Bachpan Ka Pyaar : ಜಾನೆ ಮೇರೆ ಜಾನೇಮನ್ ಬಚ್ಪನ್ ಕಾ ಪ್ಯಾರ್ ಮೇರಾ ಬೂಲ್ ನಹಿ ಜಾನಾ ರೇ ಎಂದು ಬಾಲಕನೊಬ್ಬ ಹಾಡುತ್ತಿರುವ ಹಾಡೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಹಾಡು ಎಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿತ್ತು ಅಂದರೆ ಈ ಹಾಡನ್ನು ಹಾಡಿದ್ದ ಬಾಲಕ ರಾತ್ರೋರಾತ್ರಿ ಫೇಮಸ್ ಆಗಿದ್ದ. ಬಳಿಕ ಬಾಲಿವುಡ್ ಖ್ಯಾತ ರ್ಯಾಪರ್ ಬಾದ್ಶಾ ಈ ಹಾಡನ್ನು ಹಾಗೂ ಬಾಲಕನನ್ನೇ ಬಳಸಿ ಆಲ್ಬಂ ಸಾಂಗ್ ಒಂದನ್ನು ರಿಲೀಸ್ ಮಾಡಿದ್ದರು.
ಒಂದೇ ಒಂದು ಹಾಡಿನ ಮೂಲಕ ಇಷ್ಟೊಂದು ಖ್ಯಾತಿಯನ್ನು ಗಳಿಸಿದ್ದ ಪುಟ್ಟ ಬಾಲಕ ಸಹದೇವ್ ದಿರ್ಡೋ ಮಂಗಳವಾರ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾನೆ. ಛತ್ತೀಸಗಢ ಸುಕ್ಮಾ ಜಿಲ್ಲೆಯಲ್ಲಿ ತನ್ನ ತಂದೆಯೊಂದಿಗೆ ಮೋಟಾರ್ ಬೈಕ್ನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ತಂದೆಯೊಂದಿಗೆ ತನ್ನ ಗ್ರಾಮಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಈ ಅವಘಡ ಸಂಭವಿಸಿದ್ದು ಬಾಲಕ ಸಹದೇವ್ ಬೈಕ್ನಿಂದ ಕೆಳಗೆ ಬಿದ್ದ ಪರಿಣಾಮ ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ತೀವ್ರವಾದ ರಕ್ತಸ್ರಾವ ಉಂಟಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಹದೇವ್ನನ್ನು ಹತ್ತಿರದ ಜಿಲ್ಲಾಸ್ಪತ್ರೆಗೆ ಮೊದಲು ದಾಖಲು ಮಾಡಲಾಗಿತ್ತು. ಇಲ್ಲಿ ಆತನಿಗೆ ಪ್ರಥಮ ಚಿಕಿತ್ಸೆಯನ್ನು ನೀಡಲಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ವಿನೀತ್ ನಂದಾನ್ವರ್, ಎಸ್ಪಿ ಸುನೀಲ್ ಶರ್ಮಾ ಹಾಗೂ ಎಎಸ್ಪಿ ಚಾಂಡೇಲಾ ಧಾವಿಸಿದ್ದಾರೆ.ಆಸ್ಪತ್ರೆಯಲ್ಲಿ ವೈದ್ಯರಿಂದ ಸಹದೇವ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ವೈದ್ಯರ ಸಲಹೆ ಹಿನ್ನೆಲೆಯಲ್ಲಿ ಸಹದೇವ್ನನ್ನು ಜಗ್ದಾಲುಪುರದ ನ್ಯೂರಾಲಜಿಸ್ಟ್ ಬಳಿ ಕರೆದೊಯ್ಯಲು ನಿರ್ಧರಿಸಲಾಗಿದೆ.
ಕೂಡಲೇ ಸಹದೇವ್ನ್ನು ಜಗ್ದಾಲ್ಪುರದ ಮೆಡಿಕಲ್ ಕಾಲೇಜಿಗೆ ದಾಖಲು ಮಾಡಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಸಹದೇವ್ ತಲೆಗೆ ಬಲವಾದ ಪೆಟ್ಟು ಬಿದ್ದಿರೋದ್ರಿಂದ ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : Corona Vaccine to Children : ಮಕ್ಕಳಿಗೂ ಸಿಗಲಿದೆ ಲಸಿಕೆ: ವಾಕ್ಸಿನ್ ನೀಡಲು ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್
ಇದನ್ನೂ ಓದಿ : KGF Yash New Project : ಕೆಜಿಎಫ್ 2 ನಂತರ ಯಶ್ ಏನು ಮಾಡ್ತಾರೆ ?
Bachpan Ka Pyaar Fame Sahdev Dirdo Injured in Road Accident; Critical