ಉತ್ತರ ಪ್ರದೇಶ : Temple For Yogi Adityanath : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವ ವಿಚಾರ ಎಲ್ಲರಿಗೆ ತಿಳಿದೇ ಇದೆ. ಇದರ ನಡುವೆ ಅಯೋಧ್ಯೆಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ಗೆ ಸಮರ್ಪಿತವಾಗುವ ದೇವಾಲಯವೊಂದು ತಲೆ ಎತ್ತಿದೆ. ಭರತಕುಂಡ್ ಬಳಿಯ ಪುರ್ವಾ ಹಳ್ಳಿಯಲ್ಲಿರುವ ಈ ದೇವಾಲಯದಲ್ಲಿ ಯೋಗಿ ಆದಿತ್ಯನಾಥ್ರ ಮೂರ್ತಿಯನ್ನು ಭಗವಾನ್ ರಾಮನಂತೆ ಚಿತ್ರಿಸಲಾಗಿದೆ. ಬಿಲ್ಲು ಹಾಗೂ ಬಾಣವನ್ನು ಹಿಡಿದಿರುವ ಯೋಗಿ ಆದಿತ್ಯನಾಥ್ ಥೇಟ್ ಶ್ರೀರಾಮನನ್ನು ಹೋಲುತ್ತಿದ್ದಾರೆ.
ಭರತ್ಕುಂಡ್ನಲ್ಲಿರುವ ಈ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಗ್ರಹದ ಎದುರು ಪ್ರತಿ ದಿನ ಎರಡು ಬಾರಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಬೆಳಗ್ಗೆ ಹಾಗೂ ಸಂಜೆ ಯೋಗಿ ಆದಿತ್ಯನಾಥ್ ವಿಗ್ರಹಕ್ಕೆ ಪೂಜೆ ಸಲ್ಲಿಸಿದ ಬಳಿಕ ಭಕ್ತರಿಗೆ ವಿಶೇಷ ಪ್ರಸಾದವನ್ನೂ ವಿತರಿಸಲಾಗುತ್ತದೆ. ಭರತ್ಕುಂಡ ಭರತನು ತನ್ನ ಸಹೋದರ ಶ್ರೀರಾಮನನ್ನು ವನವಾಸಕ್ಕೆ ತೆರಳಲು ಬೀಳ್ಕೊಟ್ಟ ಜಾಗವೆಂದು ಪ್ರತೀತಿಯನ್ನು ಪಡೆದಿದೆ. ಇದೇ ಜಾಗದಲ್ಲಿ ಇದೀಗ ಯೋಗಿ ಆದಿತ್ಯನಾಥ್ ಮಂದಿರ ನಿರ್ಮಾಣಗೊಂಡಿದೆ.
ದೇವರ ಮುಂದೆ ನಮಗೇನು ಬೇಕೆಂದು ಪ್ರಾರ್ಥಿಸುತ್ತೇವೋ ಅದೇ ರೀತಿ ನಾನು ಯೋಗಿ ಆದಿತ್ಯನಾಥ್ರ ವಿಗ್ರಹದ ಎದುರು ನನಗೆ ಏನು ಬೇಕು ಎನ್ನುವುದನ್ನು ಪ್ರಾರ್ಥಿಸುತ್ತೇನೆ, ನಿತ್ಯ ಸ್ತ್ರೋತ್ರಗಳನ್ನು ಪಠಿಸುತ್ತೇನೆ ಎಂದು ಮೌರ್ಯ ಎಂಬವರು ಹೇಳಿದ್ದಾರೆ. ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಈ ದೇವಸ್ಥಾನವನ್ನು ನಿರ್ಮಾಣ ಮಾಡಲು ಸುಮಾರು 8.5 ಲಕ್ಷ ರೂಪಾಯಿಯನ್ನು ಖರ್ಚು ಮಾಡಲಾಗಿದೆ. ಯೋಗಿ ಆದಿತ್ಯನಾಥ್ರ ಈ ವಿಶೇಷ ವಿಗ್ರಹವನ್ನು ರಾಜಸ್ಥಾನದಿಂದ ಆರ್ಡರ್ ಮಾಡಿ ತರಿಸಲಾಗಿದೆ.
ಇನ್ನು ಯೋಗಿ ಆದಿತ್ಯನಾಥ್ ದೇಗುಲ ನಿರ್ಮಾಣ ವಿಚಾರದ ಕುರಿತಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಅಖಿಲೇಶ್ ಯಾದವ್ ಮಾರ್ಮಿಕವಾದ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ. ಇವನು ಅವನಿಗಿಂತ ಎರಡು ಹೆಜ್ಜೆ ಮುಂದೆ ಹೋಗಿದ್ದಾನೆ. ಈಗ ನಮ್ಮ ಮುಂದಿರುವ ಪ್ರಶ್ನೆ, ಇಬ್ಬರಲ್ಲಿ ಮೊದಲು ಯಾರು ..? ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿ : Parents sold their own children :ಮಾಡಿದ ಸಾಲ ತೀರಿಸಲು ಹೆತ್ತ ಕಂದಮ್ಮನನ್ನೇ ಮಾರಿದ ಪೋಷಕರು
ಇದನ್ನೂ ಓದಿ : KL Rahul Record in T20 : ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸಿ ವಿಶೇಷ ದಾಖಲೆ ಬರೆದ ಕೆ.ಎಲ್ ರಾಹುಲ್
Ayodhya Resident Builds Temple For Yogi Adityanath With Life-Size Idol