Extension of traffic fines: ವಾಹನ ಸವಾರರಿಗೆ ಗುಡ್‌ನ್ಯೂಸ್‌ : ಸಂಚಾರಿ ದಂಡ ಶೇ.50 ರಷ್ಟು ರಿಯಾಯಿತಿ, ಗಡುವು 15 ದಿನ ವಿಸ್ತರಣೆ

ಬೆಂಗಳೂರು: (Extension of traffic fines) ಟ್ರಾಫಿಕ್‌ ಸಮಸ್ಯೆಯನ್ನು ಹೋಗಲಾಡಿಸಲು, ಅಪಘಾತವನ್ನು ತಪ್ಪಿಸಲು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ. ಬಿ.ವೀರಪ್ಪ ಅವರು ಸರಕಾರಕ್ಕೆ ಸಂಚಾರಿ ಇ-ಚಲನ್‌ ನಲ್ಲಿ ದಾಖಲಾಗಿರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ. 50 ಅನ್ನು ರಿಯಾಯಿತಿ ಅವಧಿಯನ್ನು ವಿಸ್ತರಿಸಲು ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಇದೀಗ ಮತ್ತೆ ದಂಡ ಬಾಕಿ ಉಳಿಸಿಕೊಂಡ ವಾಹನ ಸವಾರರಿಗೆ ರಾಜ್ಯ ಸಂಚಾರ ಪೊಲೀಸ್‌ ಅವಕಾಶ ನೀಡಿದ್ದು, ಶೇ. 50 ರಷ್ಟು ದಂಡ ಪಾವತಿಗೆ ಇಂದಿನಿಂದ 15 ದಿನಗಳ ಕಾಲಾವಕಾಶ ನೀಡಿ ಆದೇಶಿಸಿದೆ.

ಪ್ರಸ್ತಾವನೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್‌ ಫೆ. 11 ರವರೆಗೆ ಮಾತ್ರ ಈ ವಿನಾಯಿತಿ ನೀಡಿ ಆದೇಶ ನೀಡಲಾಗಿತ್ತು. ನಂತರ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ದಂಡದ ಮೊತ್ತದಲ್ಲಿ ರಿಯಾಯಿತಿ ನೀಡಲಾದ ಅವಧಿಯನ್ನು ವಿಸ್ತರಿಸಲು ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಪೊಲೀಸ್‌ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ ನಲ್ಲಿ ಈವರೆಗೆ ದಾಖಲಾಗಿರುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ಹದಿನೈದು ದಿನಗಳವರೆಗೆ ವಿಸ್ತರಿಸಲು (Extension of traffic fines) ತೀರ್ಮಾನಿಸಲಾಗಿದೆ.

ಇದರನ್ವಯ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆಯವರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಸೂಕ್ತ ಆದೇಶವನ್ನು ಹೊರಡಿಸುವಂತೆ ಕೋರಲಾಗಿತ್ತು. ಈ ಪ್ರಸ್ತಾವನೆಯನ್ನು ವಿವಿರಿಸಿದ ಅಂಶಗಳ ಹಿನ್ನಲೆಯಲ್ಲಿ ಪೊಲೀಸ್‌ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ ನಲ್ಲಿ ಫೆ. 11 ರೊಳಗೆ ದಾಖಲಾದ ಪ್ರಕರಣಗಳಿಗೆ ಅನ್ವಯವಾಗುವಂತೆ ಬಾಕಿ ಉಳಿದ ಪ್ರಕರಣಗಳ ದಂಡದ ಮೊತ್ತದಲ್ಲಿ ಮತ್ತೊಂದು ಬಾರಿ ಶೇ. 50 ರಷ್ಟು ರಿಯಾಯಿತಿ (Extension of traffic fines) ನೀಡಿ ಸರಕಾರ ಆದೇಶ ನೀಡಿದೆ. ಈ ರಿಯಾಯಿತಿ ದರವು 15 ದಿನಗಳವರೆಗೆ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಹಿಂದೆ ಹದಿನೈದು ದಿನಗಳ ಕಾಲ ಶೇ. 50 ರಷ್ಟು ರಿಯಾಯಿತಿ ದಂಡ ಪಾವತಿಗೆ ಅವಕಾಶ ನೀಡಿದ್ದು, ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಕಳೆದ ಬಾರಿಯಂತೆಯೇ 44 ತರಹದ ನಿಯಮ ಉಲ್ಲಂಘನೆಗೆ ದಂಡದಲ್ಲಿ ರಿಯಾಯಿತಿ ನೀಡಲಾಗುವುದು.

ಇದನ್ನೂ ಓದಿ : ಮಹಿಳಾ ಪ್ರಯಾಣಿಕರನ್ನು ಸೆಳೆಯಲು ಬಿಎಂಟಿಸಿ ಪ್ಲ್ಯಾನ್: ಉಚಿತ ಪ್ರಯಾಣ ಘೋಷಣೆ

ಇದನ್ನೂ ಓದಿ : ಬಿಬಿಎಂಪಿ ಬಜೆಟ್ 2023 : ಯಾವುದಕ್ಕೆ ಎಷ್ಟು ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಇದನ್ನೂ ಓದಿ : ಬೆಂಗಳೂರಿನ ಐಬಿಸಿ ನಾಲೆಡ್ಜ್ ಪಾರ್ಕ್‌ ನಲ್ಲಿ ಟೈಗರ್ 5 ಸ್ಪೋರ್ಟ್ಸ್ ನ ಹೊಸ ಸೌಲಭ್ಯ ಪ್ರಾರಂಭ

Extension of traffic fines: Good news for motorists: 50% discount on traffic fines, deadline extended by 15 days

Comments are closed.