Yogi Adityanath : ಮೊಹಮ್ಮದ್ ಘೋರಿ ವಿರುದ್ಧ ಹೋರಾಡಿದ ರಜಪೂತ ದೊರೆ ಪೃಥ್ವಿರಾಜ್ ಚೌಹಾಣ್ ಜೀವನಾಧಾರಿತ ಸಿನಿಮಾ ಸಾಮ್ರಾಟ್ ಪೃಥ್ವಿರಾಜ್ಗೆ ಉತ್ತರ ಪ್ರದೇಶದಲ್ಲಿ ತೆರಿಗೆ ಮುಕ್ತಗೊಳಿಸಲಾಗಿದೆ. ಅಕ್ಷಯ್ ಕುಮಾರ್ ಮುಖ್ಯ ಭೂಮಿಕೆಯ ಈ ಸಿನಿಮಾದ ಸ್ಪೆಷಲ್ ಸ್ಕ್ರೀನಿಂಗ್ ಆಯೋಜಿಸಲಾಗಿದ್ದು ನಟ ಅಕ್ಷಯ್ ಕುಮಾರ್ ಜೊತೆಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಸಂಪುಟ ಸಚಿವರು ಭಾಗಿಯಾದರು. ಸ್ಪೆಷಲ್ ಸ್ಕ್ರೀನಿಂಗ್ನಲ್ಲಿ ಉತ್ತರ ಪ್ರದೇಶದ ಸಂಪುಟದ ಸದಸ್ಯರು ಭಾಗಿಯಾಗಿರುವ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಸಮಾಜವಾದಿ ಪಕ್ಷದ ನಾಯಕ ಹಾಗೂ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಯೋಗಿ ಆದಿತ್ಯನಾಥ್ಗೆ ಟ್ವಿಟರ್ನಲ್ಲಿ ಟಾಂಗ್ ನೀಡಿದ್ದಾರೆ.
ನೀವು ಹಿಂಬದಿ ಸೀಟಿನಲ್ಲಿ ಕುಳಿತಿದ್ದರೆ ಹಾಗೂ ಉಚಿತವಾಗಿ ಸಿನಿಮಾ ವೀಕ್ಷಿಸುವ ಬದಲು ಹಣಕೊಟ್ಟು ವೀಕ್ಷಿಸುತ್ತಿದ್ದರೆ ಈ ಸಿನಿಮಾ ಇನ್ನೂ ಸುಂದರ ಎನಿಸುತ್ತಿತ್ತು. ಅಲ್ಲದೇ ಇದರಿಂದ ರಾಜ್ಯದ ಬೊಕ್ಕಸಕ್ಕೂ ಯಾವುದೇ ರೀತಿ ಹಾನಿ ಉಂಟಾಗುತ್ತಿರಲಿಲ್ಲ ಎಂದು ಟ್ವಿಟರ್ನಲ್ಲಿ ಕಿಡಿಕಾರಿದ್ದಾರೆ .
ಐತಿಹಾಸಿಕ ಚಲನಚಿತ್ರವನ್ನು ವೀಕ್ಷಿಸಿದ ನಂತರ, ಉತ್ತರ ಪ್ರದೇಶದ ಪ್ರಸ್ತುತ ಸ್ಥಿತಿಯನ್ನು ಸಹ ನೋಡಲು ಕ್ಯಾಬಿನೆಟ್ ಅನ್ನು ವಿನಂತಿಸಲಾಗಿದೆ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಅಲ್ಲದೇ ಈ ಹಿಂದೆ ಮಾಡಿಟ್ಟಿರುವ ಹಿಟ್ಟಿನಿಂದ ಇಂದು ರೊಟ್ಟಿ ಮಾಡಲು ಸಾಧ್ಯವಿಲ್ಲ ಎಂದೂ ಬರೆದಿದ್ದಾರೆ
लोकभवन में सपा सरकार के बनाए ‘आधुनिक’ ऑडिटोरियम में भाजपा सरकार की कैबिनेट ‘ऐतिहासिक’ फ़िल्म देख रही है।
— Akhilesh Yadav (@yadavakhilesh) June 2, 2022
वैसे फ़िल्म पीछे बैठकर देखी जाए तो और भी अच्छी दिखती है और मुफ़्त के बजाय टिकट लेकर भी क्योंकि इससे राज्य के राजस्व का नुक़सान नहीं होता। pic.twitter.com/X91Ltscf2g
ಲಕ್ನೋದ ಲೋಕಭವನದಲ್ಲಿ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು, ಬಾಲಿವುಡ್ ನಟ ಅಕ್ಷಯ್ ಕುಮಾರ್, ನಟಿ ಮಾನುಷಿ ಚಿಲ್ಲರ್ ಹಾಗೂ ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ ಈ ಸ್ಪೆಷಲ್ ಸ್ಕ್ರೀನಿಂಗ್ನಲ್ಲಿ ಉಪಸ್ಥಿತರಿದ್ದರು.
ಸಮಾಜವಾದಿ ಪಕ್ಷದ ಸರ್ಕಾರವು ನಿರ್ಮಿಸಿದ್ದ ಆಧುನಿಕ ಸಭಾಂಗಣದಲ್ಲಿ ಬಿಜೆಪಿ ಸಂಪುಟವು ಐತಿಹಾಸಿಕ ಸಿನಿಮಾಗಳನ್ನು ಆನಂದಿಸುತ್ತಿದೆ ಎಂದು ಅಖಿಲೇಶ್ ಯಾದವ್ ಟಾಂಗ್ ನೀಡಿದ್ದಾರೆ.
ಇಂದಿನಿಂದ ದೇಶಾದ್ಯಂತ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ತೆರೆಕಂಡಿದೆ. ಅಕ್ಷಯ್ ಕುಮಾರ್ ಈ ಸಿನಿಮಾದಲ್ಲಿ ರಜಪೂತ ದೊರೆ ಪೃಥ್ವಿರಾಜ್ ಚೌಹಾಣ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾನುಷಿ ಚಿಲ್ಲರ್ ರಾಜಕುಮಾರಿ ಸಂಯೋಗಿತಾ ಪಾತ್ರದಲ್ಲಿ ನಟಿಸಿದ್ದಾರೆ. ಸಂಜಯ್ ದತ್ ಹಾಗೂ ಸೋನು ಸೂದ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನು ಓದಿ : rape hubby’s friend :ಪತಿಯೊಂದಿಗೆ ಸಲುಗೆಯಿಂದಿದ್ದ ಮಹಿಳೆಯ ಮೇಲೆ ಗ್ಯಾಂಗ್ರೇಪ್ಗೆ ಸುಪಾರಿ ಕೊಟ್ಟ ಪತ್ನಿ
ಇದನ್ನೂ ಓದಿ : Kerala HC Reunites Lesbian : ಪೋಷಕರ ಒತ್ತಡದಿಂದ ದೂರಾದ ಸಲಿಂಗಕಾಮಿಗಳನ್ನು ಒಂದುಗೂಡಿಸಿದ ಕೇರಳ ಹೈಕೋರ್ಟ್
As Yogi Adityanath Watches Movie With Akshay Kumar, Akhilesh Yadav’s Dig