ಬೆಂಗಳೂರು : ಡೆಡ್ಲಿ ಕೊರೊನಾ ಮಹಾಮಾರಿಯ ಆರ್ಭಟ ಹೆಚ್ಚುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೊರೊನಾ ಆರ್ಭಟಕ್ಕೆ ತತ್ತರಿಸಿ ಹೋಗಿದ್ದು, ಕೊರೊನಾ ಸೋಂಕು ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆಯೂ ಏರಿಕೆಯಾಗಿದೆ.

ರಾಜಧಾನಿಯಲ್ಲಿ ಕಳೆದೊಂದು ವಾರದಿಂದಲೂ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 617ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ 4ನೇ ಸ್ಥಾನಕ್ಕೇರಿದೆ. ಈ ಪೈಕಿ 299 ಮಂದಿ ಕೊರೊನಾ ಸೋಂಕಿನ ವಿರುದ್ದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 290 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಡೆಡ್ಲಿ ಮಹಾಮಾರಿ ಸಿಲಿಕಾನ್ ಸಿಟಿಯಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಲಿ ಪಡೆದಿದೆ. ಇದುವರೆಗೂ 27 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿ ಹೋಗಿದ್ದಾರೆ. ಇದೀಗ ಕೊರೊನಾ ಮಹಾಮಾರಿ ಬೆಂಗಳೂರಿನಲ್ಲಿ ಆರ್ಭಟ ಮುಂದುವರಿಯುತ್ತಿದ್ದಂತೆಯೇ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆಯನ್ನೂ ಏರಿಕೆ ಮಾಡಲಾಗಿದೆ.

ಇದುವರೆಗೂ 113 ಕಂಟೈನ್ಮೆಂಟ್ ಝೋನ್ ಗಳಿದ್ದು ಇಂದು ಮತ್ತೆ ಹೊರಮಾವು, ಬಿಟಿಎಂ ಲೇಔಟ್ ಹಾಗೂ ಹೊಂಗಸಂದ್ರ ಏರಿಯಾ ಸೇರಿದಂತೆ ಒಟ್ಟು ಮೂರು ಹೊಸ ಕಂಟೈನ್ಮೆಂಟ್ ಏರಿಯಾವನ್ನು ವಿಸ್ತರಿಸಲಾಗಿದೆ. ಕೊರೊನಾ ಮಹಾಮಾರಿ ಹೆಚ್ಚುತ್ತಿರುವುದು ಸಿಲಿಕಾನ್ ಸಿಟಿ ಮಂದಿಗೆ ಆತಂಕವನ್ನು ಮೂಡಿಸಿದೆ.