Glenn Maxwell RCB Captain : ಗ್ಲೆನ್‌ ಮ್ಯಾಕ್ಸ್‌ವೆಲ್‌ ಆರ್‌ಸಿಬಿ ನಾಯಕ ಎಂದ ಮಾಜಿ ಕೋಚ್ ಡೇನಿಯಲ್‌ ವೆಟ್ಟೋರಿ ‌

ಬೆಂಗಳೂರು : ಐಪಿಎಲ್ 2022 ರ ಮೆಗಾ ಹರಾಜಿಗೆ ಎಲ್ಲಾ 10 ತಂಡಗಳು ಸಿದ್ಧವಾಗಿವೆ. ಹೊಸ ತಂಡಗಳ ಜೊತೆಗೆ ಇತರ ತಂಡಗಳು ಕೂಡ ಹೊಸ ನಾಯಕನ ಹುಡುಕಾಟವನ್ನು ನಡೆಸುತ್ತಿವೆ. ಅದ್ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಈ ಋತುವಿನಲ್ಲಿ ನಾಯಕನಾಗಿ ಮುಂದುವರಿಯುವುದಿಲ್ಲ ಎಂದು ಘೋಷಿಸಿದ್ದಾರೆ. ಹಾಗಾಗಿ ಆರ್‌ಸಿಬಿ ತಂಡ ಹೊಸ ನಾಯಕನ ಹುಡುಕಾಟದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡದ ಮಾಜಿ ಕೋಚ್ ಡೇನಿಯಲ್ ವೆಟ್ಟೋರಿ ( RCB Coach Daniel Vettori ) ಅವರು ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell RCB Captain) ಅವರನ್ನು IPL 2022 ಗೆ ನಾಯಕರಾಗಲಿದ್ದಾರೆ ಎಂದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ 2022 ರ ಆವೃತ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಆವೃತ್ತಿಯ ಅಗತ್ಯವಿದೆ. ಎಂಟು ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ ನಂತರ ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಸೆಪ್ಟೆಂಬರ್‌ನಲ್ಲಿ ಘೋಷಿಸಿದರು. ಆರ್‌ಸಿಬಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ. ಅಲ್ಲದೇ 57 ಕೋಟಿ ರೂಪಾಯಿಗಳ ಹಣದೊಂದಿಗೆ ಇತರ ಆಟಗಾರರನ್ನು ಖರೀದಿಸಬೇಕಾಗಿದೆ.

ಈ ನಡುವಲ್ಲೇ ಆರ್‌ಸಿಬಿ ನಾಯಕತ್ವಕ್ಕೆ ಹಲವು ಹೆಸರುಗಳು ಕೇಳಿಬರುತ್ತಿದೆ. ಅದ್ರಲ್ಲೂ RCB ತಂಡದ ಮಾಜಿ ತರಬೇತುದಾರ ಡೇನಿಯಲ್ ವೆಟ್ಟೋರಿ ಅವರು ನಾಯಕತ್ವವನ್ನು ಗ್ಲೆನ್ ಮ್ಯಾಕ್ಸ್‌ವೆಲ್‌ ಅವರಿಗೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ವೆಟ್ಟೋರಿ ಪ್ರಕಾರ, ಫ್ರಾಂಚೈಸಿ ಹರಾಜಿನಲ್ಲಿ ಲಭ್ಯವಿರುವ ಮತ್ತೊಬ್ಬ ಆಟಗಾರನನ್ನು ಖರೀದಿಸಿ ನಾಯಕತ್ವ ನೀಡುವ ಸಾಧ್ಯತೆಯಿಲ್ಲ. ಹೀಗಾಗಿ ಕೊಹ್ಲಿಯ ಉತ್ತರಾಧಿಕಾರಿಯಾಗಿ ಮ್ಯಾಕ್ಸ್‌ವೆಲ್ ಅವರನ್ನು ನೇಮಕ ಮಾಡುವುದು ಒಳಿತು ಎಂದಿದ್ದಾರೆ. ಈಗಾಗಲೇ ಮ್ಯಾಕ್ಸ್‌ವೆಲ್‌ ಅವರಿಗೆ ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕತ್ವದ ಅನುಭವ ಅವರಿಗಿದೆ. ತಂಡಗಳು ಆಟಗಾರರನ್ನು ಉಳಿಸಿಕೊಳ್ಳುವವ ವೇಳೆಯಲ್ಲಿ ನಾಯಕನಾಗುವವರಿಗೆ ಹೆಚ್ಚಿನ ಆಧ್ಯತೆ ನೀಡುವಂತೆ ಸೂಚಿಸಿದ್ದೇವೆ ಎಂದು ವೆಟ್ಟೋರಿ ESPNCricinfo ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಐಪಿಎಲ್‌ ತಂಡಗಳು ಹರಾಜಿನಲ್ಲಿ ಯಾವುದೇ ಆಟಗಾರರನ್ನು ನಿಖರವಾಗಿ ಖರೀದಿ ಮಾಡುತ್ತೇವೆ ಎಂದು ಹೇಳುವುದು ಕಷ್ಟ ಸಾಧ್ಯ. ಹೀಗಾಗಿಯೇ ಮ್ಯಾಕ್ಸ್‌ವೆಲ್‌ ಆರ್‌ಸಿಬಿ ತಂಡದ ನಾಯಕನ ಸ್ಥಾನಕ್ಕೆ ಉತ್ತಮ ಆಯ್ಕೆಯಾಗಬಹುದು ಎಂದಿದ್ದಾರೆ. ಇನ್ನೊಂದೆಡೆಯಲ್ಲಿ ಸ್ಪೋಟಕ ಆಟಗಾರ ಎಬಿ ಡಿವಿಲಿಯರ್ಸ್‌ ಸೇವೆಯನ್ನು ಈಗಾಗಲೇ ಆರ್‌ಸಿಬಿ ತಂಡ ಕಳೆದುಕೊಂಡಿದೆ. ಕಳೆದ ನವೆಂಬರ್ 19 ರಂದು ಅವರು ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

ಮುಂದಿನ ಋತುವಿನಿಂದ ಸಂಜಯ್ ಬಂಗಾರ್ ಅವರು ಆರ್‌ಸಿಬಿ ತಂಡದ ಕೋಚ್‌ ಆಗಲಿದ್ದಾರೆ. ಹೀಗಾಗಿ ಟೀಂ ಮ್ಯಾನೇಜ್ಮೆಂಟ್‌ ಗೆಲ್ಲುವ ಕುದುರೆಗಳಿಗೆ ಮಣೆ ಹಾಕುವ ಸಾಧ್ಯತೆಯಿದೆ. ಹೀಗಾಗಿಯೇ ಎಲ್ಲಾ ಆಯಾಮಗಳಲ್ಲಿಯೂ ಯೋಚಿಸಿ ಅಳೆದು ತೂಗಿ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಯೂ ಇದೆ. ಆರ್‌ಸಿಬಿ ತಂಡ ಐಪಿಎಲ್‌ನಲ್ಲಿ ಮೂರು ಬಾರಿ ಫೈನಲ್‌ ಪ್ರವೇಶಿಸಿತ್ತು. ಆದರೆ ಒಂದೂ ಬಾರಿಯೂ ಕೂಡ ಪ್ರಶಸ್ತಿಯನ್ನು ಗೆದ್ದಿಲ್ಲ. ಜೊತೆಗೆ ಕಳೆದ ಐಪಿಎಲ್‌ನಲ್ಲಿ 18 ಪಾಯಿಂಟ್‌ಗಳೊಂದಿಗೆ ಪಾಯಿಂಟ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದರೂ ಟ್ರೋಫಿ ಗೆಲ್ಲುವಲ್ಲಿ ಎಡವಿತ್ತು.

ಇದೀಗ ಆರ್‌ಸಿಬಿ ನಾಯಕನ ಸ್ಥಾನಕ್ಕೆ ಕನ್ನಡಿಗ ಕೆ.ಎಲ್.ರಾಹುಲ್‌, ಮನೀಶ್‌ ಪಾಂಡೆ, ಶ್ರೇಯಸ್‌ ಅಯ್ಯರ್‌ ಹೆಸರುಗಳು ಕೇಳಿಬರುತ್ತಿದೆ. ಈ ನಡುವಲ್ಲೇ ಡೆನಿಯಲ್‌ ವೆಟ್ಟೋರಿ ಮ್ಯಾಕ್ಸ್‌ವೆಲ್‌ ಹೆಸರು ಸೂಚಿಸಿದ್ದಾರೆ. ಆದರೆ ಟೀಂ ಮ್ಯಾನೇಜ್ಮೆಂಟ್‌ ಇದುವರೆಗೂ ತಂಡದ ನಾಯಕನ ಹೆಸರನ್ನು ಅಧಿಕೃತಗೊಳಿಸಿಲ್ಲ. ಹೀಗಾಗಿ ಮ್ಯಾಕ್ಸ್‌ವೆಲ್‌ ನಾಯಕನಾಗ್ತಾರಾ ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ : Ahmedabad IPL 2022 : ಗ್ಯಾರಿ ಕ್ರಿಸ್ಟನ್, ಆಶಿಶ್ ನೆಹ್ರಾ, ವಿಕ್ರಮ್ ಸೋಲಂಕಿ ಸೆಳೆಯಲು ಮುಂದಾದ ಅಹಮದಾಬಾದ್‌

ಇದನ್ನೂ ಓದಿ : IPL Most Expensive Players : ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರರು ಯಾರು ಗೊತ್ತಾ ?

(RCB Coach Daniel Vettori select Glenn Maxwell as Captain for IPL 2022)

Comments are closed.