕ ಅಭಿವೃದ್ಧಿಗೆ ನೆರವನ್ನು ನೀಡಲಾಗುತ್ತದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಅರಿವಿಗಾಗಿ ಓದಿಗೆ ಅದಕ್ಕೆ ಸಂಬಂಧಿಸಿದ ಅಪೂರ್ವ ಕೃತಿಗಳನ್ನು ಸಹ ನೀಡಲಾಗುವುದು ಎಂದು ನಿತ್ಯಾನಂದ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.
ಸುಳ್ಳು ಬೋಧನೆಗಳ ಮೂಲಕ ಜನರನ್ನು ಯಾವ ರೀತಿಯಲ್ಲಿ ಆಕರ್ಷಿಸಿ ದಾರಿ ತಪ್ಪಿಸಬಹುದು ಎಂಬುದಕ್ಕೆ ನಿತ್ಯಾನಂದ ಉತ್ತಮ ನಿದರ್ಶನ. ಈತನಂತೆಯೇ ಅನೇಕ ಕಳ್ಳ “ಸ್ವಾಮಿ”ಗಳು ಜನರಿಗೆ ಮಂಕು ಬೂದಿ ಎರಚಿ, ಮೋಸ, ಲೈಂಗಿಕ ಕಿರುಕುಳ ಮೊದಲಾದ ಅಪಾಧಗಳನ್ನು ಎಸಗಿ ಜೈಲು ಸೇರಿರುವುದಕ್ಕೆ ಸಾಕಷ್ಟು ನಿದರ್ಶನಗಳು ಭಾರತದಲ್ಲಿದೆ. ಭಕ್ತಿಯ ನೆಪದಲ್ಲಿ, ದೇವರ ಹೆಸರಲ್ಲಿ ಮುಗ್ಧ ಜನರನ್ನು ಯಾವ ರೀತಿಯಲ್ಲಿ ಮೋಸ ಮಾಡಬಹುದು, ಕಷ್ಟ ಪಡದೇ ಹೇಗೆ ಸುಖ ಅನುಭವಿಸಬಹುದು ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟ ಕಪಟ ಸನ್ಯಾಸಿ ನಿತ್ಯಾನಂದನಿಗೆ ಕೊನೆಗೂ ಪೊಲೀಸರು ಯಾವುದೇ ರೀತಿಯ ಶಿಕ್ಷೆ ನೀಡಲಾಗಲಿಲ್ಲ ಎಂಬುದು ಬೇಸರದ ಸಂಗತಿ.
ಇದನ್ನೂ ಓದಿ : Bus accident: ಕ್ರಿಶ್ಚಿಯನ್ ಸ್ಮಶಾನಕ್ಕೆ ಬಸ್ ಢಿಕ್ಕಿ : ಸಮಾಧಿಗಳಿಗೆ ಹಾನಿ
Applications for Kailasa e-citizenship: Nityananda invited applications for Kailasa e-citizenship