Ashraf Ghani : ಅಪ್ಘಾನ್‌ ಅಧ್ಯಕ್ಷ ಅಶ್ರಫ್‌ ಘನಿ ಕೊನೆಗೂ ಪತ್ತೆ : ಮಾನವೀಯತೆಯಿಂದ ಆಶ್ರಯವೆಂದ ಯುಎಇ

ದುಬೈ : ತಾಲಿಬಾನ್‌ ದಾಳಿ ಬೆದರಿ ಪರಾರಿಯಾಗಿದ್ದ ಅಪ್ಘಾನಿಸ್ತಾನ್‌ ಅಧ್ಯಕ್ಷ ಅಶ್ರಫ್‌ ಘನಿ ಕೊನೆಗೂ ಪತ್ತೆಯಾಗಿದ್ದಾರೆ. ಓಡಿ ಬಂದ ಅಶ್ರಫ್‌ಗೆ ಮಾನವೀಯತೆಯ ನೆಲೆಯಲ್ಲಿ ಆಶ್ರಯವನ್ನು ನೀಡಿದ್ದೇವೆ ಎಂದು ಯುಎಇ ಸರಕಾರ ಹೇಳಿದೆ.

ಯುಎಇ ವಿದೇಶಾಂಗ ವ್ಯವಹಾರಗಳು ಮತ್ತು ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯ ಅಶ್ರಫ್‌ ಘನಿ ಯುಎಇಯಲ್ಲಿವುದನ್ನು ಖಚಿತ ಪಡಿಸಿದೆ. ಅಲ್ಲದೇ ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಮತ್ತು ಅವರ ಕುಟುಂಬವನ್ನು ದೇಶಕ್ಕೆ ಸ್ವಾಗತಿಸಿರುವುದಾಗಿಯೂ ಹೇಳಿದೆ.

ಅಪ್ಘಾನಿಸ್ತಾನಕ್ಕೆ ತಾಲಿಬಾನ್‌ ಉಗ್ರರು ದಾಳಿ ನಡೆಸುತ್ತಿದ್ದಂತೆಯೇ ಅಶ್ರಫ್‌ ಘನಿ ಪರಾರಿಯಾಗಿದ್ದರು. ಆರಂಭದಲ್ಲಿ ಕಜಕೀಸ್ತಾನ್‌ಕ್ಕೆ ಪರಾರಿಯಾಗಿದ್ದರು ಎಂದು ಹೇಳಲಾಗುತ್ತು. ಆದ್ರೀಗ ಅಶ್ರಫ್‌ ಘನಿ ಯುಎಇನಲ್ಲಿ ಇರುವುದು ಖಚಿಗೊಂಡಿದೆ. ಅಲ್ಲದೇ ಖುದ್ದು ಅಶ್ರಫ್‌ ಘನಿ ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದು, ತಾಲಿಬಾನ್‌ಗಳಿಂದ ದೇಶದಲ್ಲಿ ಉಂಟಾಗುತ್ತಿದ್ದ ರಕ್ತಪಾತವನ್ನು ತಪ್ಪಿಸಲು ದೇಶವನ್ನು ತೊರೆದಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ : ತಾಲಿಬಾನಿಗಳ ಸೋಷಿಯಲ್ ಮೀಡಿಯಾಗೆ ಬಿತ್ತು ಬೀಗ: ಖಾತೆ ಸ್ಥಗಿತಗೊಳಿಸಿದ ಫೇಸ್ ಬುಕ್, ಯೂಟ್ಯೂಬ್!

ಇದನ್ನೂ ಓದಿ : ತಾನೇ ಅಪ್ಘಾನ್‌ ಅಧ್ಯಕ್ಷನೆಂದು ಘೋಷಿಸಿಕೊಂಡ ಉಪಾಧ್ಯಕ್ಷ ಅಮರುಲ್ಲಾ ಸಲೇಹ್

ಇದನ್ನೂ ಓದಿ : ತಾಲಿಬಾನ್‌ಗೆ ಹೆದರಿ ದೇಶ ತೊರೆದ ಅಫ್ಗಾನಿಸ್ತಾನ ಅಧ್ಯಕ್ಷ : 129 ಭಾರತೀಯರನ್ನು ಹೊತ್ತು ಬಂದ AIR INDIA ವಿಮಾನ ….!‌

Comments are closed.